SK Home Ad
Home ಸುದ್ದಿ ರಾಜ್ಯ ಡಿಕೆ ಸರಕಾರದಲ್ಲಿ ಡಿಸಿಎಂ ಆಗಲಿದ್ದಾರೆ ಜಿ. ಪರಮೇಶ್ವರ್‌

ಡಿಕೆ ಸರಕಾರದಲ್ಲಿ ಡಿಸಿಎಂ ಆಗಲಿದ್ದಾರೆ ಜಿ. ಪರಮೇಶ್ವರ್‌

0
87

ಬೆಂಗಳೂರು: ಡಿ.ಕೆ. ಶಿವಕುಮಾರ್‌ ನೇತೃತ್ವದ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಜಿ. ಪರಮೇಶ್ವರ್‌ ಅವರು ಪ್ರಮಾಣ ವಚನ ಸ್ವೀಕರಿಸಲಿರುವುದು ಖಚಿತವಾಗಿದೆ.

ಬೆಂಗಳೂರಿನ ಲೋಕ ಭವನದಲ್ಲಿ ನಡೆಯಲಿರುವ ಸಂಜೆ 4:05ಕ್ಕೆ ನಡೆಯಲಿರುವ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಂದಿಗೆ ಪರಮೇಶ್ವರ್‌ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇವರೊಟ್ಟಿಗೆ ಇನ್ನೂ 12 ಜನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ಸಿದ್ದರಾಮಯ್ಯನವರಿಗೆ ಈ ಇಬ್ಬರೂ ನಾಯಕರು ಭೇಟಿಯಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಕುರಿತಂತೆ ಸಿದ್ದರಾಮಯ್ಯನವರು ಡಿ.ಕೆ. ಶಿವಕುಮಾರ್‌ ಮತ್ತು ಜಿ. ಪರಮೇಶ್ವರ್‌ ಅವರಿಗೆ ಶುಭ ಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.