SK Home Ad
Home ಸುದ್ದಿ ರಾಜ್ಯ ಸಕ್ಕರೆ ದಾಸ್ತಾನು ಮಿತಿಗೆ ಕೇಂದ್ರದ ಕಡಿವಾಣ, ಹಬ್ಬದ ವೇಳೆ ಬೆಲೆ ಏರಿಕೆಗೆ ಬ್ರೇಕ್

ಸಕ್ಕರೆ ದಾಸ್ತಾನು ಮಿತಿಗೆ ಕೇಂದ್ರದ ಕಡಿವಾಣ, ಹಬ್ಬದ ವೇಳೆ ಬೆಲೆ ಏರಿಕೆಗೆ ಬ್ರೇಕ್

0
39

ನವದೆಹಲಿ: ಹಬ್ಬದ ಋತುವಿನಲ್ಲಿ ಸಕ್ಕರೆ ಬೆಲೆ ಸ್ಥಿರತೆ ಕಾಪಾಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಕಟಣೆ ನೀಡಿದ್ದು, ಸಕ್ಕರೆ ವಿತರಕರ ದಾಸ್ತಾನು ಮಿತಿಯನ್ನು 4000 ಕ್ವಿಂಟಲ್‌ನಿಂದ 2000 ಕ್ವಿಂಟಲ್‌ಗೆ ಇಳಿಸಲಾಗಿದೆ. ಇದು ಸೆಪ್ಟೆಂಬರ್ 15 ರಿಂದ ನವೆಂಬರ್ 30 ರವರೆಗೆ ಜಾರಿಯಲ್ಲಿರಲಿದೆ. ಕೋಲ್ಕತ್ತಾ ಮತ್ತು ಸುತ್ತಮುತ್ತ ಮಾತ್ರ 4000 ಕ್ವಿಂಟಲ್ ಮಿತಿ ಮುಂದುವರಿಯಲಿದೆ ಎಂದಿದ್ದಾರೆ.

ಅಲ್ಲಿ ಈಶಾನ್ಯ ರಾಜ್ಯಗಳಿಗೆ ಸಕ್ಕರೆ ಪೂರೈಕೆಯಾಗುವುದರಿಂದ ವಿನಾಯಿತಿ ನೀಡಲಾಗಿದೆ. ಸಕ್ಕರೆ ಸ್ವೀಕರಿಸಿದ 30 ದಿನದೊಳಗೆ ಮಾರಾಟ ಮಾಡಬೇಕು, ಹೆಚ್ಚು ದಾಸ್ತಾನು ಇಟ್ಟರೆ ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದ್ದಾರೆ. ಸರ್ಕಾರದ ಕ್ರಮದಿಂದ ಸಕ್ಕರೆ ಬೆಲೆ ಶೇ. 20 ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.