SK Home Ad
Home ನಮ್ಮ ಜಿಲ್ಲೆ ಚರ್ಚೆಗೆ ನಾನು ಸದಾ ಸಿದ್ಧ: ಸತೀಶ ಜಾರಕಿಹೊಳಿ

ಚರ್ಚೆಗೆ ನಾನು ಸದಾ ಸಿದ್ಧ: ಸತೀಶ ಜಾರಕಿಹೊಳಿ

0
144
satish_jarkiholi

ಗೋಕಾಕ: ಯಮಕನಮರಡಿಯಲ್ಲಿ ಬುಧವಾರ ನಡೆದ ನಾನು ಹಿಂದೂ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ನೀಡಿದ ಓಪನ್ ಚಾಲೆಂಜನ್ನು ಸ್ವೀಕರಿಸುವುದಾಗಿ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಂದಿನ ಕಾರ್ಯಕ್ರಮದಲ್ಲಿಯೇ ನಾನು ಈ ಬಗ್ಗೆ ಮುಕ್ತ ಚರ್ಚೆಯಾಗಬೇಕು ಎಂದು ಹೇಳಿಕೆ ನೀಡಿದ್ದೆ. ಇಂದಿನ ದಿನಕ್ಕೆ ಇಂತಹ ಚರ್ಚೆ ಅಗತ್ಯವಿದ್ದು, ನಿನ್ನೆಯ ಕಾರ್ಯಕ್ರಮದಲ್ಲಿ ಸೂಲಿಬೆಲೆಯವರು ಚರ್ಚೆ ನಡೆಸುವುದಕ್ಕೆ ಸಿದ್ಧ ಎಂದಿದ್ದಾರೆ. ಈ ಬೆಳವಣಿಗೆಯನ್ನು ಸ್ವಾಗತಿಸುತ್ತೇನೆ. ಆದರೆ ಅವರು ಓಪನ್ ಚಾಲೆಂಜ್ ನೀಡುವುದಕ್ಕೆ ಮುನ್ನವೇ ತಾವು ಚರ್ಚೆಗೆ ಕರೆ ಕೊಟ್ಟಿದ್ದನ್ನು ಸತೀಶ ನೆನಪಿಸಿದರು.
ಸೂಲಿಬೆಲೆಯವರ ಭಾಷಣವನ್ನು ನಾನು ಕೇಳಿಲ್ಲ. ಆದರೆ ಅವರು ಚರ್ಚೆಗೆ ಬರುವುದಾದರೆ ನಾವು ಸದಾ ಸಿದ್ಧ. ಸಮಾಜಕ್ಕೆ ಇತಿಹಾಸದ ಸತ್ಯಾಸತ್ಯತೆಗಳ ಅರಿವು ಮೂಡಬೇಕಾದರೆ ಇಂತಹ ಆರೋಗ್ಯಕರ ಚರ್ಚೆ ನಡೆಯಬೇಕು ಎಂದರು.