ಬೇಸಿಗೆಯ ಸುಡುವ ಬಿಸಿಲಿಗೆ ಯಾರಿಗಾದರು ಹೊಟ್ಟೆ ತಣ್ಣಗೆ ಇರಬೇಕು ಎಂಬ ಇಚ್ಛೆಯಿಂದ ತಂಪು ಪಾನೀಯದತ್ತ ಮುಖ ಮಾಡುತ್ತಾರೆ. ಹಾಗೇ ಈ ಬೇಸಿಗೆಯಲ್ಲಿ ಎಂತಹ ಪಾನೀಯಗಳೂ ದೇಹಕ್ಕೆ ಒಳ್ಳೆಯದ್ದು ಎಂದು ತಿಳಿಯುವುದು ಬಹಳ ಅವಶ್ಯ. ಇಂತಹ ಬಿಸಿಲಿಗೆ ಮತ್ತು ದೇಹವನ್ನ ಸ್ಥಿರವಾಗಿಡಲು ಎಳನೀರು (Coconut Water) ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದೆ. ಇದು ದೇಹಕ್ಕೆ ಎಲೆಕ್ಟ್ರೋಲೈಟ್ಗಳನ್ನು ನೀಡಿ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಆದ್ರೆ “ಅತಿಯಾದರೆ ಅಮೃತವೂ ವಿಷ” ಎಂಬಂತೆ, ಎಳನೀರನ್ನು ಮಿತಿಮೀರಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.
ಹೌದು ದೇಹಕ್ಕೆ ಕೆಲವು ಪಾನೀಯಗಳು ಎಷ್ಟು ಒಳ್ಳಯದ್ದೂ, ಅಷೇ ಪರಿಣಾಮಕಾರಿಯಾಗಿರುತ್ತವೆ. ಹೀಗಾಗಿ ನೀವು ಸೇವಿಸುವ ಪಾನೀಯ, ಪದಾರ್ಥಗಳು ಮಿತವಾಗಿ ಮತ್ತು ದೇಹಕ್ಕೆ ಹೊಂದಿಕೊಳ್ಳುವಷ್ಟೇ ಸೇವಿಸಿ. ಹೀಗೆ ಮಾಡಿದರೆ ನಿಮ್ಮ ಜೊತೆ ನಿಮ್ಮ ಆರೋಗ್ಯವು ಚನ್ನಾಗಿರುತ್ತದೆ. ಅದರಲ್ಲಿಯು ಈ ಎಳೆನೀರು ಸಹ ದೇಹಕ್ಕೆ ಮಿತವಾಗಿರಬೇಕು.
ಅತಿಯಾದ ಎಳನೀರು ಸೇವನೆಯಿಂದ ಉಂಟಾಗುವ ಪ್ರಮುಖ ಸಮಸ್ಯೆಗಳು ಇಲ್ಲಿವೆ:
- ಸ್ನಾಯು ದೌರ್ಬಲ್ಯ ಮತ್ತು ಹೃದಯದ ತೊಂದರೆ: ಎಳನೀರಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಆದ್ರೆ ರಕ್ತದಲ್ಲಿ ಇದರ ಪ್ರಮಾಣ ಅತಿಯಾದಾಗ ‘ಹೈಪರ್ಕಲೇಮಿಯಾ’ (Hyperkalemia) ಎಂಬ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಸ್ನಾಯುಗಳು ದೌರ್ಬಲ್ಯಗೊಳ್ಳುತ್ತವೆ. ಹಾಗೇ ಹೃದಯ ಬಡಿತದಲ್ಲಿ ಏರುಪೇರಾಗಬಹುದು (Irregular heartbeat). ಅಲ್ಲದೇ ತೀವ್ರ ಸಂದರ್ಭಗಳಲ್ಲಿ ಹೃದಯಾಘಾತದ ಅಪಾಯವೂ ಬರಬಹುದು. ಜೊತೆಗೆ
- ಎಳನೀರು ಸೇವಿಸುವಾಗ ಎಚ್ಚರಿಕೆ ವಹಿಸಬೇಕು:
- ಮೂತ್ರಪಿಂಡದ ಕಾಯಿಲೆ ಇರುವವರು: ಕಿಡ್ನಿ ಸಮಸ್ಯೆ ಇರುವವರಿಗೆ ದೇಹದಿಂದ ಹೆಚ್ಚುವರಿ ಪೊಟ್ಯಾಸಿಯಮ್ ಅನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ. ಇದು ರಕ್ತದಲ್ಲಿ ವಿಷಕಾರಿಯಾಗಿ ಪರಿಣಮಿಸಬಹುದು.
