ಪ್ರಧಾನಿ ನಿವಾಸಕ್ಕೆ ದೀಪಜ್ಯೋತಿ ಆಗಮನ: ಸಂತಸ ಹಂಚಿಕೊಂಡ ಮೋದಿ

0
18

ನವದೆಹಲಿ: ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ಹೊಸ ಸದಸ್ಯರೊಬ್ಬರು ಬಂದಿದ್ದಾರೆ.
ಈ ಮಾಹಿತಿಯನ್ನು ಮೋದಿಯವರು ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಸಮೇತ ಹಂಚಿಕೊಂಡಿದ್ದು ವಿಡಿಯೋ ವೈರಲ್‌ ಆಗಿದೆ, ಅವರು ತಮ್ಮ ಪೋಸ್ಟ್‌ನಲ್ಲಿ ಪ್ರಧಾನಿ ನಿವಾಸದಲ್ಲಿ ಪ್ರೀತಿಯ ಹಸು ಮುದ್ದಾದ ಕರುವಿಗೆ ಜನ್ಮ ನೀಡಿದೆ, ಅದರ ಹಣೆಯ ಮೇಲೆ ಬೆಳಕಿನ ಸಂಕೇತವಿದೆ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ. ಹಾಗಾಗಿ ಅದಕ್ಕೆ ‘ದೀಪಜ್ಯೋತಿ’ ಎಂದು ಹೆಸರಿಟ್ಟಿದ್ದೇನೆ ಎಂದಿದ್ದಾರೆ, ಪ್ರಧಾನಿ ಮೋದಿ ಅವರು ನವಜಾತ ಕರುವನ್ನು ಪ್ರಾರ್ಥನೆ ಮತ್ತು ಪ್ರೀತಿಯಿಂದ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಕರುವಿನೊಂದಿಗೆ ಮುದ್ದಾಡುವುದು ಮತ್ತು ಆಟವಾಡುವುದು, ಅದರ ಹಣೆಯ ಮೇಲೆ ಚುಂಬನ ನೀಡುರವ ಹಾಗೂ ಕರುವನ್ನು ಹಿಡಿದುಕೊಂಡು ತಮ್ಮ ನಿವಾಸದ ಉದ್ಯಾನದಲ್ಲಿ ಅಡ್ಡಾಡಿರುವ ವಿಡಿಯೋ ವೈರಲ್‌ ಆಗಿದೆ.

Previous articleತುಮಕೂರಿಗೆ 70 ಕೋಟಿ ರೂ. ವೆಚ್ಚದ ಕಾರ್ಡಿಯಾಲಜಿ ಕೇಂದ್ರ
Next articleಧಾರವಾಡ ಕೃಷಿ ಮೇಳ: ಅನ್ನದಾತನ ಹಬ್ಬಕ್ಕೆ ಸಜ್ಜಾದ ಕೃಷಿ ವಿವಿ