Home Advertisement
Home ಸುದ್ದಿ ದೇಶ ಕೋಟಿ ಕೋಟಿ ಆಸ್ತಿ, ಕಠಿಣ ಕೇಸ್‌ಗಳು; ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ ಕೈದಿ ಅಷ್ಟಕ್ಕೂ ಯಾರೀತ?

ಕೋಟಿ ಕೋಟಿ ಆಸ್ತಿ, ಕಠಿಣ ಕೇಸ್‌ಗಳು; ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ ಕೈದಿ ಅಷ್ಟಕ್ಕೂ ಯಾರೀತ?

0
23

ಚೆನ್ನೈ: ಪುಝಾಲ್ ಕೇಂದ್ರ ಕಾರಾಗೃಹದಲ್ಲಿಯೇ ಇರುವಾಗ, ಹರಿ ನಾಡರ್ ಆಲಂಗುಲಂ ಕ್ಷೇತ್ರದ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದರು. ಒಂಬತ್ತು ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು 24 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಹರಿ ನಾಡರ್, ತನ್ನ ನಾಮಪತ್ರದಲ್ಲಿ ಎಲ್ಲಾ ಆಸ್ತಿ ವಿವರಗಳನ್ನು ಖುದ್ದಾಗಿ ಘೋಷಿಸಿದ್ದಾನೆ. 26.76 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿ, 12 ಲಕ್ಷ ಮೌಲ್ಯದ ಸ್ಥಿರ ಆಸ್ತಿ, ಮತ್ತು 11.650 ಕಿಲೋಗ್ರಾಂ ಚಿನ್ನದ ಆಭರಣಗಳು ಮತ್ತು ಚಿನ್ನದ ಗಟ್ಟಿಗಳು, ಆರು ನಾಲ್ಕು ಚಕ್ರಗಳ ವಾಹನಗಳನ್ನು ಹೊಂದಿರುವುದಾಗಿ ಹರಿ ನಾಡರ್ ಹೇಳಿದ್ದಾನೆ. ಹರಿ ನಾಡರ್ ಎಸ್‌ಎಸ್‌ಎಲ್‌ಸಿ ಮಟ್ಟದ ಶಿಕ್ಷಣ ಪಡೆದಿದ್ದು, 2020-21ರ ಸಾಲಿನ ವರ್ಷದಲ್ಲಿ 1.52 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದಾನೆ.

ಹರಿ ನಾಡರ್ ಮೂರನೇ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಆಲಂಗುಲಂ ಕ್ಷೇತ್ರದಲ್ಲಿ 37,727 ಮತಗಳನ್ನು ಪಡೆದಿದ್ದರೆ, 2019 ರ ಉಪಚುನಾವಣೆಯಲ್ಲಿ ನಂಗುನೇರಿ ಕ್ಷೇತ್ರದಲ್ಲಿ ಕೇವಲ 4,243 ಮತಗಳು ಮಾತ್ರ ದೊರೆತಿದ್ದವು. ಹೆಚ್ಚಿನ ಕುತೂಹಲಕ್ಕೇ ಕಾರಣವಾಗಿರುವುದು ಹರಿ ನಾಡರ್ ಮತ್ತು ರಾಕೆಟ್ ರಾಜಾ ಅಲಿಯಾಸ್ ಅರ್ಮುಗ ಪಾಂಡಿಯನ್ ಇಬ್ಬರು ಒಂದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು. ಪಣಂಗಟ್ಟು ಪದೈ ಪಕ್ಷವನ್ನು ಸ್ಥಾಪಿಸಿದ ರಾಕೆಟ್ ರಾಜಾ ಈಗ ಹರಿ ನಾಡರ್ ಅವರ ವಿರೋಧಿಯಾಗಿದ್ದಾರೆ. ಹರಿ ನಾಡರ್, ತನ್ನ ‘ಪಣಂಗ್ಕಟ್ಟು ಪದೈ’ ಪಕ್ಷವನ್ನು ನೇತೃತ್ವ ವಹಿಸುತ್ತ, ಆಲಂಗುಲಂ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದು, ಹಿರಿಯ ಕಾರಾಗೃಹ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಈ ಘಟನೆ ಚುನಾವಣಾ ಕಣ್ಗಾವಲುಗಳಿಗೆ ಹೊಸ ರೋಮಾಂಚನ ನೀಡುತ್ತಿದೆ

ಇದೀಗ ಹರಿ ನಾಡರ್ ಮತ್ತು ರಾಕೆಟ್ ರಾಜಾ ಇಬ್ಬರ ನಡುವಿನ ಸ್ಪರ್ಧೆ ಮತದಾರರ ಗಮನ ಸೆಳೆಯುತ್ತಿದ್ದು, ಯಾರು ಆಲಂಗುಲಂ ಕ್ಷೇತ್ರದಲ್ಲಿ ಜಯಶಾಲಿಯಾಗುತ್ತಾರೆ ಎಂಬುದನ್ನು ಮುಂದಿನ ಚುನಾವಣಾ ಫಲಿತಾಂಶವೇ ನಿರ್ಧರಿಸಲಿದೆ.