NAB 75ನೇ ವಾರ್ಷಿಕೋತ್ಸವ: ದೃಷ್ಟಿಹೀನ ಸಮುದಾಯಕ್ಕೆ ನೀತಾ ಅಂಬಾನಿ 5 ಕೋಟಿ ನೆರವು

0
8

ಮುಂಬೈ: ರಾಷ್ಟ್ರೀಯ ಅಂಧಜನರಿಗೆ ಬೆಂಬಲ ನೀಡುವ ಪ್ರಮುಖ ಸಂಘ ಸಂಸ್ಥೆ National Association for the Blind (NAB) ತನ್ನ 75ನೇ ಸ್ಥಾಪನಾ ದಿನಾಚರಣೆಯನ್ನು ಅಯೋಜಿಸಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ Reliance Foundation ನ ಸ್ಥಾಪಕ-ಅಧ್ಯಕ್ಷೆ ನೀತಾ ಅಂಬಾನಿ ಅಧ್ಯಕ್ಷತೆವಹಿಸಿ ಮಾತನಾಡಿ ಸಂಸ್ಥೆಯೊಂದಿಗೆ Reliance Foundation Drishti ಯ 22-ವರ್ಷಗಳ ಸಹಭಾಗಿತ್ವವನ್ನು ಸ್ಮರಿಸಿದರು.

ಮುಂದಿನ 5 ವರ್ಷಗಳಲ್ಲಿ ದೃಷ್ಟಿಹೀನ ಸಮಾಜಕ್ಕೆ ಒಟ್ಟು ₹5 ಕೋಟಿ ಒದಗಿಸುವುದಾಗಿ ಘೋಷಣೆ ಮಾಡಿದರು, ಎರಡು ಹೊಸ ಕಾರ್ಯಕ್ರಮಗಳ ಮೂಲಕ ದೋಷರಹಿತ ಶಿಕ್ಷಣ, ಉದ್ಯೋಗ ತರಬೇತಿ ಮತ್ತು ಮಹಿಳಾ ಹಾಗೂ ವಿದ್ಯಾರ್ಥಿ ಸಮುದಾಯಗಳ ಸಬಲೀಕರಣಕ್ಕೆ ದೊರುವಂತೆ ಸಹಕಾರಿಯಾಗಲು ಎರಡು ಹೊಸ ಕಾರ್ಯಕ್ರಮಗಳನ್ನು ಘೋಷಿಸಿದರು.

ಇದನ್ನೂ ಓದಿ:  ಅಂಕಣ ಬರಹ: ಗ್ರಾಮ ಸ್ವರಾಜ್ – ಪಂಚಾಯತರಾಜ್ ಕತ್ತಿಗೆ ಕೈ

ನಾಡಿನಲ್ಲಿ ಅಂಧರ ಸಮುದಾಯದ ಮೇಲೆ ಸಾಮಾಜಿಕ ಸಮಾನಾವಕಾಶದ ಮೇಲೆ ತಮಗೆ ನಂಬಿಕೆ ಇದ್ದು, 75ನೇ ಸ್ಥಾಪನಾ ದಿನಾಚರಣೆ ಕೇವಲ ಸಂಪೂರ್ಣ ಸಾಧನೆ ಮಾತ್ರವಲ್ಲ — ಮಾನವ ಸಾಮರ್ಥ್ಯದಲ್ಲಿ ನಂಬಿಕೆಯ 75 ವರ್ಷಗಳು, ಸಮಾನಾವಕಾಶ ಮತ್ತು ಗೌರವದ ನಂಬಿಕೆಯ 75 ವರ್ಷಗಳು ಎಂದು ಹೇಳಿದರು.

ಕಾರ್ಯಕ್ರಮದ ವೇಳೆ NAB India ಸದಸ್ಯರು, ಶಿಕ್ಷಕರು, ಅಂಧರ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು. ಮುಂಬೈನಲ್ಲಿ ಭಾರೀ ಸಂಖ್ಯೆಯ ಬ್ಲೈಂಡ್ ಸಮುದಾಯದ ವ್ಯಕ್ತಿಗಳು, ಗಣ್ಯರೂ ಭಾಗವಹಿಸಿದ್ದರು.

ಇದನ್ನೂ ಓದಿ:  ರಕ್ಕಸಪುರದೋಳ್ ಹಾಡಿಗೆ ಜೋಗಿ ಪ್ರೇಮ್ ಧ್ವನಿ

ಈ ಸಂದರ್ಭದಲ್ಲಿ ಬಾಲಿವುಡ್ ನಟ John Abraham ಸಹ ಆಗಮಿಸಿ ಕಾರ್ಯಕ್ರಮಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು ಮತ್ತು NAB ಯ ವಿವಿಧ ಸಾಧಕರು, ಅವರ ಸಾಧನೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Previous articleDPL 2026: 5ನೇ ಸೀಸನ್ ಸಂಭ್ರಮಕ್ಕೆ ಸಜ್ಜಾದ ದಾಂಡೇಲಿ