ಗುವಾಹಟಿ: ಗುವಾಹಟಿಯಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿವೆ. ಪ್ರಸಕ್ತ ಸಾಲಿನ ಅಭಿಯಾನವನ್ನು ಎರಡೂ ತಂಡಗಳು ಇದೇ ಪಂದ್ಯದಿಂದ ಆರಂಭಿಸುತ್ತಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.
ಇರಡು ತಂಡಗಳಿಗೂ ಇದು ಮೊದಲ ಪಂದ್ಯವಾಗಿರುವುದರಿಂದ ಗೆಲುವಿನ ಶುಭಾರಂಭ ಮಾಡಲು ಉತ್ಸಾಹ ಹೆಚ್ಚಿದೆ. ಅಭಿಮಾನಿಗಳಲ್ಲಿ ಕೂಡ ಈ ಪಂದ್ಯಕ್ಕೆ ಅಪಾರ ಕುತೂಹಲ ಕಂಡುಬಂದಿದೆ.
ಆರ್‌ಆರ್ ತನ್ನ ಹೊಸ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದರೆ, ಸಿಎಸ್‌ಕೆ ತನ್ನ ಅನುಭವವನ್ನು ಬಳಸಿಕೊಂಡು ಜಯ ಸಾಧಿಸಲು ಮುಂದಾಗಿದೆ.























