ಢಾಕಾ: ಬಾಂಗ್ಲಾಕ್ಕೆ ಭಾರತವು ಮಂಗಳವಾರ 5 ಸಾವಿರ ಟನ್ ಡೀಸೆಲ್ ಪೂರೈಸಿದೆ. ತೈಲ ಒಪ್ಪಂದದ ಪ್ರಕಾರ ಬಾಂಗ್ಲಾಕ್ಕೆ ನೆರೆಯ ಭಾರತ ಮಂಗಳವಾರ 5000 ಟನ್‌ಗಳಷ್ಟು ಡೀಸೆಲನ್ನು ಪೈಪ್‌ಲೈನ್ ಮೂಲಕ ಪೂರೈಸಿದೆ' ಎಂದು ಇಲ್ಲಿನಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿ) ಅಧ್ಯಕ್ಷ ಮಹ್ಮದ್ ರೆಝನೂರ್ ರೆಹಮಾನ್ ಖಚಿತಪಡಿಸಿದ್ದಾರೆ.
`ಭಾರತದೊಂದಿಗೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಆ ಪ್ರಕಾರ ಭಾರತ ಪ್ರತಿ ವರ್ಷ ಬಾಂಗ್ಲಾಕ್ಕೆ ಪೈಪ್‌ಲೈನ್ ಮೂಲಕ 1,80,000 ಟನ್ ಡೀಸೆಲ್ ಪೂರೈಸಬೇಕಾಗಿದೆ. ಅದರ ಭಾಗವಾಗಿ ಮಂಗಳವಾರ 5 ಸಾವಿರ ಟನ್ ಡೀಸೆಲ್ ಬಂದು ತಲುಪಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಒಪ್ಪಂದದ ಪ್ರಕಾರ 6 ತಿಂಗಳ ಒಳಗೆ ಕನಿಷ್ಟ 90,000 ಟನ್ ಡೀಸೆಲನ್ನು ಭಾರತ ಪೂರೈಸಬೇಕು. 6 ತಿಂಗಳ ಕೋಟಾದ ಬಾಕಿ ತೈಲವು ಮುಂದಿನ 2 ತಿಂಗಳ ಒಳಗೆ ಆಮದಾಗುವ ನಿರೀಕ್ಷೆಯಿದೆ ಎಂದು ರೆಹಮಾನ್ ತಿಳಿಸಿದ್ದಾರೆ.






















