Home Advertisement
Home ಸುದ್ದಿ ದೇಶ QS World Ranking : ವಿಶ್ವದ ಟಾಪ್ 50ರಲ್ಲಿ ಭಾರತದ 4 IITಗಳು

QS World Ranking : ವಿಶ್ವದ ಟಾಪ್ 50ರಲ್ಲಿ ಭಾರತದ 4 IITಗಳು

0
1000

ನವದೆಹಲಿ: 2026ರ QS ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ (ವಿಷಯವಾರು) ಭಾರತಕ್ಕೆ ಮಹತ್ವದ ಸಾಧನೆ ದೊರೆತಿದ್ದು, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ನಾಲ್ಕು ಐಐಟಿಗಳು ವಿಶ್ವದ ಟಾಪ್ 50ರಲ್ಲಿ ಸ್ಥಾನ ಪಡೆದಿವೆ.

ಟಾಪ್ 50 ರಲ್ಲಿರುವ ಭಾರತದ 4 ಐಐಟಿಗಳು : ಈ ಪಟ್ಟಿಯಲ್ಲಿ ಐಐಟಿ ದೆಹಲಿ (IIT Delhi) 36ನೇ ಸ್ಥಾನ ಪಡೆದು ದೇಶದ ಅಗ್ರ ಸಂಸ್ಥೆಯಾಗಿ ಹೊರಹೊಮ್ಮಿದೆ. ಇದರೊಂದಿಗೆ ಐಐಟಿ ಬಾಂಬೆ (IIT Bombay) 42ನೇ ಸ್ಥಾನದಲ್ಲಿದ್ದು, ಐಐಟಿ ಮದ್ರಾಸ್ (IIT Madras) ಹಾಗೂ ಐಐಟಿ ಖರಗ್‌ಪುರ (IIT Kharagpur) ಕೂಡ ಟಾಪ್ 50 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಪ್ರಮುಖ ವಿಭಾಗಗಳಲ್ಲೂ ಭಾರತೀಯ ಸಂಸ್ಥೆಗಳು ಉತ್ತಮ ಸಾಧನೆ ಮಾಡಿವೆ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಐಐಟಿ ಬಾಂಬೆ (44ನೇ ಸ್ಥಾನ) ಮತ್ತು ಐಐಟಿ ದೆಹಲಿ (45ನೇ ಸ್ಥಾನ) ಮೊದಲ ಬಾರಿಗೆ ಟಾಪ್ 50ರಲ್ಲಿ ಸ್ಥಾನ ಪಡೆದಿವೆ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್‌ನಲ್ಲಿ ಐಐಟಿ ದೆಹಲಿ 36ನೇ ಸ್ಥಾನದಲ್ಲಿದ್ದು, ಮೆಕ್ಯಾನಿಕಲ್ ವಿಭಾಗದಲ್ಲಿ 44ನೇ ಸ್ಥಾನ ಪಡೆದುಕೊಂಡಿದೆ. ಪೆಟ್ರೋಲಿಯಂ ಇಂಜಿನಿಯರಿಂಗ್‌ನಲ್ಲಿ ಐಐಟಿ ಮದ್ರಾಸ್ 29ನೇ ಸ್ಥಾನದಲ್ಲಿದ್ದರೆ, ಐಐಟಿ ಖರಗ್‌ಪುರ 28ನೇ ಸ್ಥಾನ ಪಡೆದು ಪಟ್ಟಿಗೆ ಸೇರ್ಪಡೆಯಾಗಿದೆ.

ಇದೇ ವೇಳೆ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) ಡೆವಲಪ್‌ಮೆಂಟ್ ಸ್ಟಡೀಸ್ ವಿಭಾಗದಲ್ಲಿ 26ನೇ ಸ್ಥಾನ ಪಡೆದುಕೊಂಡಿದ್ದು, ಬಿಟ್ಸ್ ಪಿಲಾನಿ (BITS Pilani) ವಿವಿಧ ವಿಷಯಗಳಲ್ಲಿ ಟಾಪ್ 50ರಲ್ಲಿ ಸ್ಥಾನ ಪಡೆದಿದೆ. ದೆಹಲಿ ವಿಶ್ವವಿದ್ಯಾಲಯ (DU) ಕೂಡ ಈ ಬಾರಿ ಉತ್ತಮ ಪ್ರಗತಿ ಸಾಧಿಸಿದೆ.

ಒಟ್ಟಾರೆ, ಈ ವರ್ಷದ ಶ್ರೇಯಾಂಕದಲ್ಲಿ ಭಾರತವು 27ಕ್ಕೂ ಹೆಚ್ಚು ವಿಷಯಗಳಲ್ಲಿ ಟಾಪ್ 50 ಸ್ಥಾನಗಳನ್ನು ಗಳಿಸಿದ್ದು, 54 ಭಾರತೀಯ ಶಿಕ್ಷಣ ಸಂಸ್ಥೆಗಳು ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆ ಮತ್ತೊಮ್ಮೆ ಸಾಬೀತಾಗಿದೆ.