SK Home Ad
Home ಸಿನಿ ಮಿಲ್ಸ್ ಐದು ಭಾಷೆಗಳಲ್ಲಿ ಧೂಳೆಬ್ಬಿಸಿದ ‘ಧುರಂಧರ್’; ಒಟಿಟಿ ಇತಿಹಾಸದಲ್ಲೇ ಅಸಾಧಾರಣ ಮೈಲಿಗಲ್ಲು!

ಐದು ಭಾಷೆಗಳಲ್ಲಿ ಧೂಳೆಬ್ಬಿಸಿದ ‘ಧುರಂಧರ್’; ಒಟಿಟಿ ಇತಿಹಾಸದಲ್ಲೇ ಅಸಾಧಾರಣ ಮೈಲಿಗಲ್ಲು!

0
19

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ನಟನೆಯ ಬಹುನಿರೀಕ್ಷಿತ ‘ಧುರಂಧರ್ ದಿ ರಿವೇಂಜ್’ ಸಿನಿಮಾವು ಒಟಿಟಿ ಪ್ರಸಾರದಲ್ಲಿ ಹಳೆ ದಾಖಲೆಗಳನ್ನೆಲ್ಲ ಉಡೀಸ್ ಮಾಡಿದೆ. ಜೂನ್ 4ರಂದು ಪ್ರಮುಖ ಒಟಿಟಿ ವೇದಿಕೆಯಾದ ‘ಜಿಯೋಹಾಟ್‌ಸ್ಟಾರ್‌’ನಲ್ಲಿ ಬಿಡುಗಡೆಗೊಂಡಿದ್ದ ಈ ಸಿನಿಮಾ, ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಈ ಆಕ್ಷನ್ ಧಮಾಕಾ ಸಿನಿಮಾವು ಕೇವಲ ಹಿಂದಿಯಷ್ಟೇ ಅಲ್ಲದೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಬಿಡುಗಡೆಯಾದ ಕೇವಲ ಒಂದೇ ವಾರದೊಳಗೆ ಬರೋಬ್ಬರಿ 5 ಕೋಟಿಗೂ ಅಧಿಕ ವೀಕ್ಷಣೆ (ವ್ಯೂಸ್) ಪಡೆಯುವ ಮೂಲಕ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ನಗರ ಪ್ರದೇಶ ಮಾತ್ರವಲ್ಲದೆ, ಗ್ರಾಮೀಣ ಭಾಗದ ಪ್ರೇಕ್ಷಕರಿಂದಲೂ ಈ ಚಿತ್ರಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದು ಜಿಯೋಹಾಟ್‌ ಸ್ಟಾರ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಿನಿಮಾದ ಈ ಅಭೂತಪೂರ್ವ ಯಶಸ್ಸಿನ ಕುರಿತು ಜಿಯೋಸ್ಟಾರ್‌ನ ಹಿಂದಿ ಮತ್ತು ಆಂಗ್ಲ ಭಾಷೆಯ ವ್ಯವಹಾರಗಳ ಮುಖ್ಯಸ್ಥರಾದ ಅಲೋಕ್ ಜೈನ್ ಸಂತಸ ವ್ಯಕ್ತಪಡಿಸಿದ್ದಾರೆ. “ಒಟಿಟಿ ಜಗತ್ತಿನಲ್ಲಿ ‘ಧುರಂಧರ್ ದಿ ರಿವೆಂಜ್’ ಸಿನಿಮಾಗೆ ಸಿಕ್ಕಿರುವ ಪ್ರತಿಕ್ರಿಯೆ ನಿಜಕ್ಕೂ ಅಸಾಧಾರಣವಾದದ್ದು. ಮೊದಲ ವಾರದಲ್ಲೇ 5 ಕೋಟಿ ವೀಕ್ಷಣೆ ದಾಟುವ ಮೂಲಕ ಇದು ಜಿಯೋಹಾಟ್‌ಸ್ಟಾರ್‌ನ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಿದೆ” ಎಂದು ಹೇಳಿದ್ದಾರೆ.

ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ, ಇದರ ಮುಂದಿನ ಭಾಗವಾದ ‘ಧುರಂಧರ್ 2’ ಚಿತ್ರದ ಟೈಟಲ್ ಬಿಡುಗಡೆ ಮಾಡಲಾಗಿತ್ತು. ವಿಶೇಷವೆಂದರೆ, ಈ ಶೀರ್ಷಿಕೆ ಪ್ರಕಟವಾದ ಮೊದಲ ಮೂರೇ ದಿನಗಳಲ್ಲಿ 3 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು, ಮುಂದಿನ ಭಾಗದ ಮೇಲಿರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ ಎಂದು ಒಟಿಟಿ ಪ್ರಸಾರ ಸಂಸ್ಥೆ ಮಾಹಿತಿ ನೀಡಿದೆ.