Home Advertisement
Home ಸುದ್ದಿ ವಿದೇಶ Apple CEO : ಟಿಮ್ ಕುಕ್ ವಿದಾಯ, ಜಾನ್ ಟೆರ್ನಸ್ ಹೊಸ ಸಿಇಒ

Apple CEO : ಟಿಮ್ ಕುಕ್ ವಿದಾಯ, ಜಾನ್ ಟೆರ್ನಸ್ ಹೊಸ ಸಿಇಒ

0
91

ಅಮೆರಿಕಾ: ಜಾಗತಿಕ ಟೆಕ್ ದಿಗ್ಗಜ ಆ್ಯಪಲ್‌ ಸಂಸ್ಥೆಯಲ್ಲಿ ಪ್ರಮುಖ ನಾಯಕತ್ವ ಬದಲಾವಣೆ ಘೋಷಣೆಯಾಗಿದ್ದು, ಕಳೆದ 15 ವರ್ಷಗಳಿಂದ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದ ಟಿಮ್ ಕುಕ್ (Tim Cook) ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 1ರಿಂದ ಜಾನ್ ಟೆರ್ನಸ್ (John Ternus) ಆ್ಯಪಲ್‌ ಸಂಸ್ಥೆಯ ಹೊಸ ಸಿಇಒ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಹುದ್ದೆ ಬದಲಾವಣೆ ಹೇಗೆ? : ಟಿಮ್ ಕುಕ್ ಸಿಇಒ ಸ್ಥಾನ ತ್ಯಜಿಸಿದ ಬಳಿಕ, ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷ (Executive Chairman)ರಾಗಿ ಮುಂದುವರಿಯಲಿದ್ದಾರೆ. ಪ್ರಸ್ತುತ ಹಾರ್ಡ್‌ವೇರ್ ಎಂಜಿನಿಯರಿಂಗ್ ಮುಖ್ಯಸ್ಥರಾಗಿರುವ ಜಾನ್ ಟೆರ್ನಸ್, 25 ವರ್ಷಗಳ ಅನುಭವದೊಂದಿಗೆ ಆಪಲ್‌ನ ಮುಂದಿನ ನಾಯಕತ್ವ ವಹಿಸಲಿದ್ದಾರೆ.

ಟಿಮ್ ಕುಕ್ ನೇತೃತ್ವದ ಸಾಧನೆ : ಸ್ಟೀವ್ ಜಾಬ್ಸ್ (Steve Jobs) ಅವರು 2011ರಲ್ಲಿ ರಾಜೀನಾಮೆ ನೀಡಿದ ನಂತರ ಟಿಮ್ ಕುಕ್ ಆಪಲ್‌ನ ಚುಕ್ಕಾಣಿ ಹಿಡಿದಿದ್ದರು. ಅವರ ನೇತೃತ್ವದಲ್ಲಿ ಆಪಲ್ ಕಂಪನಿಯ ಮೌಲ್ಯ ಹೆಚ್ಚಿಸಿ ಐಫೋನ್, ಐಪ್ಯಾಡ್, ಮ್ಯಾಕ್ ಉತ್ಪನ್ನಗಳ ವ್ಯಾಪ್ತಿ ವಿಸ್ತರಿಸಿತು ಸೇವಾ ವಲಯ (Services segment) ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡಿತು. ಕುಕ್ 1998ರಲ್ಲಿ ಆಪಲ್ ಸೇರಿ, ಕಾರ್ಯಾಚರಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಂಪನಿಯ ಒಳಗಟ್ಟಿನಲ್ಲಿ ನಡೆದ ಈ ಬದಲಾವಣೆ ಬಹುಕಾಲದ ಯೋಜನೆಯ ಭಾಗವಾಗಿದ್ದು, ಸುನಿಶ್ಚಿತ ವರ್ಗಾವಣೆ (smooth transition)ಗಾಗಿ ಈಗಾಗಲೇ ನಿರ್ವಹಣಾ ತಂಡದ ಮಟ್ಟದಲ್ಲಿ ಕಾರ್ಯಚಟುವಟಿಕೆಗಳು ಆರಂಭಗೊಂಡಿವೆ. ಜಾನ್ ಟೆರ್ನಸ್ ಹೊಸ ತಂತ್ರಜ್ಞಾನ ಹಾಗೂ ಉತ್ಪನ್ನ ಆವಿಷ್ಕಾರಗಳ ಮೇಲೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಟೆಕ್ ವಲಯದ ಪ್ರತಿಕ್ರಿಯೆ: ಈ ಬದಲಾವಣೆಯನ್ನು ಜಾಗತಿಕ ಟೆಕ್ ವಲಯದಲ್ಲಿ ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗುತ್ತಿದೆ. ಟಿಮ್ ಕುಕ್ ನಂತರದ ಆಪಲ್ ದಿಕ್ಕು ಹೇಗಿರಲಿದೆ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.