Home Advertisement
Home ಸಿನಿ ಮಿಲ್ಸ್ ಕೋಟಿ ಬೆಲೆಯ Defender ಜೊತೆ ಡಿಂಪಲ್ ಕ್ವೀನ್ ಸವಾರಿ; ರಚ್ಚು ಕನಸು ರಿಯಲ್ ಆಗಲು ಶಿವಣ್ಣ...

ಕೋಟಿ ಬೆಲೆಯ Defender ಜೊತೆ ಡಿಂಪಲ್ ಕ್ವೀನ್ ಸವಾರಿ; ರಚ್ಚು ಕನಸು ರಿಯಲ್ ಆಗಲು ಶಿವಣ್ಣ ಮಾಡಿದ್ದೇನು?

0
30

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಬಹು ದಿನಗಳ ಕನಸು ಕೊನೆಗೂ ನನಸಾಗಿದೆ. ಐಷಾರಾಮಿ ಕಾರುಗಳ ಪ್ರೇಮಿಯಾಗಿರುವ ರಚಿತಾ, ಇದೀಗ ಕೋಟಿ ಬೆಲೆಯ ‘ಲ್ಯಾಂಡ್ ರೋವರ್ ಡಿಫೆಂಡರ್’ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇತ್ತೀಚೆಗೆ ‘ಲಕ ಲಕ ಲ್ಯಾಂಬೋರ್ಘಿನಿ’ ಹಾಡಿನಲ್ಲಿ ಮಿಂಚಿದ್ದ ಅವರು, ಲ್ಯಾಂಬೋರ್ಘಿನಿ ಅಲ್ಲದೆ ಡಿಫೆಂಡರ್ ಕಾರನ್ನೇ ಆಯ್ಕೆ ಮಾಡಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ. ಸದ್ಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ರಚಿತಾ, ಈ ನಡುವೆ ಹೊಸ ಕಾರು ಖರೀದಿ ಮಾಡಿ ಸುದ್ದಿಯಾಗಿದ್ದಾರೆ.

ಇದರಲ್ಲಿ ವಿಶೇಷ ಏನೆಂದರೆ, ತಮ್ಮ ಹೊಸ ಕಾರನ್ನು ಮೊದಲು ತಮ್ಮ ನೆಚ್ಚಿನ ನಟ ಡಾ. ಶಿವರಾಜ್‌ಕುಮಾರ್ ಅವರೇ ಚಾಲನೆ ಮಾಡಬೇಕು ಎಂಬ ಆಸೆಯನ್ನು ರಚಿತಾ ವ್ಯಕ್ತಪಡಿಸಿದ್ದರು.ಅದರಂತೆ, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸೆಟ್‌ಗೆ ತಮ್ಮ ಡಿಫೆಂಡರ್ ಕಾರನ್ನು ತಂದ ರಚಿತಾ, ಶಿವಣ್ಣ ಹಾಗೂ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ತೋರಿಸಿದರು. ಕಾರನ್ನು ನೋಡಿ ಮೆಚ್ಚಿದ ಶಿವಣ್ಣ, ಸ್ವತಃ ಡ್ರೈವ್ ಮಾಡಿ ರಚಿತಾ ಅವರ ಆಸೆಯನ್ನು ಈಡೇರಿಸಿದರು.

ತಮ್ಮ ಶ್ರಮ ಮತ್ತು ದುಡಿಮೆಯಿಂದ ಈ ಕಾರನ್ನು ಖರೀದಿಸಿದ ರಚಿತಾ ರಾಮ್ ಅವರಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ‘ಡಿಕೆಡಿ’ ಸೆಟ್‌ನಲ್ಲಿ ನಡೆದ ಈ ಸಂಭ್ರಮದ ಕ್ಷಣಗಳ ವೀಡಿಯೋಗಳು ಈಗ ವೈರಲ್ ಆಗಿವೆ.

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ‘ಲ್ಯಾಂಡ್ ಲಾರ್ಡ್’ ಮತ್ತು ‘ಕಲ್ಟ್’ ಸಕ್ಸಸ್ ಬಳಿಕ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಶಬರಿ ಸರ್ಚಿಂಗ್ ಫಾರ್ ರಾವಣ’ ಹಾಗೂ ‘ಲವ್ ಮೀ ಆರ್ ಹೇಟ್ ಮೀ’ ಚಿತ್ರಗಳ ಶೂಟಿಂಗ್ ಮುಗಿದಿದ್ದು, ಸದ್ಯ ‘ಅಯೋಗ್ಯ-2’ ಮತ್ತು ‘ಕ್ರಿಮಿನಲ್’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.