SK Home Ad
Home ನಮ್ಮ ಜಿಲ್ಲೆ ಕೊಪ್ಪಳ NEET-UG Re-Exam: ತಡವಾಗಿ ಬಂದ ವಿದ್ಯಾರ್ಥಿನಿ ಪರೀಕ್ಷೆಯಿಂದ ವಂಚಿತ

NEET-UG Re-Exam: ತಡವಾಗಿ ಬಂದ ವಿದ್ಯಾರ್ಥಿನಿ ಪರೀಕ್ಷೆಯಿಂದ ವಂಚಿತ

0
102

ಕೊಪ್ಪಳ: ವಿದ್ಯಾರ್ಥಿನಿ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದು, ಸಿಬ್ಬಂದಿ ಒಳಗಡೆ ಬಿಟ್ಟುಕೊಳ್ಳಲಿಲ್ಲ. ಅವಕಾಶ ನೀಡುವಂತೆ ಪಾಲಕರು ಹಾಗೂ ವಿದ್ಯಾರ್ಥಿನಿಯು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದ ಪ್ರಸಂಗ ನಡೆಯಿತು.

ಕೊಪ್ಪಳ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಗಂಗಾವತಿಯ ವಿದ್ಯಾರ್ಥಿನಿ ಬೀಬಿ ಫಾತಿಮಾ ಪರೀಕ್ಷೆ ಬರೆಯುವುದಿತ್ತು. ಆದರೆ ತಂದೆಯೊಂದಿಗೆ ಬೈಕ್‌ನಲ್ಲಿ ಬರುವಾಗ ಬೈಕ್ ಕೆಟ್ಟಿದೆ. 1.30ರ ಒಳಗೆ ಪರೀಕ್ಷಾ ಕೇಂದ್ರದ ಒಳಗೆ ಇರಬೇಕಿತ್ತು. ಆದರೆ 1.53ಕ್ಕೆ ಅಂದರೆ 23 ನಿಮಿಷ ತಡವಾಗಿ ಬಂದಿದ್ದಾಳೆ. ಪೊಲೀಸರು ಕಾಲೇಜು ಗೇಟ್‌ತೆಗೆದು, ಒಳಗೆ ಬಿಟ್ಟಿದ್ದಾರೆ. ಆದರೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಸಮಯ ಮೀರಿದೆ ಎಂದು ವಿದ್ಯಾರ್ಥಿನಿಯನ್ನು ಒಳಗೆ ಕರೆದುಕೊಳ್ಳಲಿಲ್ಲ.

ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಆರಂಭ ಆಗಲಿದೆ. ಇನ್ನೂ 5 ನಿಮಿಷ ಅವಕಾಶ ಇದೆ. ಕೇಂದ್ರದೊಳಗೆ ಬಿಡಿ ಎಂದು ಪಾಲಕರು, ವಿದ್ಯಾರ್ಥಿನಿ, ಪರೀಕ್ಷಾ ಕೇಂದ್ರದ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದರು. ಆಗ ಮೇಲ್ವಿಚಾರಕರು, ಮಧ್ಯಾಹ್ನ 1.30ರ ಒಳಗೆ ಕೇಂದ್ರದ ಒಳಗೆ ಇರಬೇಕು. ಅಷ್ಟರೊಳಗೆ ಬಯೋಮೆಟ್ರಿಕ್ ಮಾಡಬೇಕು. ಆದರೆ ತಡವಾಗಿದೆ. ಹಾಗಾಗಿ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ವಿದ್ಯಾರ್ಥಿನಿಯು ಪರೀಕ್ಷೆ ಬರೆಯಲಾಗದೆ ಮನೆಗೆ ತೆರಳಿದರು.