Home Advertisement
Home ಸುದ್ದಿ ದೇಶ ಓದಿದ್ದು ಇಂಜಿನಿಯರಿಂಗ್, ಮಾಡ್ತಿರೋದು ಐಟಿ ಕೆಲಸ. ರಾತ್ರಿಯಾದ್ರೆ…

ಓದಿದ್ದು ಇಂಜಿನಿಯರಿಂಗ್, ಮಾಡ್ತಿರೋದು ಐಟಿ ಕೆಲಸ. ರಾತ್ರಿಯಾದ್ರೆ…

0
42

ನೀವೆಲ್ಲಾ ಸಿನಿಮಾಗಳಲ್ಲಿ ನೋಡಿರ್ತೀರಾ ಹಗಲಿನಲ್ಲಿ ಜೆಂಟಲ್‌ಮ್ಯಾನ್ ತರ ಇರೋ ಹೀರೋ ರಾತ್ರಿ ಹೊತ್ತು ರಾಬಿನ್ ಹುಡ್ ತರ ಕಳ್ಳತನ ಮಾಡ್ತಾನೆ. ಆದ್ರೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿರೋ ಈ ನೈಜ ಕಥೆ ಕೇಳಿದ್ರೆ ನೀವು ನಿಜಕ್ಕೂ ದಂಗಾಗ್ತೀರಾ! ಹಿಂಗೂ ಉಂಟಾ? ಅಂತ ಹುಬ್ಬೇರಿಸ್ತೀರಾ.

ಹೌದು ಹೈದರಾಬಾದ್‌ನ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದ ಒಬ್ಬ ಟೆಕ್ಕಿ, ಈಗ ರಾಜ್ಯಾದ್ಯಂತ 60ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿ ಪೊಲೀಸರ ಅತಿಥಿಯಾಗಿದ್ದಾನೆ! ಈ ಹೈಟೆಕ್ ಕಳ್ಳನ ಹೆಸರು ಅಚ್ಚಿ ಮಹೇಶ್ ರೆಡ್ಡಿ ಅಲಿಯಾಸ್ ಸನ್ನಿ!

ಕೈ ತುಂಬಾ ಸಂಬಳ ಐಷಾರಾಮಿ ಜೀವನ.. ಆದ್ರೆ ಸನ್ನಿಗೆ ಅಷ್ಟಕ್ಕೇ ತೃಪ್ತಿ ಇರಲಿಲ್ಲ. ಈತನಿಗೆ ವಿದೇಶ ಪ್ರವಾಸ ಮಾಡಬೇಕು, ಕೋಟಿ ಕೋಟಿ ಬೆಲೆ ಬಾಳುವ ಬಿಎಂಡಬ್ಲ್ಯು ಕಾರಿನಲ್ಲಿ ಸುತ್ತಬೇಕು ಅನ್ನೋ ಕ್ರೇಜಿ ಆಸೆಗಳಿದ್ದವು. ಇದೇ ಆಸೆಯೇ ಈತನನ್ನ ಕಗ್ಗತ್ತಲ ಲೋಕಕ್ಕೆ ಎಳೆದುಕೊಂಡು ಹೋಯಿತು.

ಐಟಿ ಕೆಲಸ ಬಿಟ್ಟು ಪೂರ್ಣಪ್ರಮಾಣದ ಕಳ್ಳನಾಗಿ ಬದಲಾದ ಸನ್ನಿ, ವಿಶಾಖಪಟ್ಟಣದ ಪ್ರತಿಷ್ಠಿತ ಬಡಾವಣೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಅಚ್ಚರಿ ಅಂದ್ರೆ ಈತ ಕಳ್ಳತನದ ದುಡ್ಡಲ್ಲಿ ಅಸಲಿ ಬಿಎಂಡಬ್ಲ್ಯು ಕಾರನ್ನೇ ಖರೀದಿಸಿದ್ದ!

