Home Advertisement
Home ಸುದ್ದಿ ವಿದೇಶ AI – ಪ್ರವಾಹ ಮುನ್ಸೂಚನೆ: Google ತಂತ್ರಜ್ಞಾನದತ್ತ ಜಾಗತಿಕ ಗಮನ

AI – ಪ್ರವಾಹ ಮುನ್ಸೂಚನೆ: Google ತಂತ್ರಜ್ಞಾನದತ್ತ ಜಾಗತಿಕ ಗಮನ

0
77

150 ದೇಶಗಳ ಪ್ರವಾಹ ಡೇಟಾ ವಿಶ್ಲೇಷಣೆ: ಗೂಗಲ್ ಹೊಸ ಸಂಶೋಧನೆ

ನವದೆಹಲಿ: ನಗರ ಪ್ರದೇಶಗಳಲ್ಲಿ ಸಂಭವಿಸುವ ಹಠಾತ್ ಪ್ರವಾಹವನ್ನು ಮುಂಚಿತವಾಗಿ ಗುರುತಿಸಲು Google ಹೊಸ ಕೃತಕ ಬುದ್ಧಿಮತ್ತೆ (AI) ಆಧಾರಿತ ಮುನ್ಸೂಚನಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ಹೊಸ ವ್ಯವಸ್ಥೆ ನಗರ ಪ್ರದೇಶಗಳಲ್ಲಿ ಸಂಭವಿಸಬಹುದಾದ ಹಠಾತ್ ಪ್ರವಾಹವನ್ನು 24 ಗಂಟೆಗಳ ಮುಂಚಿತವಾಗಿ ಮುನ್ಸೂಚಿಸಲು ಸಾಧ್ಯ ಎಂದು ಕಂಪನಿ ತಿಳಿಸಿದೆ.

ಈ ಕುರಿತು ಗೂಗಲ್‌(Google)ನ ಸಿಇಒ ಸುಂದರ್ ಪಿಚೈ (Sundar Pichai) ಅವರು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಜಾಗತಿಕ ಮಟ್ಟದಲ್ಲಿ ಪ್ರವಾಹದ ಬಗ್ಗೆ ಮುಂಚಿತ ಎಚ್ಚರಿಕೆ ನೀಡಲು ಈ ತಂತ್ರಜ್ಞಾನ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.

AI ಆಧಾರಿತ ಹೊಸ ಮಾದರಿ : ಗೂಗಲ್ ಅಭಿವೃದ್ಧಿಪಡಿಸಿರುವ ಈ ಹೊಸ ಮಾದರಿ ನಗರ ಪ್ರದೇಶಗಳಲ್ಲಿ ಸಂಭವಿಸುವ Urban Flash Floods ಗುರುತಿಸಲು ವಿನ್ಯಾಸಗೊಳಿಸಲಾಗಿದೆ. ಪ್ರವಾಹದ ಅಪಾಯವನ್ನು ಮುಂಚಿತವಾಗಿ ಅಂದಾಜಿಸಲು ಹಾಗೂ ಮಳೆ ಪ್ರಮಾಣ, ನದಿಗಳ ನೀರಿನ ಮಟ್ಟ, ನಗರ ಜಲವ್ಯವಸ್ಥೆ, ಹವಾಮಾನ ಮಾದರಿಗಳು ಇಂತಹ ಹಲವು ಡೇಟಾವನ್ನು AI ವಿಶ್ಲೇಷಿಸುತ್ತದೆ.

‘GroundSource’ ಎಂಬ ಹೊಸ ಡೇಟಾಸೆಟ್: ಹಠಾತ್ ಪ್ರವಾಹಗಳ ಬಗ್ಗೆ ಸರಿಯಾದ ಡೇಟಾ ಕೊರತೆಯನ್ನು ನಿವಾರಿಸಲು ಗೂಗಲ್ GroundSource ಎಂಬ ಹೊಸ ವ್ಯವಸ್ಥೆಯನ್ನು ರೂಪಿಸಿದೆ. ಗೂಗಲ್ ತನ್ನ ಹೊಸ ಎಐ (AI) ತಂತ್ರಜ್ಞಾನ ಆಧಾರಿತ Groundsource ಸೇವೆಯನ್ನು ನಿನ್ನೆ, ಅಂದರೆ ಮಾರ್ಚ್ 12, 2026 ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದರ ಮೂಲಕ 150ಕ್ಕೂ ಹೆಚ್ಚು ದೇಶಗಳಲ್ಲಿ, 2.6 ಮಿಲಿಯನ್‌ಗಿಂತ ಹೆಚ್ಚು ಐತಿಹಾಸಿಕ ಪ್ರವಾಹ ಘಟನೆಗಳನ್ನು, AI ಸಹಾಯದಿಂದ ಗುರುತಿಸಲಾಗಿದೆ.

