Home Advertisement
Home ನಮ್ಮ ಜಿಲ್ಲೆ ರಾಯಚೂರು ವಿದ್ಯುತ್ ಶಾರ್ಟ್ ಸರ್ಕ್ಯೂಟ್: 700ಕ್ಕೂ ಹೆಚ್ಚು ಕುರಿಗಳು ಭಸ್ಮ

ವಿದ್ಯುತ್ ಶಾರ್ಟ್ ಸರ್ಕ್ಯೂಟ್: 700ಕ್ಕೂ ಹೆಚ್ಚು ಕುರಿಗಳು ಭಸ್ಮ

0
12

ರಾಯಚೂರು: ಸಿಂಧನೂರು ತಾಲೂಕಿನ ಮುಕ್ಕುಂದಾ ಗ್ರಾಮದ ಹತ್ತಿರ ಕುರಿ ಸಾಕಾಣಿಕೆ ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ ಸುಮಾರು 700ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮುಕ್ಕುಂದಾ ಗ್ರಾಮದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಮದುಸೂಧನ್ ಎಂಬ ವ್ಯಕ್ತಿಯು ಬೃಹತ್ ಕುರಿ ಸಾಕಾಣಿಕೆ ಕೇಂದ್ರ ಮಾಡಿಕೊಂಡು ಬಂದಿದ್ದ. ಸಾಕಾಣಿಕೆ ಕೇಂದ್ರದಲ್ಲಿ 800 ಕುರಿಗಳು ಸಾಕಾಣಿಕೆ ಮಾಡುತ್ತಿದ್ದ. ಗುರುವಾರ ರಾತ್ರಿ ಏಕಾಏಕಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ 700ಕ್ಕೂ ಹೆಚ್ಚು ಕುರಿಗಳು ಮತ್ತು ಒಂದು ಟ್ರ್ಯಾಕ್ಟರ್ ಸುಟ್ಟು ಕರಕಲಾಗಿವೆ.