SK Home Ad
Home ಸುದ್ದಿ ದೇಶ ChatGPT ’80s ಟ್ರೆಂಡ್’ ಮೂಲಕ ಸಮರ: ಎಐ ಫೋಟೋ ಬಳಸಿ ಬಿಜೆಪಿ – ಕಾಂಗ್ರೆಸ್ ಫೈಟ್!

ChatGPT ’80s ಟ್ರೆಂಡ್’ ಮೂಲಕ ಸಮರ: ಎಐ ಫೋಟೋ ಬಳಸಿ ಬಿಜೆಪಿ – ಕಾಂಗ್ರೆಸ್ ಫೈಟ್!

0
33

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಚಾಟ್‌ಜಿಪಿಟಿ (ChatGPT) 80ರ ದಶಕದ ಟ್ರೆಂಡ್ ಇದೀಗ ರಾಜಕೀಯ ಪಕ್ಷಗಳ ಅಸ್ತ್ರವಾಗಿ ಮಾರ್ಪಟ್ಟಿದೆ. ಎಐ-ರಚಿತ ಫೋಟೋಗಳನ್ನು ಬಳಸಿಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆನ್‌ಲೈನ್ ಸಮರವೇ ಶುರುವಾಗಿದೆ.

ಆರಂಭದಲ್ಲಿ ಕೇಂದ್ರ ಸಚಿವರಾದ ಕಿರಣ್ ರಿಜಿಜು ಮತ್ತು ಪಿಯೂಷ್ ಗೋಯಲ್ ಅವರಂತಹ ನಾಯಕರು ಈ ಟ್ರೆಂಡ್‌ಗೆ ತಕ್ಕಂತೆ ತಮ್ಮ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದರು. ಆದರೆ, ಶೀಘ್ರದಲ್ಲೇ ಇದು ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಯಿತು.

ಕೇರಳ ಕಾಂಗ್ರೆಸ್ ಘಟಕವು ಎಐ ರಚಿಸಿದ ಫೋಟೋವೊಂದನ್ನು ಪೋಸ್ಟ್ ಮಾಡಿ, ಅದರಲ್ಲಿ ಬೊಕ್ಕತಲೆಯ ವ್ಯಕ್ತಿಯೊಬ್ಬ ಮಾರುತಿ ಓಮ್ನಿ ಕಾರಿನಲ್ಲಿ ಕುಳಿತಿರುವ ಚಿತ್ರವನ್ನು ಹಂಚಿಕೊಂಡಿತ್ತು. ಅದಕ್ಕೆ, “80ರ ದಶಕದ ಗುಜರಾತ್ ರಸ್ತೆ” ಎಂದು ಶೀರ್ಷಿಕೆ ನೀಡಿತ್ತು (ಓಮ್ನಿ ಕಾರು ಸಿನಿಮಾಗಳಲ್ಲಿ ಕಿಡ್ನ್ಯಾಪ್‌ಗೆ ಹೆಸರಾಗಿತ್ತು). ಇದು ಪರೋಕ್ಷವಾಗಿ ಗುಜರಾತ್ ಮೂಲದ ವಿರೋಧಿಗಳನ್ನು (ಬಿಜೆಪಿ ನಾಯಕರನ್ನು) ಗುರಿಯಾಗಿಸಿತ್ತು ಎಂದು ನೆಟ್ಟಿಗರು ವಿಶ್ಲೇಷಿಸಿದ್ದಾರೆ.

ಇದಕ್ಕೆ ತಕ್ಕ ತಿರುಗೇಟು ನೀಡಿದ ತೆಲಂಗಾಣ ಬಿಜೆಪಿ ಘಟಕ, ಬಾರ್‌ನ ಟೇಬಲ್ ಮೇಲೆ ಮಹಿಳೆಯೊಬ್ಬಳು ಕೆಂಪು ಉಡುಪಿನಲ್ಲಿ ನೃತ್ಯ ಮಾಡುತ್ತಿರುವ ಎಐ ರಚಿತ ಫೋಟೋವನ್ನು ಶೇರ್ ಮಾಡಿದೆ. ಅದಕ್ಕೆ “ಲುಸಿಯಾನಾ, ಇಟಲಿ. ಸುಮಾರು-1970 ರ ದಶಕ” ಎಂದು ಶೀರ್ಷಿಕೆ ನೀಡಿದೆ. ಇದು ಪರೋಕ್ಷವಾಗಿ ಸೋನಿಯಾ ಗಾಂಧಿ ಅವರ ಜನ್ಮಸ್ಥಳವನ್ನು ಗುರಿಯಾಗಿಸಿ ಮಾಡಲಾದ ಪೋಸ್ಟ್ ಆಗಿದೆ.

ಒಟ್ಟಿನಲ್ಲಿ, ಬಣ್ಣದ ಬಟ್ಟೆಗಳು, ಹಳೆಯ ಕ್ಯಾಮೆರಾ ಲುಕ್ ಮತ್ತು ಫೇಡೆಡ್ ಹಿನ್ನೆಲೆಯನ್ನು ಒಳಗೊಂಡ ಈ ಮೋಜಿನ ’80s ವೈಬ್’ ಟ್ರೆಂಡ್, ಈಗ ರಾಜಕೀಯ ಪಕ್ಷಗಳ ನಡುವಿನ ಡಿಜಿಟಲ್ ವಾರ್ ಆಗಿ ಬದಲಾಗಿದೆ!