ಬೆಂಗಳೂರು: ಅರಿವಳಿಕೆ ಔಷಧಿ ನೀಡಿ ವೈದ್ಯೆ ಪತ್ನಿ ಕೃತಿಕಾ ರೆಡ್ಡಿಯನ್ನು ಕೊಲೆಗೈದ ಪ್ರಕರಣದಲ್ಲಿ ಬಂಧಿತನಾಗಿರುವ ಪತಿ ಡಾ.ಮಹೇಂದ್ರ ರೆಡ್ಡಿ, ಹತ್ಯೆ ಬಳಿಕ ಸ್ನೇಹಿತೆಗೆ ಕೊಲೆ ಮಾಡಿರುವ ಕೃತ್ಯದ ಬಗ್ಗೆ ಫೋನ್ ಪೇ ಮೂಲಕ ಚಾಟ್ ಮಾಡಿದ್ದು ಈ ಬಗ್ಗೆ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಎಫ್‌ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಕೃತಿಕಾ ರೆಡ್ಡಿಯನ್ನು ಮನೆಯಲ್ಲಿ ಚಿಕಿತ್ಸೆ ನೀಡುವ ನೆಪದಲ್ಲಿ ಪತಿ ಮಹೇಂದ್ರರೆಡ್ಡಿ,ಅನಾರೋಗ್ಯದಿಂದ ಬಳಲುತ್ತಿದ್ದ ಕೃತಿಕಾ ರೆಡ್ಡಿಯನ್ನು ಮನೆಯಲ್ಲಿ ಚಿಕಿತ್ಸೆ ನೀಡುವ ನೆಪದಲ್ಲಿ ಪತಿ ಮಹೇಂದ್ರರೆಡ್ಡಿ, ಕಳೆದ ವರ್ಷ ಎ.23ರಂದು ಹೆಚ್ಚುವರಿಯಾಗಿ ಅರಿವಳಿಕೆ ಔಷಧಿ ನೀಡಿ ಹತ್ಯೆಗೆ ಕಾರಣನಾಗಿದ್ದನು. ಮಾರತ್ ಹಳ್ಳಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಓವರ್ ಡೋಸ್ ಇಂಜೆಕ್ಷನ್‌ನಿಂದಾಗಿ ಕೃತಿಕಾಳ ಕೊಲೆಂ ಯಾಗಿದೆ ಎಂದು ಎಫ್ ಎಸ್ ಎಲ್ ವರದಿ ಬಂದ ಬೆನ್ನಲ್ಲೇ ಕೃತಿಕಾ ತಂದೆಯಿಂದ ದೂರು ಪಡೆದು ಕಳೆದ ವರ್ಷ ಅಕ್ಟೋಬರ್ ನಲ್ಲಿ ಮಹೇಂದ್ರನನ್ನು ಬಂಧಿಸಲಾಗಿತ್ತು.
ತಾನು ಕೊಲೆ ಮಾಡಿಲ್ಲ ಎಂದು ವಾದಿಸುತ್ತಿದ್ದ ಆರೋಪಿಯಿಂದ ವಶಕ್ಕೆ ಪಡೆದುಕೊಂಡ ಮೊಬೈಲ್ ರಿಟೀವ್ ಮಾಡಿದಾಗ ಸ್ನೇಹಿತೆಯೊಂದಿಗೆ ಕೊಲೆ ವಿಚಾರವಾಗಿ ಚಾಟ್ ಮಾಡಿರುವುದು ಗೊತ್ತಾಗಿದೆ. ಫೋನ್ ಪೇ ಮೂಲಕ ಮೆಸೇಜ್ಹತ್ಯೆ ಬಳಿಕ ಸ್ನೇಹಿತೆಯೊಂದಿಗೆ ಮಾಡಿದ ಸಂದೇಶಗಳನ್ನು ರಿಟೀವ್ ಮಾಡಿದಾಗ ಕೃತ್ಯವೆಸಗಿರುವ ಬಗ್ಗೆ ಪತ್ತೆಯಾಗಿದೆ.
ಫೋನ್ ಪೇನಲ್ಲಿ 485 ಚಾಟ್ ಪತ್ತೆ: ಇನ್ನು ಇಷ್ಟೇ ಅಲ್ಲದೆ ಆರೋಪಿ ಮಹೇಂದ್ರ ರೆಡ್ಡಿ ಮೊಬೈಲ್ ರಿಟ್ರೇವ್‌ನಲ್ಲಿ 485 ಫೋನ್ ಪೇ ಚಾಟ್ ಪತ್ತೆಯಾಗಿದ್ದು, ಈ ಪೈಕಿ ಮೂರು ಮೆಸೇಜ್‌ಗಳನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ.
ಆರೋಪಿ ಪ್ರೇಯಸಿ ನರ್ಸ್, ವೈದ್ಯೆ ಕೃತಿಕಾ ಹಾಗೂ ಮಹೇಂದ್ರ ಮೊಬೈಲ್ ರಿಟೀವ್‌ನಲ್ಲಿ ಒಟ್ಟು 10 ಲಕ್ಷ 34 ಸಾವಿರ ರೂ. ದಷ್ಟು ಡಿಜಿಟಲ್ ಫೈಲ್‌ಗಳನ್ನು ರಿಟೀವ್ ಮಾಡಿರುವ ಪೊಲೀಸರು ಪ್ರಮುಖ ಫೈಲ್ ಗಳ ನ್ನು ಹೆಚ್ಚುವರಿ ಚಾರ್ಜ್ ಶೀಟ್‌ನಲ್ಲಿ ಸಲ್ಲಿಸಲಿದ್ದಾರೆ.