- ಮಧುಮೇಹಿಗಳು (Diabetics): ಎಳನೀರಿನಲ್ಲಿ ನೈಸರ್ಗಿಕ ಸಕ್ಕರೆ ಇರುತ್ತದೆ. ಅತಿಯಾದ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹಠಾತ್ತಾಗಿ ಹೆಚ್ಚಿಸಬಹುದು.
- ಶಸ್ತ್ರಚಿಕಿತ್ಸೆಗೆ ಒಳಗಾಗುವವರು: ರಕ್ತದೊತ್ತಡದ ಮೇಲೆ ಪ್ರಭಾವ ಬೀರುವುದರಿಂದ, ಯಾವುದೇ ಶಸ್ತ್ರಚಿಕಿತ್ಸೆಗೆ ಕನಿಷ್ಠ ಎರಡು ವಾರಗಳ ಮೊದಲು ಎಳನೀರು ಸೇವನೆಯನ್ನು ನಿಯಂತ್ರಿಸುವುದು ಉತ್ತಮ.
2.ಜೀರ್ಣಕ್ರಿಯೆಯ ಏರುಪೇರು: ಎಳನೀರಿನಲ್ಲಿ ಹುದುಗುವ ಕಾರ್ಬೋಹೈಡ್ರೇಟ್ಗಳಿರುತ್ತವೆ. ಹೀಗಾಗಿ ಇದರಿಂದ ಆರೋಗ್ಯವಾಗಿರಲೂ ಅತಿಯಾದ ಎಳನೀರು ದೇಹಕ್ಕೆ ಅಪಾಯ ತರಬಹುದು. ಜೀರ್ಣಾಂಗವ್ಯೂಹದ ಮೇಲೆ ಒತ್ತಡ ಬಿದ್ದು ತೊಂದರೆಯಾಗಬಹುದು. ಬೇಸಿಗೆಯಲ್ಲಿ ಕೆಲವರು ಉಪಹಾರ ಮತ್ತು ಊಟದ ಬದಲಿಗೆ ಕೆವಲ ಎಳನೀರನ್ನೇ ಸೇವಿಸಲಿ ಇಷ್ಟ ಪಡುತ್ತಾರೆ. ಹೀಗಿರುವಾಗ ದೇಹದ ಜೀರ್ಣಾಂಗ ವ್ಯವಸ್ಥೆಯ ಮೇಲೆ ತೊಂದರೆ ಉಂಟಾಗುವುದು ಸಹಜ. ಬರೀ ತೆಂಗಿನ ನೀರು ಕುಡಿಯುದರಿಂದ, ಹೊಟ್ಟೆ ಉಬ್ಬುವುದು (Bloating), ಹೊಟ್ಟೆ ಸೆಳೆತ ಮತ್ತು ಅತಿಸಾರ (Diarrhea) ಉಂಟಾಗಬಹುದು.
- ರಕ್ತದೊತ್ತಡದಲ್ಲಿ ಕುಸಿತ (Low BP): ಎಳನೀರು ನೈಸರ್ಗಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಈಗಾಗಲೇ ಕಡಿಮೆ ರಕ್ತದೊತ್ತಡ (Low BP) ಇರುವವರು ಅತಿಯಾಗಿ ಎಳನೀರು ಕುಡಿದರೆ, ರಕ್ತದೊತ್ತಡ ಅಪಾಯಕಾರಿ ಮಟ್ಟಕ್ಕೆ ಕುಸಿಯುವ ಸಾಧ್ಯತೆ ಇರುತ್ತದೆ.
ಓದುಗರ ಗಮನಕ್ಕೆ: ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಒಂದು ಎಳನೀರು ಕುಡಿಯುವುದು ಸುರಕ್ಷಿತ. ಆದರೆ ಯಾವುದೇ ಆರೋಗ್ಯ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯುವುದು ಉತ್ತಮ.























