Home Advertisement
Home ಸಿನಿ ಮಿಲ್ಸ್ ‘ಮಹಾವತಾರ’ ಸರಣಿಗೆ ‘ಪರಶುರಾಮ’ನ ಹೊಸ ಅಧ್ಯಾಯ

‘ಮಹಾವತಾರ’ ಸರಣಿಗೆ ‘ಪರಶುರಾಮ’ನ ಹೊಸ ಅಧ್ಯಾಯ

0
126

ಬೆಂಗಳೂರು/ಮುಂಬೈ: ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ತನ್ನ ಮಹತ್ವಾಕಾಂಕ್ಷಿ ಅನಿಮೇಟೆಡ್ ಪ್ರಾಜೆಕ್ಟ್‌ಗಳ ಸರಣಿಯಾದ ‘ಮಹಾವತಾರ ಸಿನೆಮ್ಯಾಟಿಕ್ ಯೂನಿವರ್ಸ್’ನಲ್ಲಿ ಎರಡನೇ ಭಾಗವಾಗಿ ‘ಮಹಾವತಾರ ಪರಶುರಾಮ’ ಚಿತ್ರವನ್ನು ಘೋಷಿಸಿದೆ. ಪರಶುರಾಮ ಜಯಂತಿಯ ಪ್ರಯುಕ್ತ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಇದರಿಂದ ಭಾರತೀಯ ಪುರಾಣಾಧಾರಿತ ಕಥೆಗಳತ್ತ ಹೊಸ ಪೀಳಿಗೆಯ ಗಮನ ಸೆಳೆಯುವ ಪ್ರಯತ್ನ ಸ್ಪಷ್ಟವಾಗಿದೆ.

ಈ ಚಿತ್ರವನ್ನು ನಿರ್ದೇಶಕ ಅಶ್ವಿನ್ ಕುಮಾರ್ ನಿರ್ದೇಶಿಸುತ್ತಿದ್ದು, ನಿರ್ಮಾಪಕರಾಗಿ ವಿಜಯ್ ಕಿರಗಂದೂರು (ಹೊಂಬಾಳೆ ಫಿಲ್ಮ್ಸ್) ಹಾಗೂ ಶಿಲ್ಪಾ ಧವನ್ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಗೀತವನ್ನು ಸ್ಯಾಮ್ ಸಿ.ಎಸ್ ನೀಡುತ್ತಿದ್ದಾರೆ.

ಚಿತ್ರವು 2027ರ ಡಿಸೆಂಬರ್‌ನಲ್ಲಿ 3D ತಂತ್ರಜ್ಞಾನದಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ ಸೇರಿದಂತೆ ಐದು ಪ್ರಮುಖ ಭಾರತೀಯ ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

ಮಹಾವತಾರ ಸಿನೆಮ್ಯಾಟಿಕ್ ಯೂನಿವರ್ಸ್ – ದೀರ್ಘ ಯೋಜನೆ : ಈ ಸರಣಿ ಶ್ರೀ ಮಹಾವಿಷ್ಣುವಿನ ದಶಾವತಾರಗಳ ಆಧಾರಿತ 7 ಚಿತ್ರಗಳ ಮಹಾ ಯೋಜನೆಯಾಗಿದೆ. ಮೊದಲ ಭಾಗವಾದ ‘ಮಹಾವತಾರ ನರಸಿಂಹ’ ಈಗಾಗಲೇ 2025ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಈಗ ‘ಪರಶುರಾಮ’ ಮೂಲಕ ಈ ಯೂನಿವರ್ಸ್ ಮತ್ತಷ್ಟು ವಿಸ್ತರಗೊಳ್ಳುತ್ತಿದೆ.

ಮುಂದಿನ ಚಿತ್ರಗಳು: ರಘುನಂದನ (ಶ್ರೀರಾಮ – 2029), ದ್ವಾರಕಾಧೀಶ (ಶ್ರೀಕೃಷ್ಣ – 2031), ಗೋಕುಲಾನಂದ (2033), ಕಲ್ಕಿ (ಎರಡು ಭಾಗಗಳು – 2035 & 2037)

ತಾಂತ್ರಿಕ ಮೆರುಗು : ‘ಮಹಾವತಾರ ಪರಶುರಾಮ’ ಚಿತ್ರವು ಅತ್ಯಾಧುನಿಕ 3D ಅನಿಮೇಷನ್, ದೃಶ್ಯ ವೈಭವ ಮತ್ತು ಭಾರೀ ಮಟ್ಟದ VFX ಬಳಕೆಯಿಂದ ನಿರ್ಮಾಣವಾಗುತ್ತಿದೆ. ಭಾರತೀಯ ಅನಿಮೇಷನ್‌ನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಚಿತ್ರತಂಡದಾಗಿದೆ.