Home Advertisement
Home ನಮ್ಮ ಜಿಲ್ಲೆ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಬೈಕ್‌: ಯುವಕ ಸಾವು, ಯುವತಿ ಪಾರು

ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಬೈಕ್‌: ಯುವಕ ಸಾವು, ಯುವತಿ ಪಾರು

0
105

ಹೊಸಪೇಟೆ: ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ಯುವಕ ಮೃತಪಟ್ಟಿದ್ದು, ಯುವತಿ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕಮಲಾಪುರ ಕೆರೆ ಏರಿ ಬಳಿಯಲ್ಲಿ ನಡೆದಿದೆ.

ಮರಿಯಮ್ಮನ ಹಳ್ಳಿಯ ನಿವಾಸಿ ರವಿಕುಮಾರ್(28) ಮೃತಪಟ್ಟಿದ್ದಾನೆ. ಯುವತಿಯ ಗುರುತು ಪತ್ತೆಯಾಗಿಲ್ಲ. ಹೊಸಪೇಟೆಯಿಂದ ಕಮಲಾಪುರದ ಕಡೆಗೆ ಬೈಕ್‌ನಲ್ಲಿ ಹೊರಟಿದ್ದ ಸಂದರ್ಭದಲ್ಲಿ ಯುವಕ, ಯುವತಿ ಬೈಕ್ ನಿಯಂತ್ರಣ ತಪ್ಪಿ ಕೆರೆಯಲ್ಲಿ ಬಿದ್ದಿದ್ದಾರೆ. ಸ್ಥಳೀಯರು, ಅಗ್ನಿಶಾಮಕ ದಳ ಸಿಬ್ಬಂದಿ ಯುವಕನ ಮೃತದೇಹ ಹೊರ ತೆಗೆದಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.