ವಿದೇಶಗಳಲ್ಲೂ ‘45’ ಅಬ್ಬರ: ಕೆನಡಾದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಸೋಲ್ಡ್ ಔಟ್

0
2

ಟ್ರೇಲರ್ ಹಿಟ್, ಪ್ರೀಮಿಯರ್ ಶೋಗಳಿಗೆ ಭರ್ಜರಿ ಸ್ಪಂದನೆ

ಬೆಂಗಳೂರು: ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘45’ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಭಾರೀ ಸಂಚಲನ ಮೂಡಿಸಿದ್ದು, ಕೆಲವೇ ಗಂಟೆಗಳಲ್ಲಿ 25 ಮಿಲಿಯನ್ ಹಿಟ್ಸ್ ದಾಖಲಿಸುವ ಮೂಲಕ ಸಿನಿಮಾ ಮೇಲಿನ ಕ್ರೇಜ್ ಎಷ್ಟು ದೊಡ್ಡದಿದೆ ಎಂಬುದನ್ನು ತೋರಿಸಿದೆ.

ಈ ಕ್ರೇಜ್ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೇ, ವಿದೇಶಗಳಲ್ಲೂ ‘45’ ಅಬ್ಬರ ಜೋರಾಗಿದೆ. ಡಿಸೆಂಬರ್ 25ರಂದು ಕರ್ನಾಟಕಾದ್ಯಂತ ಸಿನಿಮಾ ಬಿಡುಗಡೆಯಾಗಲಿದ್ದು, ಅದಕ್ಕೂ ಎರಡು ದಿನ ಮುನ್ನವೇ ಕೆನಡಾದಲ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗುತ್ತಿದೆ. ಕಳೆದ ವಾರವೇ ಕೆನಡಾದ ಪ್ರೀಮಿಯರ್ ಶೋಗಳಿಗೆ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿರುವುದು ಚಿತ್ರದ ಮೇಲಿನ ಭರ್ಜರಿ ನಿರೀಕ್ಷೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್: ನಿಮಗಾಗಿ ಕಾದಿವೆ ’45’ ಸೀಟುಗಳು..!

ಇನ್ನು ಕರ್ನಾಟಕದಲ್ಲೂ ‘45’ ಪ್ರೀಮಿಯರ್ ಶೋಗಳು ನಡೆಯಲಿದ್ದು, ಇಂದು ಭಾನುವಾರ (ಡಿ.21) ಬೆಳಗ್ಗೆ 11 ಗಂಟೆಯಿಂದಲೆ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು. ಈಗಾಗಲೇ ಟ್ರೇಲರ್‌ಗೆ ಸಿಕ್ಕಿರುವ ಸ್ಪಂದನೆ ನೋಡಿದರೆ, ರಾಜ್ಯದಲ್ಲೂ ಮುಂಗಡ ಟಿಕೆಟ್‌ಗಳಿಗೆ ಭಾರೀ ಬೇಡಿಕೆ ಕಾಣುವ ನಿರೀಕ್ಷೆಯಿದೆ.

‘45’ ಸಿನಿಮಾ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ಬಿಗ್ ಬಜೆಟ್‌ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿದೆ. ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಡಿಸೆಂಬರ್ 25ರಂದು ಸಿನಿಮಾ ಕನ್ನಡ ಭಾಷೆಯಲ್ಲಿ ತೆರೆ ಕಾಣಲಿದ್ದು, ಒಂದು ವಾರದ ಬಳಿಕ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳನ್ನು ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ. ಈ ಕುರಿತು ಅಧಿಕೃತ ಮಾಹಿತಿ ಶೀಘ್ರದಲ್ಲೇ ಪ್ರಕಟವಾಗಲಿದೆ.

ಇದನ್ನೂ ಓದಿ: ಶಿವಣ್ಣನ ಅಸಲಿ ಪ್ರತಿಭೆ ಈ ಚಿತ್ರದಲ್ಲಿ ಹೊರಬರಲಿದೆ: ‘45’ ಬಗ್ಗೆ ಉಪೇಂದ್ರ ಭರವಸೆ

ಸಿನಿಮಾ ಕುರಿತು ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ, “ನಿರೀಕ್ಷೆಗೂ ಮೀರಿ ಜನರಿಂದ ಸ್ಪಂದನೆ ಬರುತ್ತಿದೆ. ಅರ್ಜುನ್ ಜನ್ಯ ಅವರ ನಿರ್ದೇಶನ, ಶಿವಣ್ಣನ ಲುಕ್, ಉಪ್ಪಿ ಸಾರ್ ಡೈಲಾಗ್ ಹಾಗೂ ರಾಜ್ ಬಿ ಶೆಟ್ಟಿಯ ಮುಗ್ಧತೆ ಪ್ರೇಕ್ಷಕರ ಮನ ಗೆದ್ದಿದೆ. ಸಿನಿಮಾಕ್ಕೂ ಇದೇ ರೀತಿಯ ಸಾಥ್ ಸಿಗುತ್ತದೆ ಎಂಬ ನಂಬಿಕೆ ಇದೆ” ಎಂದು ಹೇಳಿದ್ದಾರೆ.

ಇನ್ನು ನಿರ್ದೇಶಕ ಅರ್ಜುನ್ ಜನ್ಯ, “ನನ್ನ ಮೊದಲ ನಿರ್ದೇಶನದ ಸಿನಿಮಾಕ್ಕೆ ಇಷ್ಟೊಂದು ಅಭೂತಪೂರ್ವ ರೆಸ್ಪಾನ್ಸ್ ಸಿಗುತ್ತಿದೆ ಎಂಬುದು ಖುಷಿ ಕೊಡುತ್ತಿದೆ. ಎಲ್ಲರೂ ಮೆಚ್ಚುವಂತಹ ಸಿನಿಮಾ ಮಾಡಿದ್ದೇನೆ ಎಂಬ ವಿಶ್ವಾಸವಿದೆ. ಸಿನಿಮಾ ನೋಡಿ ಹೊರಬಂದ ಮೇಲೆ ಪ್ರೇಕ್ಷಕರು ಚರ್ಚೆ ಮಾಡುವಂತ ವಿಷಯ ಇದರಲ್ಲಿ ಇದೆ. ‘45’ ಸಿನಿಮಾವನ್ನು ಅವರ ಮಡಿಲಿಗೆ ಹಾಕುತ್ತಿದ್ದೇವೆ, ಉಳಿದದ್ದು ಅವರದೇ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಸ್ಟಾರ್ ಕಾಂಬಿನೇಷನ್, ವಿಭಿನ್ನ ಕಥೆ ಮತ್ತು ಟ್ರೇಲರ್ ಸೃಷ್ಟಿಸಿರುವ ಹೈಪ್‌ನಿಂದ ‘45’ ಸಿನಿಮಾ ಈ ಕ್ರಿಸ್‌ಮಸ್‌ಗೆ ಕನ್ನಡ ಚಿತ್ರರಂಗದ ದೊಡ್ಡ ಅಟ್ರಾಕ್ಷನ್ ಆಗಲಿದೆ ಎಂಬ ನಿರೀಕ್ಷೆ ಬಲವಾಗುತ್ತಿದೆ.

Previous articleಚಿಕ್ಕಣ್ಣನ ದೊಡ್ಡ ಕನಸಿನ ಸಿನಿಮಾ: ಹೊಸ ವರ್ಷದಿಂದ ‘ಜೋಡೆತ್ತು’ ಶೂಟಿಂಗ್‌ ಶುರು