Home Advertisement
Home ಸಿನಿ ಮಿಲ್ಸ್ ‘ಹೃದಯಂ’: ಇದು ‘ಉಡಾಳ’ನ ಹೃದಯದ ವಿಷಯ

‘ಹೃದಯಂ’: ಇದು ‘ಉಡಾಳ’ನ ಹೃದಯದ ವಿಷಯ

0
216

ಸ್ಯಾಂಡಲ್‌ವುಡ್‌ನ ಯುವ ಸೆನ್ಸೇಷನ್ ನಟ ಪೃಥ್ವಿ ಶಾಮನೂರು ಅವರು ತಮ್ಮ ಸಿನಿ ಜೀವನದ 5ನೇ ಚಿತ್ರ ‘ಹೃದಯಂ’ನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ‘ಉಡಾಳ’ ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಈ ಹೊಸ ಸಿನಿಮಾ ಆರಂಭವಾಗಿದ್ದು, ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ.

‘ಪದವಿ ಪೂರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪೃಥ್ವಿ ಶಾಮನೂರು, ತಮ್ಮ ಮೊದಲ ಚಿತ್ರದಲ್ಲಿಯೇ ಯಶಸ್ಸು ಕಂಡು ಕನ್ನಡಿಗರ ಮನಗೆದ್ದಿದ್ದರು. ಕೇವಲ 21 ವರ್ಷ ವಯಸ್ಸಿನ ಈ ಯುವ ಪ್ರತಿಭೆ, ಕಡಿಮೆ ಅವಧಿಯಲ್ಲಿಯೇ ಸ್ಯಾಂಡಲ್‌ವುಡ್‌ನಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಂಬಳದ ಇತಿಹಾಸಕ್ಕೆ ಜೀವ ತುಂಬಿದ ವೀರೇಂದ್ರ ಹೆಗ್ಗಡೆ: ವೀರ ಕಂಬಳ ಚಿತ್ರ ತೆರೆಗೆ ಸಿದ್ಧ

ಇದೀಗ ‘ಹೃದಯಂ’ ಚಿತ್ರದಲ್ಲಿ ಅವರು ಮತ್ತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ರಜತ್ ಸೂರ್ಯವಂಶಿ ನಿರ್ದೇಶನ ವಹಿಸಿದ್ದು, ‘ಮಹಾನಟಿ’ ಖ್ಯಾತಿಯ ನಟಿ ಆರಾಧನಾ ಭಟ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

2022ರಲ್ಲಿ ಬಿಡುಗಡೆಯಾದ ‘ಪದವಿ ಪೂರ್ವ’ ಚಿತ್ರದ ಮೂಲಕ ಪೃಥ್ವಿ ಚೊಚ್ಚಲ ಯಶಸ್ಸು ಪಡೆದಿದ್ದರು. ನಂತರ ‘ಗರಡಿ’, ‘ಕೋಟಿ’ ಹಾಗೂ ಉತ್ತರ ಕರ್ನಾಟಕದ ಸೊಗಡನ್ನು ಬಿಂಬಿಸಿದ ‘ಉಡಾಳ’ ಚಿತ್ರಗಳ ಮೂಲಕ ಅವರು ತಮ್ಮ ನಟನೆಯ ವೈಶಿಷ್ಟ್ಯತೆಯನ್ನು ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ʼಹಯಗ್ರೀವʼ ನ ‘ಸೇನೆ ಮುಖ್ಯಸ್ಥ’ ಧನ್ವೀರ್ ದರ್ಶನ

ವಿಶೇಷವಾಗಿ ‘ಉಡಾಳ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 50 ದಿನಗಳ ಯಶಸ್ವಿ ಪ್ರದರ್ಶನ ಕಂಡು, ದಾಖಲೆ ಮಟ್ಟದ ಗಳಿಕೆ ಮಾಡಿದೆ. ಅಲ್ಲದೆ, ಅಮೇಜಾನ್ ಪ್ರೈಮ್ ವಿಡಿಯೋ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲೂ ಚಿತ್ರ ಭರ್ಜರಿ ಪ್ರತಿಕ್ರಿಯೆ ಪಡೆದಿದೆ.

‘ಉಡಾಳ’ ಚಿತ್ರದ ‘ಹೋಡಿ ಶಾವಿಗೆಗೆ ಮಜ್ಜಿಗೆ’ ಮತ್ತು ‘ಕಾಲ್ಜಿ’ ಹಾಡುಗಳು ರಾಜ್ಯಾದ್ಯಂತ ಮನೆಮಾತಾಗಿದ್ದು, ಜನಮನ ಗೆದ್ದಿವೆ. ಮಾಳು ನಿಪನಾಳ್ ಹಾಗೂ ಬಾಲು ಬೆಳಗುಂದಿ ಹಾಡಿರುವ ಈ ಗೀತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಹ ಭಾರೀ ವೈರಲ್ ಆಗಿವೆ. ಚಿತ್ರದ ಆಡಿಯೋ ಹಕ್ಕುಗಳು ದಾಖಲೆ ಬೆಲೆಗೆ ಸರೆಗಮ (Saregama) ಸಂಸ್ಥೆಯ ಪಾಲಾಗಿದ್ದವು.

ಇದನ್ನೂ ಓದಿ: ಅಂತಿಮ ಹಂತದಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’

ಸತತ ಹಿಟ್ ಚಿತ್ರಗಳ ಮೂಲಕ ಪೃಥ್ವಿ ಶಾಮನೂರು ಇದೀಗ ಸ್ಯಾಂಡಲ್‌ವುಡ್‌ನ ಮೋಸ್ಟ್ ಬ್ಯಾಂಕಬಲ್ ಯುವ ನಟನಾಗಿ ಹೊರಹೊಮ್ಮುತ್ತಿದ್ದಾರೆ. ‘ಹೃದಯಂ’ ಚಿತ್ರವು ಪ್ರೇಮಕಥೆ ಆಧಾರಿತ ಚಿತ್ರವಾಗಿದ್ದು, ಯುವಜನತೆಗೆ ತಕ್ಕ ಕಥಾವಸ್ತುವನ್ನು ಒಳಗೊಂಡಿದೆ ಎನ್ನಲಾಗಿದೆ.

ಈ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದ್ದು, ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ.