Home Advertisement
Home ಸಿನಿ ಮಿಲ್ಸ್ ಕನ್ನಡಕ್ಕೆ ಖ್ಯಾತ ಸಂಗೀತ ನಿರ್ದೇಶಕನ ‘ಬೃಂದಾವಿಹಾರಿ’ ರಾಗಲಹರಿ

ಕನ್ನಡಕ್ಕೆ ಖ್ಯಾತ ಸಂಗೀತ ನಿರ್ದೇಶಕನ ‘ಬೃಂದಾವಿಹಾರಿ’ ರಾಗಲಹರಿ

0
77

ಬೆಂಗಳೂರು: ಈ ಹಿಂದೆ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾವನ್ನು ಟ್ರೇಲರ್ ಬಿಡುಗಡೆ ಮಾಡದೇ, ಕೇವಲ ಹಾಡುಗಳ ಮೂಲಕವೇ ಪ್ರಚಾರ ಮಾಡಿ ಯಶಸ್ಸು ಕಂಡಿದ್ದ ಶ್ರೀನಿವಾಸರಾಜು, ಇದೇ ತಂತ್ರವನ್ನು ‘ಬೃಂದಾವಿಹಾರಿ’ ಚಿತ್ರಕ್ಕೂ ಅನ್ವಯಿಸಲು ಮುಂದಾಗಿದ್ದಾರೆ. ಚಿತ್ರತಂಡ “ಸಂಗೀತ ಹಬ್ಬ” ರೂಪದಲ್ಲಿ ಪ್ರಚಾರ ಆರಂಭಿಸಲು ತೀರ್ಮಾನಿಸಿದ್ದು ಇಂದು ಚಿತ್ರದ ಮೊದಲ ಹಾಡು ‘ರಾಮಾ ರಾಮಾ’ ಬಿಡುಗಡೆಗೆ ಮಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹೊಸ ರೀತಿಯ ಪ್ರಚಾರ ತಂತ್ರದ ಮೂಲಕ ಗಮನ ಸೆಳೆದಿದ್ದ ಶ್ರೀನಿವಾಸರಾಜು ಮತ್ತೊಮ್ಮೆ ತಮ್ಮ ವಿಭಿನ್ನ ಪ್ರಯತ್ನದೊಂದಿಗೆ ಸುದ್ದಿಯಲ್ಲಿದ್ದಾರೆ. ‘ದಂಡುಪಾಳ್ಯ’ ಖ್ಯಾತ ನಿರ್ದೇಶಕರು ಇದೀಗ ನಟ ಗಣೇಶ್ ಅವರೊಂದಿಗೆ ಕೈಜೋಡಿಸಿರುವ ‘ಬೃಂದಾವಿಹಾರಿ’ ಸಿನಿಮಾವನ್ನು ಹಾಡುಗಳ ಮೂಲಕವೇ ಜನರ ಮುಂದೆ ತರುವ ಯೋಜನೆ ರೂಪಿಸಿದ್ದಾರೆ.

ಸಂಗೀತದ ಮೂಲಕ ಪ್ರಚಾರ – ಹೊಸ ಪ್ರಯೋಗ : ಚಿತ್ರತಂಡದ ಮಾಹಿತಿ ಪ್ರಕಾರ, ಈ ಸಿನಿಮಾದ ಎಲ್ಲಾ ಹಾಡುಗಳನ್ನು ಕ್ರಮವಾಗಿ ಬಿಡುಗಡೆ ಮಾಡುವ ಮೂಲಕ “ಸಂಗೀತ ಹಬ್ಬ”ವನ್ನು ಆರಂಭಿಸಲಾಗುತ್ತದೆ. ಮೊದಲ ಹಾಡು ‘ರಾಮಾ ರಾಮಾ’ ಇಂದು ಬಿಡುಗಡೆಯಾಗಿದ್ದು. ಈ ಹಾಡು ಚಿತ್ರದ ಭಾವನಾತ್ಮಕ ಅಂಶಗಳನ್ನು ಪ್ರತಿಬಿಂಬಿಸಿದೆ.

ಈ ಚಿತ್ರಕ್ಕೆ ಸಂಗೀತ ನೀಡುತ್ತಿರುವ ಹೇಶಮ್ ಅಬ್ದುಲ್ ವಹಾಬ್ ಕನ್ನಡಕ್ಕೆ ಇದೇ ಮೊದಲ ಬಾರಿಗೆ ಕಾಲಿಡುತ್ತಿದ್ದಾರೆ. ಚಿತ್ರದ ಎಲ್ಲಾ ಏಳು ಹಾಡುಗಳಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.

‘ಬೃಂದಾವಿಹಾರಿ’ ಒಂದು ಕೌಟುಂಬಿಕ ಪ್ರೇಮಕಥೆಯಾಗಿದ್ದು, ಗಣೇಶ್ ಅವರಿಗೆ ನಾಯಕಿಯರಾಗಿ ದೇವಿಕಾ ಭಟ್ ಮತ್ತು ಮಾಳವಿಕ ಶರ್ಮ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಸಮೃದ್ಧಿ ವಿ. ಮಂಜುನಾಥ್ ನಿರ್ಮಿಸುತ್ತಿದ್ದಾರೆ. ಐಪಿಎಲ್ ಟೂರ್ನಿ ಮುಗಿದ ಬಳಿಕ, ಅಂದರೆ ಸುಮಾರು ಎರಡು ತಿಂಗಳ ನಂತರ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಇದೆ. ನಟ ಗಣೇಶ್ ಅವರ ಮುಂದಿನ ಸಿನಿಮಾ ಇದೇ ಆಗಲಿರುವುದು ವಿಶೇಷವಾಗಿದೆ.