Home Advertisement
Home ಸಿನಿ ಮಿಲ್ಸ್ ಕೆಡಿ – ದಿ ಡೆವಿಲ್’ ಸಿನಿಮಾದ ‘ಸರ್ಸೆ ನಿನ್ನ ಸೆರಗು ಸರ್ಸೆ’ ಹೊಸ ಹಾಡಿಗೆ ನೋರಾ...

ಕೆಡಿ – ದಿ ಡೆವಿಲ್’ ಸಿನಿಮಾದ ‘ಸರ್ಸೆ ನಿನ್ನ ಸೆರಗು ಸರ್ಸೆ’ ಹೊಸ ಹಾಡಿಗೆ ನೋರಾ ಫತೇಹಿ ಸ್ಟೆಪ್ಸ್ ಮ್ಯಾಜಿಕ್

0
45


ನೋರಾ ಫತೇಹಿ

ಕೆಡಿ – ದಿ ಡೆವಿಲ್ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದ್ದು, ಇದೀಗ ಚಿತ್ರದ ಮತ್ತೊಂದು ವಿಶೇಷ ಹಾಡು ಬಿಡುಗಡೆಯಾಗಲು ಸಜ್ಜಾಗಿದೆ. ಪ್ರೇಮ್ ಕೆಡಿ ಸಿನಿಮಾ ಧ್ರುವ ಸರ್ಜಾ ಅಭಿನಯದಲ್ಲಿ ಮೂಡಿಬರುತ್ತಿರುವುದರಿಂದ ಸಿನಿಪ್ರಿಯರಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ. ಸಿನಿಮಾ ಇದೇ ಏಪ್ರಿಲ್ 30ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಈಗಾಗಲೇ ಚಿತ್ರದ ಮೊದಲ ಹಾಡಾದ ಅಣ್ತಮ್ಮ ಜೋಡೆತ್ತು ಕಣೋ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಆ ಹಾಡಿನ ಭರ್ಜರಿ ಪ್ರತಿಕ್ರಿಯೆಯಿಂದಾಗಿ ಚಿತ್ರದ ಬಗ್ಗೆ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ಇದೀಗ ಇದೇ ಚಿತ್ರದಿಂದ ಮತ್ತೊಂದು ಮನರಂಜನಾತ್ಮಕ ಹಾಡಾದ ಸರ್ಸೆ ನಿನ್ನ ಸೆರಗು ಸರ್ಸೆ ಮಾರ್ಚ್ 14ರಂದು ಬಿಡುಗಡೆಯಾಗಲಿದ್ದು, ಈ ಹಾಡು ಬಿಡುಗಡೆಯಾದ ಬಳಿಕ ಮಿಲಿಯನ್‌ಗಟ್ಟಲೆ ವೀಕ್ಷಣೆಗಳನ್ನು ಗಳಿಸುವುದು ಖಚಿತ ಎಂಬ ಭಾರೀ ವಿಶ್ವಾಸದಲ್ಲಿ ಚಿತ್ರತಂಡ ಇದೆ.

ಈ ಹಾಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ವಿವಿಧ ಭಾಷೆಗಳಲ್ಲಿ ಗಾಯಕರು ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ಈ ಹಾಡನ್ನು ಪ್ರತಿಭಾವಂತ ಗಾಯಕಿ ಐಶ್ವರ್ಯಾ ರಂಗರಾಜನ್ ಹಾಡಿದ್ದಾರೆ. ತೆಲುಗು ಮತ್ತು ಹಿಂದಿ ಖ್ಯಾತ ಗಾಯಕಿ ಮಂಗ್ಲಿ ಧ್ವನಿ ನೀಡಿದ್ದಾರೆ. ಮಲಯಾಳಂ ಆವೃತ್ತಿಯಲ್ಲಿ ಸಿತಾರಾ ಕೃಷ್ಣಕುಮಾರ್ ಹಾಡಿದರೆ, ತಮಿಳುಭಾಷೆಯಲ್ಲಿ ರಾಜಲಕ್ಷ್ಮೀ ಸೆಂಥಿಲ್‍ಗಣೇಶನ್‍ ಧ್ವನಿ ನೀಡಿದ್ದಾರೆ. ವಿವಿಧ ಭಾಷೆಗಳಲ್ಲೂ ಹಾಡು ಬಿಡುಗಡೆ ಆಗುತ್ತಿರುವುದರಿಂದ ಈ ಹಾಡು ದೇಶಾದ್ಯಂತ ಹೆಚ್ಚು ಜನರಿಗೆ ತಲುಪುವ ನಿರೀಕ್ಷೆ ಇದೆ.

ಈ ಹಾಡಿನ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಬಾಲಿವುಡ್ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ವಿಶೇಷವಾಗಿ ಹೆಜ್ಜೆ ಹಾಕಿರುವುದು. ತನ್ನ ಅದ್ಭುತ ಡ್ಯಾನ್ಸ್ ಸ್ಟೆಪ್ಸ್‌ಗಾಗಿ ವಿಶ್ವದಾದ್ಯಂತ ಪ್ರಸಿದ್ಧಿಯಾಗಿರುವ ನೋರಾ ಫತೇಹಿ, ಈ ಹಾಡಿನ ಮೂಲಕ ಕನ್ನಡ ಸಿನಿಪ್ರಿಯರ ಗಮನ ಸೆಳೆಯಲಿದ್ದಾರೆ. ಅವರ ಸೊಗಸಾದ ನೃತ್ಯ ಈ ಹಾಡಿನ ಮುಖ್ಯ ಹೈಲೈಟ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ.

ಸರ್ಸೆ ನಿನ್ನ ಸೆರಗು ಸರ್ಸೆ ಹಾಡು ಮಾರ್ಚ್ 14ರಂದು ಸಂಜೆ 5:05ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.
ಚಿತ್ರವನ್ನು ಕೆವಿನ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಅದ್ದೂರಿಯಾಗಿ ನಿರ್ಮಿಸಲಾಗಿದೆ. ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ತಾಂತ್ರಿಕವಾಗಿ ಕೂಡ ಈ ಚಿತ್ರವನ್ನು ಅತ್ಯಂತ ಅದ್ದೂರಿಯಾಗಿ ನಿರ್ಮಿಸಿರುವುದಾಗಿ ಚಿತ್ರತಂಡ ಹೇಳಿದೆ.

ದಿ ಡೆವಿಲ್‍ ಚಿತ್ರಕ್ಕೆ ಪ್ರೇಮ್‍ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್‍ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ.

ಚಿತ್ರದಲ್ಲಿ ಅರ್ಜುನ್‍ ಜನ್ಯ ಸಂಗೀತ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್‍, ರಮೇಶ್‍ ಅರವಿಂದ್‍, ಸಂಜಯ್‍ ದತ್‍, ಶಿಲ್ಪಾ ಶೆಟ್ಟಿ ಮುಂತಾದವರು ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದು, ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ.