Home Advertisement
Home ಸಿನಿ ಮಿಲ್ಸ್ ರೈತ ಹುಡುಗನ ಕೈಹಿಡಿದ ‘ಅಮೃತಧಾರೆ’ ಖ್ಯಾತಿಯ ನಟಿ ದಿಯಾ: ಸೀರಿಯಲ್‌ಗೆ ಗುಡ್‌ಬೈ?; ಇಲ್ಲಿದೆ ಡೀಟೇಲ್ಸ್

ರೈತ ಹುಡುಗನ ಕೈಹಿಡಿದ ‘ಅಮೃತಧಾರೆ’ ಖ್ಯಾತಿಯ ನಟಿ ದಿಯಾ: ಸೀರಿಯಲ್‌ಗೆ ಗುಡ್‌ಬೈ?; ಇಲ್ಲಿದೆ ಡೀಟೇಲ್ಸ್

0
41

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ, ‘ಅಮೃತಧಾರೆ’ ಧಾರಾವಾಹಿ ಖ್ಯಾತಿಯ ಶ್ವೇತಾ ಗೌಡ ಅವರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಮನಸೆಳೆದ ರಂಗಿನ ಲೋಕದ ಹೊರಗಿನ ಹುಡುಗ ಸುನಿಲ್ ಚಂದ್ರ ಜೊತೆ ಮೇ 14ರಂದು ಹಾಸನ ಜಿಲ್ಲೆಯ ಐತಿಹಾಸಿಕ ಸ್ಥಳವಾದ ಹಳೇಬೀಡಿನಲ್ಲಿ ಅತ್ಯಂತ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಕುಟುಂಬಸ್ಥರು, ಆಪ್ತರು ಹಾಗೂ ಕಿರುತೆರೆಯ ಗಣ್ಯರ ಸಮ್ಮುಖದಲ್ಲಿ ಈ ಜೋಡಿಯ ಕಲ್ಯಾಣ ಮಹೋತ್ಸವ ನೆರವೇರಿದೆ.

ನಟಿ ಶ್ವೇತಾ ಗೌಡ ಕೈಹಿಡಿದ ಗೋಪಾಲಕೃಷ್ಣ (ಸುನಿಲ್ ಚಂದ್ರ) ಮೂಲತಃ ರೈತಾಪಿ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದಾರೆ. ಕೃಷಿ ಸಂಸ್ಕೃತಿಯನ್ನು ಹೆಮ್ಮೆಯಿಂದ ಮುನ್ನಡೆಸುತ್ತಿರುವ ‘ರೈತ ಹುಡುಗ’ನನ್ನೇ ಶ್ವೇತಾ ಗೌಡ ತಮ್ಮ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿರುವುದು ನಟಿ ಅಭಿಮಾನಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ನವದಂಪತಿಯ ಮದುವೆಯ ಸುಂದರ ಚಿತ್ರಗಳು ವೈರಲ್ ಆಗುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿವೆ.

ಜೆಡಿ ಪಾತ್ರಕ್ಕೆ ವಿದಾಯ?: ಇದೇ ವೇಳೆ ಕಿರುತೆರೆ ವಲಯದಿಂದ ಮತ್ತೊಂದು ಪ್ರಮುಖ ಸುದ್ದಿ ಕೇಳಿಬರುತ್ತಿದೆ. ಜೀ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರಾವಾಹಿ ‘ಅಮೃತಧಾರೆ’ಯಲ್ಲಿ ‘JD’ ಎಂಬ ಪ್ರಮುಖ ಹಾಗೂ ಖಡಕ್ ಪಾತ್ರಕ್ಕೆ ಜೊತೆಯಾಗಿದ್ದ ದಿಯಾ ಪಾತ್ರದ ಮೂಲಕ ಶ್ವೇತಾ ಗೌಡ ಮನೆಮಾತಾಗಿದ್ದರು. ಆದ್ರೆ ವಿವಾಹದ ನಂತರ ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಸಮಯ ನೀಡುವ ಸಲುವಾಗಿ ಈ ಧಾರಾವಾಹಿಗೆ ಹಾಗೂ ತಮ್ಮ ನೆಚ್ಚಿನ ಜೆಡಿ ಪಾತ್ರಕ್ಕೆ ಗುಡ್‌ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದ್ದರೂ, ನಟಿಯ ಮುಂದಿನ ಜೀವನಕ್ಕೆ ಶುಭ ಹಾರೈಸುತ್ತಿದ್ದಾರೆ.

ಒಟ್ಟಾರೆ…. ನವ ಜೀವನಕ್ಕೆ ಕಾಲಿಟ್ಟಿರುವ ಶ್ವೇತಾ ಗೌಡ ಹಾಗೂ ಸುನಿಲ್ ಚಂದ್ರ ಜೋಡಿಗೆ ಕಿರುತೆರೆಯ ಸಹ-ಕಲಾವಿದರು, ತಾಂತ್ರಿಕ ವರ್ಗ ಹಾಗೂ ಅಪಾರ ಸಂಖ್ಯೆಯ ಅಭಿಮಾನಿ ಬಳಗದಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಹೊಸ ಬಾಳಿಗೆ ಕಾಲಿಟ್ಟಿರುವ ಈ ಜೋಡಿಯ ಸಂಸಾರ ನೂರು ಕಾಲ ಸುಖ-ಸಂತೋಷದಿಂದ ಕೂಡಿರಲಿ ಎಂಬುದೇ ಎಲ್ಲರ ಹಾರೈಕೆಯಾಗಿದೆ.