SK Home Ad
Home ಸಿನಿ ಮಿಲ್ಸ್ ಕರಾವಳಿ ಹಿನ್ನೆಲೆಯ ‘ದೇವಿ ಮಹಾತ್ಮೆ’ ಚಿತ್ರದ ರೋಚಕ ಟೀಸರ್ ಔಟ್: ರಂಗಾಯಣ ರಘು ಹೊಸ ಅವತಾರ

ಕರಾವಳಿ ಹಿನ್ನೆಲೆಯ ‘ದೇವಿ ಮಹಾತ್ಮೆ’ ಚಿತ್ರದ ರೋಚಕ ಟೀಸರ್ ಔಟ್: ರಂಗಾಯಣ ರಘು ಹೊಸ ಅವತಾರ

0
29

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ರಂಗಾಯಣ ರಘು ವಿಭಿನ್ನ ಪಾತ್ರದ ‘ದೇವಿ ಮಹಾತ್ಮೆ’ ಚಿತ್ರದ ರೋಚಕ ಟೀಸರ್ ಬಿಡುಗಡೆಯಾಗಿದೆ. ಹಾಸ್ಯ ಹಾಗೂ ನೆಗೆಟಿವ್ ಪಾತ್ರಗಳ ಮೂಲಕ ಮನೆಮಾತಾಗಿದ್ದ ರಘು, ಇತ್ತೀಚೆಗೆ ‘ಶಾಖಾಹಾರಿ’ ಚಿತ್ರದ ಯಶಸ್ಸಿನ ಬಳಿಕ ಮತ್ತೊಮ್ಮೆ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾಹಂದರ ಹೊಂದಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಟೀಸರ್ ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿ ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಹಾಗೇ ಇತ್ತೀಚೆಗಷ್ಟೇ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಾಗರಾಜ್ ಸೋಮಯಾಜಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. 1 ನಿಮಿಷ 5 ಸೆಕೆಂಡ್‌ಗಳ ಈ ಟೀಸರ್‌ನಲ್ಲಿ ಸಮುದ್ರ ತೀರದ ಆಕರ್ಷಕ ದೃಶ್ಯಗಳು, ಕರಾವಳಿಯ ಹೆಮ್ಮೆಯ ಹುಲಿ ವೇಷದ ಅಬ್ಬರ ಹಾಗೂ ರಂಗಾಯಣ ರಘು ತೀವ್ರ ಅಭಿನಯ ಪ್ರಮುಖ ಹೈಲೈಟ್ ಆಗಿ ಮೂಡಿಬಂದಿವೆ. ಇದಕ್ಕೆ ಲಿಕಿತ್ ಪ್ರಸಾದ್ ಕೆ. ಶೆಟ್ಟಿ ನೀಡಿರುವ ಹಿನ್ನೆಲೆ ಸಂಗೀತ ಮತ್ತು ಎಸ್.ಕೆ. ರಾವ್ ಸಿನಿಮಾಟೋಗ್ರಫಿ ಚಿತ್ರದ ಥ್ರಿಲ್ಲಿಂಗ್ ಅನುಭವವನ್ನು ದುಪ್ಪಟ್ಟು ಮಾಡಿದೆ. ಉಜ್ವಲ್ ಚಂದ್ರ ಈ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ನಂತರ ಈ ಚಿತ್ರದಲ್ಲಿ ರಂಗಾಯಣ ರಘು ಜೊತೆ ಪ್ರತಿಮಾ ನಾಯಕ್, ಸುಂದರ್ ವೀಣಾ, ಅರವಿಂದ್ ಕುಪ್ಳಿಕರ್, ನಾಗೇಂದ್ರ ಶಾ ಸೇರಿದಂತೆ ದೊಡ್ಡ ಕಲಾವಿದರ ಬಳಗವೇ ನಟಿಸಿದೆ. ಚಿತ್ರಕ್ಕೆ ನಿರ್ದೇಶಕ ನಾಗರಾಜ್ ಸೋಮಯಾಜಿ ಈ ಚಿತ್ರಕಥೆ ಬರೆದಿದ್ದು, ಅರವಿಂದ್ ಕುಪ್ಳೀಕರ್ ಹಾಗೂ ತಂಡ ಬರವಣಿಗೆಯಲ್ಲಿ ಸಂಪೋರ್ಣ ಸಾಥ್ ನೀಡಿದೆ. ‘ಯುವಿಜಿ ಸ್ಟುಡಿಯೋ’ ಬ್ಯಾನರ್ ಅಡಿಯಲ್ಲಿ ವಿದ್ಯಾ ಗಾಂಧಿರಾಜನ್ ಮತ್ತು ಗಾಂಧಿರಾಜನ್ ಜಂಟಿಯಾಗಿ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಪ್ರಸ್ತುತ ಹೊರಬಂದಿರುವ ಟೀಸರ್ ಸಿನಿಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಗಣನೀಯವಾಗಿ ಹೆಚ್ಚಿಸಿದೆ.