ವಿಶಾಖಪಟ್ಟಣದ ಅರಿಲೋವಾ ಗಾಜುವಾಕ ಮತ್ತು ಪೆಂಡುರ್ತಿ ಭಾಗಗಳಲ್ಲಿ ಸರಣಿ ಮನೆಗಳ್ಳತನ ನಡೆದಾಗ ಪೊಲೀಸರು ಬೆಚ್ಚಿಬಿದ್ದಿದ್ದರು. ಯಾವುದೇ ಕುರುಹು ಬಿಡದ ಈ ಕಳ್ಳನನ್ನ ಹಿಡಿಯಲು ಆಯುಕ್ತ ಶಂಕ ಬ್ರಾತ ಬಾಗ್ನಿ ವಿಶೇಷ ತಂಡ ರಚಿಸಿದರು.

ಸಿಸಿಟಿವಿ ದೃಶ್ಯಗಳನ್ನ ಜಾಲಾಡಿದಾಗ ಒಂದು ಐಷಾರಾಮಿ ಬಿಎಂಡಬ್ಲ್ಯು ಕಾರು ಅನುಮಾನಾಸ್ಪದವಾಗಿ ಓಡಾಡೋದು ಪತ್ತೆಯಾಯ್ತು. ಕಳ್ಳ ಬಿಎಂಡಬ್ಲ್ಯು ಕಾರಿನಲ್ಲಿ ಬರ್ತಾನೆ ಅಂತ ಪೊಲೀಸರು ಕನಸಿನಲ್ಲೂ ಯೋಚಿಸಿರಲಿಲ್ಲ! ಕೊನೆಗೂ ತಾಂತ್ರಿಕ ದಾಖಲೆಗಳನ್ನ ಬೆನ್ನಟ್ಟಿದ ಪೊಲೀಸರು ಸನ್ನಿಯನ್ನ ಸುತ್ತುವರೆದಾಗ ಆತ ದಂಗಾಗಿದ್ದ.

ಸನ್ನಿಯನ್ನು ವಿಚಾರಣೆ ನಡೆಸಿದಾಗ ಪೊಲೀಸರಿಗೇ ಶಾಕ್ ಕಾದಿತ್ತು! ಈತ 15ನೇ ವಯಸ್ಸಿನಲ್ಲೇ ಮೊದಲ ಬಾರಿ ಕಳ್ಳತನ ಮಾಡಿ ಬಾಲಾಪರಾಧಿ ಗೃಹಕ್ಕೆ ಹೋಗಿದ್ದ. ಅಷ್ಟೇ ಅಲ್ಲ, ರಾಜಮಂಡ್ರಿ ಜೈಲಿನಲ್ಲಿ 14 ತಿಂಗಳು ಶಿಕ್ಷೆ ಅನುಭವಿಸಿದ ಮೇಲೂ ಈತನ ಬುದ್ಧಿ ಮಾತ್ರ ಬದಲಾಗಿರಲಿಲ್ಲ. ಈತನಿಂದ ಪೊಲೀಸರು ಈಗ ಬರೋಬ್ಬರಿ 700 ಗ್ರಾಂ ಚಿನ್ನ, ಸುಮಾರು 4 ಕೆಜಿ ಬೆಳ್ಳಿ ಮತ್ತು ಆ ಬಿಎಂಡಬ್ಲ್ಯು ಕಾರನ್ನು ಸಹ ವಶಪಡಿಸಿಕೊಂಡಿದ್ದಾರೆ.

ನೋಡಿದ್ರಲ್ಲ ಓದಿರೋದು ಇಂಜಿನಿಯರಿಂಗ್, ಮಾಡ್ತಿರೋದು ಐಟಿ ಕೆಲಸ.. ಆದ್ರೆ ಗುಣ ಮಾತ್ರ ಕ್ರಿಮಿನಲ್ ಬುದ್ಧಿ! ಆಸೆಗೆ ಮಿತಿ ಇರಬೇಕು ಅನ್ನೋದಕ್ಕೆ ಈ ಸನ್ನಿಯ ಕಥೆಯೇ ದೊಡ್ಡ ಉದಾಹರಣೆ.

Previous articleಕಾಂಗ್ರೆಸ್‌ನದ್ದು ಖಾಲಿ ಟ್ರಂಕ್ ಸರ್ಕಾರ
Next articleಪರಿಸರಕ್ಕೆ ಮಾರಕವಾದ ಬೇಡ್ತಿ, ಅಘನಾಶಿನಿ ಯೋಜನೆ ಬೇಡ