ಸಿಟ್ಟು ತನ್ನ ವೈರಿ, ಶಾಂತಿ ಪರರ ವೈರಿ

0
16

ಮನುಷ್ಯ ತನ್ನ ಬದುಕಿನಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಬೇಕೆಂದರೆ ಸಹನಶೀಲತೆಯಿಂದ ನಡೆದುಕೊಳ್ಳುವದು ಅತಿ ಮುಖ್ಯವಾಗಿದೆ.
ಜೀವನದಲ್ಲಿ ಅನೇಕ ಎಡರು ತೊಡರು ಕಷ್ಟ ನಷ್ಟಗಳು ಬರುತ್ತಲೇ ಇರುತ್ತವೆ. ಆದರೆ ಅದಕ್ಕೆ ನಾವು ಎದೆಗುಂದದೇ ತಾಳ್ಮೆಯಿಂದ ಎದುರಿಸಿ ಮುನ್ನಡೆಯಬೇಕು.
ಆದರೂ ಒಮ್ಮೊಮ್ಮೆ ಸಣ್ಣ ಸಣ್ಣ ವಿಷಯಕ್ಕೆ ಸಿಟ್ಟು ಮಾಡಿಕೊಂಡು ಮುಂದೆ ಆಗುವ ದೊಡ್ಡ ಲಾಭ ಕಳೆದುಕೊಳ್ಳುತ್ತೇವೆ. ಸಿಟ್ಟು ಉತ್ತಮ ಸಂಬಧ ಹಾಳು ಮಾಡಿ ವೈರತ್ವಕ್ಕೆ ಪ್ರೇರಣೆಯಾಗುತ್ತದೆ. ಬಡವನ ಸಿಟ್ಟು ದವಡೆಗೆ ಮೂಲಕ ಎಂಬ ಗಾದೆ ಮಾತಿನಂತೆ ಅಸಾಹಕನಿದ್ದು ಸಿಟ್ಟು ಮಾಡಿಕೊಂಡರೇ. ಪ್ರಯೋಜನೆ ಇಲ್ಲ. ಅದು ನಮಗೆ ಕೇಡು ಸಿಟ್ಟು ನುಂಗಿ ತಾಳ್ಮೆಯಿಂದ ಇರುವುದು ಉತ್ತಮರ ಲಕ್ಷಣ. ಕುರ್-ಆನ್‌ದ ಒಂದು ಶ್ಲೋಕ ಹೀಗೆ ಹೇಳುತ್ತದೆ. ಇನ್ನಲ್ಲಾ ಹಾ ಮಾ ಸಾಬರೀ ಅಂದರ್ ಸಹನೆಯ ಜೊತೆಗೆಯೇ ದೇವರಿದ್ದಾನೆ. ಎಂಬಂರ್ಥ ಏರಿದವ ಇಳಿದಾನು ತಾಳಿದವ ಬಾಳಿಯಾನು ಎಂದು ಅನುಭವಿಗಳು ಹೇಳುತ್ತಲಳೇ ಬಂದಿದ್ದಾರೆ. ಸಬರ ಕಾ ಫಲ ಮೀಠಾ ಹೋತಾ ಹೈ ಎಂದು ಹೇಳುತ್ತದೆ. ಸಿಟ್ಟು ಮಾಡುವದರಿಂದ ರಕ್ತ ಕಡಿಮೆಯಾಗುತ್ತ ಹೋಗುತ್ತದೆ. ರಕ್ತದೊತ್ತಡ ಹೆಚ್ಚಾಗುತ್ತ ಹೋಗುತ್ತದೆ. ಅನೇಕ ರೋಗಳಿಗೆ ಅಹ್ವಾನ ನೀಡಿದಂತಾಗುತ್ತದೆ. ಹೀಗಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ತಪ್ಪುತ್ತದೆ. ಸಿಟ್ಟು ಮಾಡಿಕೊಳ್ಳುವದರಿಂದ ಬುದ್ಧಿ ವಿಚಲಿತವಾಗುತ್ತದೆ. ಮನುಷ್ಯ ಮಾಡಬಾರದ ಕೃತ್ಯ ಮಾಡಿ ಸಮಾಜದಲ್ಲಿ ಗೌರವ ಕಳೆದುಕೊಳ್ಳುತ್ತಾನೆ. ಅದುದರಿಂದ ನಾವು ಎಷ್ಟೇ ಸಂದಿಗ್ಧ ಪರಿಸ್ಥಿತಿ ಬಂದರೂ ಎದೆಗುಂದದೇ ತಾಳ್ಮೇಯಿಂದ ಎದುರಿಸಿ ಸಹನಶೀಲತೆಯಿಂದ ವರ್ತಿಸಿದಾಗ ಮಾತ್ರ ತಾನೂ ಸುರಕ್ಷಿತ ತನ್ನ ಕುಟುಂಬವೂ ಸುರಕ್ಷಿತ. ಸಮಾನದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಲು ಸಾಧ್ಯ. ಅಕಸ್ಮಾತ ನಮಗೆ ಸಿಟ್ಟು ಬಂದರೆ ಬುದ್ಧಿಗೆ ಕೆಲಸ ಕೊಡಬೇಕು. `ಹೇ ಮನುಷ್ಯ ನೀನು ಏನು ಮಾಡುತ್ತಾ ಇದ್ದೀಯಾ..’ ಎಂದು ಬುದ್ಧಿ ಗುದ್ದಿ ಹೇಳಬೇಕು. ಅದಷ್ಟು ತಾಳ್ಮೆಯಿಂದ ಬುದ್ಧಿ ಉಪಯೋಗಿಸಿ ವಿವೇಚನೆ ಇಟ್ಟುಕೊಂಡು ಕೆಲಸ ಮಾಡಬೇಕು. ಇತರರೊಡನೆ ವ್ಯವಹರಿಸಬೇಕು. ಸಮಾಧಾನ ಎಲ್ಲಕ್ಕಿಂತ ಮಿಗಿಲು. ಸಹನೆ ಗುಣ ವಿದ್ದಲ್ಲಿ ಸಿಟ್ಟನ್ನು ದೂರವಿಡಬಹುದು.

Previous articleಮಣಿಪುರ ಪ್ರಕ್ಷುಬ್ಧ ಸಂಧಾನವೇ ಪರಿಹಾರ
Next articleವಾಟ್ಸಾಪ್‌ ಆಕ್ಷೇಪಾರ್ಹ ಸ್ಟೇಟಸ್‌: ಬಿಜೆಪಿ ಕಾರ್ಯಕರ್ತನ ಬಂಧನ