ಲೇಹ್: ಲಡಾಖ್‌ನಲ್ಲಿ ನಡೆದ ಪ್ರತಿಭಟನೆಗಳ ಹಿನ್ನೆಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ಬಂಧಿತರಾಗಿದ್ದ ಪರಿಸರ ಹೋರಾಟಗಾರ ಹಾಗೂ ಶಿಕ್ಷಣತಜ್ಞ ಸೋನಂ ವಾಂಗ್ಚುಕ್ (Sonam Wangchuk) ಅವರ ಬಂಧನವನ್ನು ಕೇಂದ್ರ ಸರ್ಕಾರ ಶನಿವಾರ ರದ್ದುಗೊಳಿಸಿದೆ. ಸುಮಾರು ಐದು ತಿಂಗಳ ಬಂಧನದ ಬಳಿಕ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಲಡಾಖ್ ಪ್ರದೇಶದಲ್ಲಿ ಶಾಂತಿ ಮತ್ತು ಸಂವಾದಕ್ಕೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಲಾಗಿದೆ.
ಸೆಪ್ಟೆಂಬರ್ 2025 ಪ್ರತಿಭಟನೆಗಳ ಹಿನ್ನೆಲೆ : 2025ರ ಸೆಪ್ಟೆಂಬರ್‌ನಲ್ಲಿ ಲಡಾಖ್ (Ladakh)ನಲ್ಲಿ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ ರಾಜ್ಯದ ಸ್ಥಾನಮಾನ ಮತ್ತು ಸಂವಿಧಾನದ 6ನೇ ಅನುಸೂಚಿಯಡಿ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ (Sixth Schedule of the Indian Constitution) ಭಾರೀ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ನಡೆದ ಹಿಂಸಾತ್ಮಕ ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದರು.
ಈ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ, ಲೇಹ್ ಅಪೆಕ್ಸ್ ಬಾಡಿಯ ನಾಯಕನಾಗಿದ್ದ ಸೋನಂ ವಾಂಗ್ಚುಕ್ ಅವರ ಮೇಲೆ ಹಿಂಸಾಚಾರ ಪ್ರಚೋದನೆ ಆರೋಪ ಮಾಡಲಾಗಿತ್ತು ಮತ್ತು National Security Act ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು.
ಸುಪ್ರೀಂ ಕೋರ್ಟ್ ಪರಿಶೀಲನೆಯ ಬಳಿಕ ನಿರ್ಧಾರ: ಇತ್ತೀಚೆಗೆ ಪ್ರಕರಣದ ಕುರಿತು ನ್ಯಾಯಾಂಗ ಪರಿಶೀಲನೆ ನಡೆದ ಹಿನ್ನೆಲೆಯಲ್ಲಿ ಹಾಗೂ ಹೊಸ ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಸ್ವೀಕರಿಸಿದ ನಂತರ ಕೇಂದ್ರ ಸರ್ಕಾರ ಈ ಬಂಧನವನ್ನು ರದ್ದುಗೊಳಿಸಿದೆ. ಸರ್ಕಾರವು ಲಡಾಖ್ ಸಮಸ್ಯೆಗಳನ್ನು ಪರಿಹರಿಸಲು ಸಂವಾದ ಮತ್ತು ಸಮಿತಿಗಳ ಮೂಲಕ ಪರಿಹಾರ ಹುಡುಕುವ ಭರವಸೆ ನೀಡಿದೆ. ಲಡಾಖ್ ಕಾರ್ಯಕರ್ತೆ ಸೋನಮ್ ವಾಂಗ್ಚುಕ್ ಅವರ ಬಂಧನ ಆದೇಶವನ್ನು ಕೇಂದ್ರ ರದ್ದುಗೊಳಿಸಿದ್ದು. ಕಳೆದ ಅಕ್ಟೋಬರ್‌ನಿಂದ ಬಂಧನವನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಅಂಗ್ಮೊ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದ್ದು. ಮಾರ್ಚ್ 17 ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಿದೆ.
ಲಡಾಖ್ ಅಭಿವೃದ್ಧಿಗೆ ವಾಂಗ್ಚುಕ್ ಕೊಡುಗೆ : ಸೋನಂ ವಾಂಗ್ಚುಕ್ ಅವರು ಲಡಾಖ್ ಪ್ರದೇಶದಲ್ಲಿ ಶಿಕ್ಷಣ ಮತ್ತು ಪರಿಸರ ಕ್ಷೇತ್ರಗಳಲ್ಲಿ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ.
1988ರಲ್ಲಿ ಅವರು Students’ Educational and Cultural Movement of Ladakh (SECMOL) ಸಂಸ್ಥೆಯನ್ನು ಸ್ಥಾಪಿಸಿದರು. ಇದರ ಮೂಲಕ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ‘ಆಪರೇಷನ್ ನ್ಯೂ ಹೋಪ್’ ಎಂಬ ಸುಧಾರಣಾ ಯೋಜನೆಯನ್ನು ಜಾರಿಗೆ ತಂದರು.
‘ಐಸ್ ಸ್ತೂಪ’ ಆವಿಷ್ಕಾರಕ್ಕೆ ಜಾಗತಿಕ ಪ್ರಶಂಸೆ: ಲಡಾಖ್ ಪ್ರದೇಶದಲ್ಲಿ ನೀರಿನ ಕೊರತೆಯನ್ನು ನಿವಾರಿಸಲು ಅವರು ಅಭಿವೃದ್ಧಿಪಡಿಸಿದ Ice Stupa ಎಂಬ ಕೃತಕ ಹಿಮನದಿ ತಂತ್ರಜ್ಞಾನವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ತಂತ್ರಜ್ಞಾನವು ಹಿಮಾಲಯ ಪ್ರದೇಶದಲ್ಲಿ ನೀರಿನ ಸಂಗ್ರಹಣೆ ಮತ್ತು ಕೃಷಿಗೆ ಮಹತ್ವದ ಸಹಾಯ ಮಾಡುತ್ತಿದೆ.
‘3 ಈಡಿಯಟ್ಸ್’ ಸಿನಿಮಾಗೆ ಪ್ರೇರಣೆ: 2009ರಲ್ಲಿ ಬಿಡುಗಡೆಯಾದ 3 Idiots ಚಿತ್ರದಲ್ಲಿನ ಫುನ್ಸುಖ್ ವಾಂಗ್ಡು ಪಾತ್ರಕ್ಕೆ ಸೋನಂ ವಾಂಗ್ಚುಕ್ ಅವರ ಜೀವನವೇ ಪ್ರೇರಣೆ ಎಂದು ಹೇಳಲಾಗುತ್ತದೆ. ಈ ಪಾತ್ರವನ್ನು ನಟ ಅಮಿರ್ ಖಾನ್ (Aamir Khan) ನಿರ್ವಹಿಸಿದ್ದರು.
ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳು : ಸೋನಂ ವಾಂಗ್ಚುಕ್ ಅವರಿಗೆ 2018ರಲ್ಲಿ ಪ್ರತಿಷ್ಠಿತ Ramon Magsaysay Award ಸೇರಿದಂತೆ ಹಲವು ಅಂತರಾಷ್ಟ್ರೀಯ ಗೌರವಗಳು ಲಭಿಸಿವೆ. ಪರಿಸರ ಸಂರಕ್ಷಣೆ ಮತ್ತು ಸ್ಥಿರ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಅವರನ್ನು ಜಾಗತಿಕ ಮಟ್ಟದಲ್ಲಿ ಪ್ರಶಂಸಿಸಲಾಗಿದೆ.





















