ಶಿವಮೊಗ್ಗ: ಬಿ.ನಾಗೇಂದ್ರ ಒಂದು ಸಣ್ಣ ಮೀನು. ಇದರಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳಿವೆ. 185 ಕೋಟಿ ಹಣ ನಿಗಮಕ್ಕೆ ವಾಪಸ್ ಬರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅವರ ರಾಜೀನಾಮೆ ಮುಖ್ಯವಲ್ಲ. ಹಗರಣದಲ್ಲಿ ಶಾಮೀಲಾದ ಇತರರ ವಿರುದ್ಧವೂ ಕ್ರಮ ಆಗಬೇಕು. ಕಾಂಗ್ರೆಸ್ ಹೈಕಮಾಂಡ್‌ಗೂ ಹಣ ಹೋಗಿದೆ. ಆ ಹಣದಲ್ಲಿ ಚಿನ್ನದ ಖರೀದಿ ಸೇರಿದಂತೆ ಅನೇಕ ವ್ಯವಹಾರ ನಡೆದಿದೆ. ಇ.ಡಿ. ನಡೆಸಿರುವ ತನಿಖೆಯಲ್ಲಿ ಸಾಕಷ್ಟು ವಿಷಯಗಳು ಹೊರ ಬಂದಿವೆ. ಅಷ್ಟಕ್ಕೂ ನಾಗೇಂದ್ರರಿಗೆ ಕ್ಲಿನ್‌ಚೀಟ್ ಸಿಕ್ಕಿಲ್ಲ ಎಂದರು.
ಕಾಂಗ್ರೆಸ್‌ನವರು ತರಾತುರಿಯಲ್ಲಿ ಅವರನ್ನು ಕ್ಯಾಬಿನೆಟ್‌ಗೆ ಸೇರಿಸಿಕೊಂಡಿದ್ದಾರೆ. ಯಾರ ಒತ್ತಡದಿಂದ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರು..? ಹೈಕಮಾಂಡ್‌ನ ಒತ್ತಡ ಇಲ್ಲದೆ ಈ ರೀತಿ ಸೇರ್ಪಡೆ ಸಾಧ್ಯವಿಲ್ಲ. ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಅವರ ಪತ್ನಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ ಎಂದು ಪ್ರತಿಕ್ರಿಯಿಸಿದರು.



















