ಬೆಂಗಳೂರು: ಖಾಸಗೀ ಆಂಬ್ಯುಲೆನ್ಸ್ ಚಾಲಕ ಹರೀಶ ಅವರಿಗೆ ನೆಲಮಂಗಲ ಪೊಲೀಸ್‌ರು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದು ಪೊಲೀಸರೊಂದಿಗೆ ಸೇರಿ ವಾರಸುದಾರರಿಲ್ಲದ ಮೃತ ದೇಹಗಳನ್ನು ಉಚಿತವಾಗಿ ಸಾಗಿಸಿ ಸ್ಮಶಾನದಲ್ಲಿ ಅನಾಥ ಶವಗಳನ್ನು ಅಂತ್ಯಸಂಸ್ಕಾರ ಮಾಡಿದ ಖಾಸಗೀ ಆಂಬ್ಯುಲೆನ್ಸ್ ಚಾಲಕ ಹರೀಶ ಎಂಬುವರ ಕಾರ್ಯವೈಖರಿಯನ್ನು ಮೆಚ್ಚಿ ನೆಲಮಂಗಲ ಟೌನ್ ಠಾಣಾ ಇನ್ಸ್ಪೆಕ್ಟರ್ SD ಶಶಿಧರ್ ಅವರು ಸನ್ಮಾನಿಸಿ ಅಭಿನಂದಿಸಲಾಯಿತು ಎಂದಿದ್ದಾರೆ.