SK Home Ad
Home ಸುದ್ದಿ Samyukta Karnataka News Live: ಸಂಪುಟ ಸಭೆ ಬೆನ್ನಲ್ಲೇ ಮೀನುಗಾರಿಕೆ ಬಂದರಿಗೆ ಸಿಎಂ ಭೇಟಿ

Samyukta Karnataka News Live: ಸಂಪುಟ ಸಭೆ ಬೆನ್ನಲ್ಲೇ ಮೀನುಗಾರಿಕೆ ಬಂದರಿಗೆ ಸಿಎಂ ಭೇಟಿ

0
69
ಸಂಪುಟ ಸಭೆ ಬೆನ್ನಲ್ಲೇ ಮೀನುಗಾರಿಕೆ ಬಂದರಿಗೆ ಸಿಎಂ ಭೇಟಿ; ಧಕ್ಕೆ ಸ್ಥಗಿತ ಕಂಡು ಗರಂ - ಅಧಿಕಾರಿಗಳ ಅಮಾನತಿಗೆ ಸೂಚನೆ

ಗಾರ್ಮೆಂಟ್ಸ್ ಯುವತಿಯನ್ನು ಬಾಂಗ್ಲಾದೇಶಕ್ಕೆ ಕರೆದೊಯ್ದು ಕಿರುಕುಳ ಆರೋಪ : ಕಲಬುರಗಿ ನಗರದ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರನ್ನು ಅದೇ ಗಾರ್ಮೆಂಟ್ಸ್‌ನಲ್ಲಿದ್ದ ಯುವಕನೊಬ್ಬ ಬಾಂಗ್ಲಾದೇಶಕ್ಕೆ ಕರೆದೊಯ್ದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. (ಮಾಹಿತಿ ಅಪ್​ಡೇಟ್ ಆಗಲಿದೆ)

ಡಿ.ಜೆ ಸೌಂಡ್‌ನಿಂದ ಮಗಳಿಗೆ ಅನಾರೋಗ್ಯ – ರಾತ್ರಿ 2ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆ : ಡಿ.ಜೆ ಸೌಂಡ್‌ನಿಂದ ತಮ್ಮ ಚಿಕ್ಕ ಮಗಳ ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ ಎಂದು ಆರೋಪಿಸಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಜೈಭೀಮ್ ವಲ್ಲಭ ಅವರು ಮಗಳನ್ನು ಎತ್ತಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಮಧ್ಯರಾತ್ರಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಗಣೇಶ ವಿಸರ್ಜನೆ ಸಂಭ್ರಮದಲ್ಲಿ ಶೋಕ: ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸ್ಥಳದಲ್ಲೇ ಸಾವು : ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಮೆರವಣಿಗೆಯಲ್ಲಿದ್ದವರ ಮೇಲೆ ಹರಿದ ಪರಿಣಾಮ ಇಬ್ಬರು ಬಾಲಕರು ಮೃತಪಟ್ಟಿರುವ ದಾರುಣ ಘಟನೆ ರಾಯಚೂರು ನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ರಾಯಚೂರು ನಗರದ ಜಹಿರಾಬಾದ್‌ನ ಎಂ. ಈರಣ್ಣ ವೃತ್ತದ ಬಳಿ ಘಟನೆ ಸಂಭವಿಸಿದ್ದು, ಮೃತರನ್ನು 14 ವರ್ಷದ ಸುಚಿತ್ ಹಾಗೂ 16 ವರ್ಷದ ಚರಣಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮಂಗಳೂರು ಮೀನುಗಾರಿಕೆ ಬಂದರಿಗೆ ಡಿಕೆಶಿ ದಿಢೀರ್ ಭೇಟಿ : ಕರಾವಳಿ ಅಭಿವೃದ್ಧಿ ಕುರಿತು ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕೆ ಬಂದರು ಪ್ರದೇಶಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಮುಖ್ಯಮಂತ್ರಿಗಳೊಂದಿಗೆ ಉಪಸ್ಥಿತರಿದ್ದರು. ಬಿಗಿ ಪೊಲೀಸ್ ಭದ್ರತೆಯ ನಡುವೆ ಧಕ್ಕೆ ಪ್ರದೇಶಕ್ಕೆ ತೆರಳಿದ ಮುಖ್ಯಮಂತ್ರಿ ಕಾಲ್ನಡಿಗೆಯಲ್ಲಿ ಬಂದರಿನ ವಿವಿಧ ಭಾಗಗಳನ್ನು ವೀಕ್ಷಿಸಿದರು. ಸಮುದ್ರದಿಂದ ಆಗಮಿಸಿದ್ದ ಮೀನುಗಾರಿಕಾ ದೋಣಿಗಳು, ಮೀನು ಇಳಿಸುವಿಕೆ ಹಾಗೂ ತಾಜಾ ಮೀನುಗಳ ವಹಿವಾಟಿನ ಕುರಿತು ಸ್ಥಳದಲ್ಲಿದ್ದವರಿಂದ ಮಾಹಿತಿ ಪಡೆದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕೌಶಲ್ಯದ ಒಲಿಂಪಿಕ್ಸ್‌ಗೆ ಧಾರವಾಡದ ಇಬ್ಬರು ಯುವಕರು : ಜಾಗತಿಕ ಕೌಶಲ್ಯ ವೇದಿಕೆಯಲ್ಲಿ ಧಾರವಾಡದ ಕೀರ್ತಿ ಮತ್ತೊಮ್ಮೆ ಮೊಳಗುವಂತಾಗಿದೆ. ರಾಯಾಪುರದಲ್ಲಿರುವ ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC)ನ ಇಬ್ಬರು ಯುವ ಪ್ರತಿಭೆಗಳು ಚೀನಾದ ಶಾಂಘೈನಲ್ಲಿ ನಡೆಯಲಿರುವ WorldSkills Competition 2026ರಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. GTTC ಧಾರವಾಡದ ವಿದ್ಯಾರ್ಥಿಗಳಾದ ಚರಣ್ ಎ.ಎಸ್. ಅವರು ಕಾಟ್ರಾನಿಕ್ಸ್ (Mechatronics) ವಿಭಾಗದಲ್ಲಿ ಹಾಗೂ ಸಿದ್ಧಾರೂಢ ಕಳ್ಳಿಹಾಳ್ ಅವರು CNC Milling ವಿಭಾಗದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.

(ಮಾಹಿತಿ ಅಪ್​ಡೇಟ್ ಆಗಲಿದೆ)