Home Advertisement
Home ಸಿನಿ ಮಿಲ್ಸ್ ಕನ್ನಡ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಟ್ಟ ‘ಯಾರೇ ನೀನು ಚೆಲುವೆ’ ನಟಿ

ಕನ್ನಡ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಟ್ಟ ‘ಯಾರೇ ನೀನು ಚೆಲುವೆ’ ನಟಿ

0
68

ಭಾಗ್ಯ ಪಾತ್ರದ ಮೂಲಕ ಸ್ಯಾಂಡಲ್ ವುಡ್‌ಗೆ ಸಂಗೀತ ಕಂಬ್ಯಾಕ್… ಸುದೀಪ್ ಶಿಷ್ಯನ ಸಿನಿಮಾದಲ್ಲಿ ಯಾರೇ ನೀನು ಚೆಲುವೆ ನಟಿ

‘ಯಾರೇ ನೀನು ಚೆಲುವೆ’ ಚಿತ್ರದ ಮೂಲಕ ಕನ್ನಡ ಚಿತ್ರಪ್ರೇಮಿಗಳ ಮನಗೆದ್ದಿದ್ದ ನಟಿ ಸಂಗೀತ ಮಾಧವನ್ ದೀರ್ಘ ವಿರಾಮದ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಹೊಸ ತಂಡವೊಂದರ ಮೂಲಕ ಅವರು ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ತಮ್ಮ ಹೊಸ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಕಿಚ್ಚ ಸುದೀಪ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಿರಣ್ ವಿಶ್ವನಾಥ್ ಇದೀಗ ನಿರ್ದೇಶಕನಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಈ ಹಿಂದೆ ‘ರನ್ನ’ ಮತ್ತು ‘ವಿಕ್ಟರಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವರು, ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ತಮ್ಮ ಚೊಚ್ಚಲ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿಯೇ ಸಂಗೀತ ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕಾಶಿಯಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿಸಿದ ‘ಲಕ್ಷ್ಮಿಪುತ್ರ’..

ಈ ಸಿನಿಮಾದಲ್ಲಿ ಸಂಗೀತ ಮಾಧವನ್ ‘ಭಾಗ್ಯ’ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ನಾಯಕಿಯ ತಾಯಿಯಾಗಿ ಪ್ರಮುಖ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಚಿತ್ರತಂಡ ‘ಮಹಾನಟಿ’ ಖ್ಯಾತಿಯ ನಟಿ ಪ್ರಿಯಾಂಕಾ ಆಚಾರ್ ಅವರನ್ನು ನಾಯಕಿಯಾಗಿ ಪರಿಚಯಿಸಿತ್ತು. ಇದೀಗ ಸಂಗೀತ ಮಾಧವನ್ ಅವರ ಸೇರ್ಪಡೆ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ತಮ್ಮ ಸ್ಯಾಂಡಲ್‌ವುಡ್ ರೀ ಎಂಟ್ರಿ ಹಾಗೂ ಪಾತ್ರದ ಬಗ್ಗೆ ಮಾತನಾಡಿರುವ ಸಂಗೀತ ಮಾಧವನ್, “ಇಷ್ಟು ವರ್ಷಗಳ ಬಳಿಕ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಗೌರಿ ಆರ್ಟ್ಸ್ ಬ್ಯಾನರ್‌ನವರು ನನ್ನನ್ನು ಈ ಚಿತ್ರಕ್ಕೆ ಸಂಪರ್ಕಿಸಿದರು. ಕಥೆ ಮತ್ತು ಪ್ರೊಡಕ್ಷನ್ ಎರಡೂ ನನಗೆ ತುಂಬಾ ಇಷ್ಟವಾಯಿತು. ನಿರ್ದೇಶಕರು ತುಂಬಾ ಎನರ್ಜಿ ಹೊಂದಿರುವವರು. ಚಿತ್ರದ ಕಂಟೆಂಟ್ ಮತ್ತು ಸಂದೇಶ ನನಗೆ ಮನಸ್ಸಿಗೆ ತಟ್ಟಿತು. ನಾನು ನಟಿಸುತ್ತಿರುವ ಭಾಗ್ಯ ಪಾತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಆಕೆ ಸದಾ ಪಾಸಿಟಿವ್ ಆಗಿರುತ್ತಾಳೆ” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ʼವಲವಾರʼ ಮೆಚ್ಚಿದ ಚಿತ್ರರಂಗ: ಕವಿರಾಜ್ ಬೆಂಬಲ, ಸುತನ್ ಗೌಡ ಸಾಧನೆಗೆ ಪ್ರಶಂಸೆ

ಇಡೀ ಚಿತ್ರತಂಡ ಅತ್ಯಂತ ಸಕ್ರಿಯವಾಗಿ ಹಾಗೂ ಹಾರ್ಡ್ ವರ್ಕ್‌ನೊಂದಿಗೆ ಕೆಲಸ ಮಾಡುತ್ತಿದೆ. ಈ ತಂಡದ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆ ಹಾಗೂ ಸಂತೋಷ ತಂದಿದೆ ಎಂದು ಅವರು ಹೇಳಿದರು.

ಸದ್ಯಕ್ಕೆ ಈ ಸಿನಿಮಾದ ನಾಯಕನ ಹೆಸರನ್ನು ಚಿತ್ರತಂಡ ರಹಸ್ಯವಾಗಿಯೇ ಇಟ್ಟಿದೆ. ನಾಯಕನನ್ನು ದೊಡ್ಡ ಮಟ್ಟದಲ್ಲಿ ಪರಿಚಯಿಸುವ ಯೋಜನೆಯನ್ನು ತಂಡ ರೂಪಿಸಿಕೊಂಡಿದೆ. ಶೀಘ್ರದಲ್ಲೇ ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

ಇದನ್ನೂ ಓದಿ: CCL ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಲ್ಲ : ಅಭಿಮಾನಿಗಳಿಗೆ ತಂಡ ಸೇರುವ ಅವಕಾಶ

ಗೌರಿ ಆರ್ಟ್ಸ್ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಹೊಸ ತಂಡದ ಪ್ರಯತ್ನವಾಗಿ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹಂತ ಹಂತವಾಗಿ ಮಾಹಿತಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ಸಂಗೀತ ಮಾಧವನ್ ಅವರ ಮರಳಿಕೆಯಿಂದಾಗಿ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿದ್ದು, ಈ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.

Previous articleMETRO ದರ ಏರಿಕೆ ವಿರುದ್ಧ ಖಾಲಿ ಟ್ರಂಕ್‌ ಹಿಡಿದು ತೇಜಸ್ವಿ ಪ್ರತಿಭಟನೆ
Next articleParikshaPeCharcha26: ಹುಬ್ಬಳ್ಳಿಯ ಪೋಷಕಿ ಸ್ನೇಹಾ ರಾಣೆಬೆನ್ನೂರು ಅನುಭವಕ್ಕೆ ಸಚಿವ ಪ್ರಲ್ಹಾದ್ ಜೋಶಿ ಮೆಚ್ಚುಗೆ