ಸತ್ಯದ ಪಥದಲ್ಲಿ ನಡೆದರೆ ಏನು ಆಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಯಾವಾಗಲೂ ಒಳ್ಳೆಯ ವಿಚಾರವನ್ನೇ ಮಾತನಾಡುತ್ತಿದ್ದರೆ ಏನು ಮಾತಾಡಿದರೂ ಅದು ಒಳ್ಳೆಯ ವಿಚಾರವೇ ಆಗುತ್ತಾ ಹೋಗುತ್ತದೆ. `ಯದ್ಭಾವಂ ತತ್ಭವತಿ ..’ಸತ್ಯವನ್ನು ಮಾತಾಡುವ ನಿಯಮ ಇಟ್ಟುಕೊಳ್ಳಬೇಕು. ಆ ಸತ್ಯದೊಳಗೆ ಪರಮ ಸತ್ಯವಾದ ಪರಮಾತ್ಮನ ಮಹಿಮೆ ಅದನ್ನು ಕೊಂಡಾಡಿಕೊಂಡುವಂತಹ ಜಪ, ಸ್ತ್ರೀಯರು ಹರಿಕಥಾಮೃತಸಾರವನ್ನು ಭಕ್ತಿ ಪೂರ್ವಕವಾಗಿ ಅನುಸಂಧಾನ ಪೂರ್ವಕವಾಗಿ ಹೇಳುತ್ತಾ ಭಗವಂತನ ಅನುಗ್ರಹವನ್ನು ಪಡೆಯಬೇಕು.
ಭಗವಂತನ ಸೇವೆಯನ್ನು ಮಾಡಿ ತಂದೆ ತಾಯಿಗಳ ಸೇವೆಯನ್ನು ಮಾಡುತ್ತಾ ಇರುವಂತಹ ಯುವತಿಯರು ಮಂತ್ರಗಳ ಜಪವನ್ನು ಮಾಡಬೇಕು. ಅದರಲ್ಲೂ ವಿಶೇಷವಾಗಿ ಶಾಸ್ತ್ರಗಳನ್ನು ಅಧ್ಯಯನ ಮಾಡಿ ವಿಶೇಷವಾದ ಶಾಸ್ತ್ರ ಶ್ರವಣಗಳನ್ನು ಮಾಡಿಕೊಂಡು ಭಗವಂತನ ಜ್ಞಾನವನ್ನು ತಾವು ಪಡೆದು ನಾಲ್ಕು ಜನರಿಗೆ ತಿಳಿಸುವಂತಹ ಯುವಕರು ಸಮಾಜದಲ್ಲಿ ಬೇಕಿದೆ. ಕೇವಲ ಯಾವುದನ್ನು ಓದಿ ಅದರಲ್ಲಿ ಕಾಲ ಕಳೆದು ಜನ್ಮವಿಡಿ ವ್ಯರ್ಥ ಮಾಡಿದೆ ತಕ್ಕಮಟ್ಟಿಗಾದರೂ ತನ್ನ ಧರ್ಮವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು.
ಅಖಂಡವಾಗಿ ಶತ್ರುಗಳ ಧ್ಯಾನ ಮಾಡದೇ ಸಚ್ಚಾರಿತ್ರ್ಯದ ಕಡೆಗೆ ಒಯ್ಯುವಂಥ ಜ್ಞಾನಾತ್ಮಕ ವಿಚಾರಗಳನ್ನು ರೂಢಿಯಲ್ಲಿಟ್ಟುಕೊಳ್ಳಬೇಕು. ಬೇಡ ದಿನಕ್ಕೆ ಒಂದು ಗಂಟೆಯಾದರೂ ಅಥವಾ ವಾರಕ್ಕೆ ಒಂದು ದಿನವಾದರೂ ಒಂದು ಗಂಟೆಯಾದರೂ ಅಧ್ಯಯನ ಮಾಡಬಹುದಲ್ಲ, ಅಷ್ಟನ್ನಾದರೂ ಮಾಡುತ್ತಿದ್ದೇವೆಯೇ? ಎಂದು ನಮ್ಮ ಸ್ವ ಪರಾಮರ್ಶ ಮಾಡಿಕೊಳ್ಳಬೇಕು. ಯಾರು ಯಾರು ಧರ್ಮದ ಮಾರ್ಗದಲ್ಲಿ ಮುಂದುವರೆದಿಲ್ಲ ಅವರೆಲ್ಲರೂ ಬಾಲಕರೇ. ನನ್ನ ಮೇಲೆ ನಿತ್ಯದಲ್ಲಿ ಜಪ ಮಾಡುತ್ತೇನೆ ಸಂಧ್ಯಾವಂದನೆ ಮಾಡುತ್ತೇನೆ. ಸದಾಚಾರದಲ್ಲಿ ನಡೆಯುತ್ತಿದ್ದೆನೆ. ಸಾಧ್ಯವಾದರೆ ವಾರಕ್ಕೆ ಒಂದು ದಿನವಾದರೂ ಶಾಸ್ತ್ರ ಶ್ರವಣ ಮಾಡುತ್ತೇನೆ ಎಂದು ಸಂಕಲ್ಪ್ ಮಾಡಿ. ಲೌಕಿಕವಾದ ಸುಖ ಸುಖಗಳ, ನಾನಾ ವಿಧವಾದ ಮನಸ್ಸಿಗೆ ಬಂದಂತಹ ಪ್ರವೃತ್ತಿ ಇದೆ ಆ ಎಲ್ಲಾ ದುಷ್ಕಾಮಗಳನ್ನ ಸುಟ್ಟುಬಿಡುವ ಎಂದು ಸಂಕಲ್ಪ ಮಾಡಿ. ನನಗೆ ತಿಳಿದಂತಹ ತಮ್ಮ ಗೆಳೆಯರಿಗೆ ತಮ್ಮ ತಮ್ಮ ಸಂಬಂಧಿಗಳನ್ನು ಈ ಸನ್ಮಾರ್ಗದಲ್ಲಿ ಮಾರ್ಗದಲ್ಲಿ ಕರೆದುಕೊಂಡು ಬರುತ್ತೇನೆ ಎಂದು ಸಂಕಲ್ಪ ಮಾಡಿ ಆಗ ಸಮಾಜಕ್ಕೂ ಹಿತ. ದೇಶಕ್ಕೂ ಮತ್ತು ಜಗತ್ತಿಗೂ ಹಿತ.