SK Home Ad
Home ಸಿನಿ ಮಿಲ್ಸ್ ಬಾಕ್ಸ್ ಆಫೀಸ್ ಸೂಪರ್ ಹಿಟ್: ಗಾಂಧಿ ಜಯಂತಿಗೆ ‘ಪ್ರೇಮದ ಊರಲಿ’ ಅಬ್ಬರ; 10 ಕೋಟಿ ಮೈಲಿಗಲ್ಲತ್ತ...

ಬಾಕ್ಸ್ ಆಫೀಸ್ ಸೂಪರ್ ಹಿಟ್: ಗಾಂಧಿ ಜಯಂತಿಗೆ ‘ಪ್ರೇಮದ ಊರಲಿ’ ಅಬ್ಬರ; 10 ಕೋಟಿ ಮೈಲಿಗಲ್ಲತ್ತ ಸಿನಿಮಾ!

0
7

ಬೆಂಗಳೂರು: ಇತ್ತೀಚಿಗೆ ಬಿಡುಗಡೆಯಾಗಿರು ಸ್ಯಾಂಡಲ್‌ವುಡ್‌ನ ಸಿನಿಮಾ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಅಭೂತಪೂರ್ವ ಬೆಂಬಲ ಪಡೆದುಕೊಂಡಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸತತ ಮುನ್ನಡೆ ಕಾಯ್ದುಕೊಂಡಿದೆ. ಸೆಪ್ಟೆಂಬರ್ 25 ರಂದು ಬಿಡುಗಡೆಯಾದ ಮೊದಲ ದಿನ ಕೇವಲ 13 ಲಕ್ಷ ರೂಪಾಯಿ ಗಳಿಸಿ ಸಾಧಾರಣ ಆರಂಭ ಕಂಡಿದ್ದ ಈ ಚಿತ್ರ, ಸಾರ್ವಜನಿಕರ ಮೆಚ್ಚುಗೆಯ ಪ್ರಚಾರದಿಂದ ದಿನದಿಂದ ದಿನಕ್ಕೆ ಭಾರೀ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದೆ.

ವಾರದ ದಿನಗಳಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಪಾರುಪತ್ಯ ಮೆರೆದಿರುವ ಈ ಸಿನಿಮಾ, ಸೆಪ್ಟೆಂಬರ್ 29 ರಂದು 1.09 ಕೋಟಿ, ಸೆಪ್ಟೆಂಬರ್ 30 ರಂದು 1.28 ಕೋಟಿ ಹಾಗೂ ಅಕ್ಟೋಬರ್ 1 ರಂದು 1.86 ಕೋಟಿ ರೂಪಾಯಿ ಗಳಿಸಿ ಸೈ ಎನಿಸಿಕೊಂಡಿತ್ತು. ಇನ್ನು ಅಕ್ಟೋಬರ್ 2 ರ ಗಾಂಧಿ ಜಯಂತಿ ರಜಾದಿನವು ಚಿತ್ರತಂಡಕ್ಕೆ ಬಂಪರ್ ಕೊಡುಗೆಯಾಗಿ ಪರಿಣಮಿಸಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 3.46 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

ಅಲ್ಲದೇ.. ವಿಶ್ವಾದ್ಯಂತ ಒಟ್ಟು 2,190 ಪ್ರದರ್ಶನಗಳನ್ನು ಕಂಡು ಶೇ. 82 ರಷ್ಟು ಹೌಸ್‌ಫುಲ್ ಶೋಗಳೊಂದಿಗೆ ಹರಿದುಬಂದ ಜನಸಾಗರದಿಂದಾಗಿ ಚಿತ್ರವು ಇದುವರೆಗೆ ಭಾರತದಲ್ಲೇ 9.82 ಕೋಟಿ ರೂಪಾಯಿ ಗ್ರಾಸ್ ಹಾಗೂ 8.59 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದೀಗ ಶನಿವಾರ ಮತ್ತು ಭಾನುವಾರದ ವೀಕೆಂಡ್ ಆರಂಭವಾಗುತ್ತಿರುವುದರಿಂದ, ಸಿನಿಮಾವು ಸುಲಭವಾಗಿ 10 ಕೋಟಿ ರೂಪಾಯಿಗಳ ಬೃಹತ್ ಮೈಲಿಗಲ್ಲನ್ನು ದಾಟಲಿದೆ ಎಂಬ ನಿರೀಕ್ಷೆಯಲ್ಲಿ ವಿತರಕರು ಹಾಗೂ ಚಿತ್ರತಂಡವಿದೆ.