ಈ ಡೇಟಾಸೆಟ್ ಅನ್ನು ಜಾಗತಿಕ ಸಂಶೋಧಕರಿಗೆ ಸಹಾಯವಾಗಲೆಂದು ಮುಕ್ತ ಮೂಲ (open-source) ರೂಪದಲ್ಲಿ ಬಿಡುಗಡೆ ಮಾಡಲಾಗಿದೆ.

Flood Hubನಲ್ಲಿ ಲೈವ್ ಮಾಹಿತಿ : ಈ ಮುನ್ಸೂಚನಾ ವ್ಯವಸ್ಥೆಯನ್ನು ಈಗ Google Flood Hub ನಲ್ಲಿ ಲೈವ್ ಮಾಡಲಾಗಿದೆ. ಇದರ ಮೂಲಕ ನಗರ ಪ್ರದೇಶಗಳಲ್ಲಿ ಸಂಭವಿಸಬಹುದಾದ ಹಠಾತ್ ಪ್ರವಾಹದ ಬಗ್ಗೆ ಮುಂಚಿತ ಮಾಹಿತಿ ಪಡೆಯಬಹುದು.
ಈ ವ್ಯವಸ್ಥೆ ಸರ್ಕಾರಗಳು ಮತ್ತು ವಿಪತ್ತು ನಿರ್ವಹಣಾ ಸಂಸ್ಥೆಗಳಿಗೆ ಮಹತ್ವದ ಸಾಧನವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ AI ಬಳಕೆ: ಇತ್ತೀಚೆಗೆ ನಡೆದ India AI Impact Summit 2026 ಕಾರ್ಯಕ್ರಮದಲ್ಲಿ ಮಾತನಾಡಿದ Sundar Pichai, ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿರುವ ನೈಸರ್ಗಿಕ ವಿಕೋಪಗಳನ್ನು ಎದುರಿಸಲು AI ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ Google 2018 ರಿಂದ ನದಿ ಪ್ರವಾಹಗಳ ಮುನ್ಸೂಚನೆ ನೀಡುತ್ತಿದೆ. ಈ ಹೊಸ Groundsource ತಂತ್ರಜ್ಞಾನವು ಮುಖ್ಯವಾಗಿ ನಗರಗಳ ‘ಹಠಾತ್ ಪ್ರವಾಹ’ಗಳನ್ನು ಎದುರಿಸಲು ಸಹಾಯ ಮಾಡುತ್ತದೆ

ಅವರ ಪ್ರಕಾರ, AI ಆಧಾರಿತ ಮಾದರಿಗಳು ಮುಂಗಾರು ಮಳೆ ಮತ್ತು ಪ್ರವಾಹ ಮುನ್ಸೂಚನೆಯನ್ನು ಹೆಚ್ಚು ನಿಖರವಾಗಿಸುತ್ತಿವೆ. ಲಕ್ಷಾಂತರ ರೈತರು ಮತ್ತು ನಾಗರಿಕರಿಗೆ ಮುಂಚಿತ ಎಚ್ಚರಿಕೆಗಳನ್ನು ತಲುಪಿಸಲು ಗೂಗಲ್ ಕೆಲಸ ಮಾಡುತ್ತಿದೆ. ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಬೇಕು.

ಹವಾಮಾನ ಬದಲಾವಣೆಗೆ ತಂತ್ರಜ್ಞಾನ ಪರಿಹಾರ : ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾಗುವ ಅತಿವೃಷ್ಟಿ ಮತ್ತು ಹಠಾತ್ ಪ್ರವಾಹಗಳ ಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ AI ಆಧಾರಿತ ಮುನ್ಸೂಚನಾ ವ್ಯವಸ್ಥೆಗಳು, ಜೀವಹಾನಿ ಕಡಿಮೆ ಮಾಡಲು, ನಗರಗಳ ವಿಪತ್ತು ನಿರ್ವಹಣೆಗೆ, ಸರ್ಕಾರಗಳ ಯೋಜನೆಗಳಿಗೆ, ಮಹತ್ವದ ಸಹಾಯ ಮಾಡಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.