Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಕಾರ್ಮಿಕರ ಬೇಡಿಕೆ ಈಡೇರಿಕೆಗೆ BMS ಪ್ರತಿಭಟನೆ: ಪ್ರಧಾನಮಂತ್ರಿಗೆ ಮನವಿ

ಕಾರ್ಮಿಕರ ಬೇಡಿಕೆ ಈಡೇರಿಕೆಗೆ BMS ಪ್ರತಿಭಟನೆ: ಪ್ರಧಾನಮಂತ್ರಿಗೆ ಮನವಿ

0
95

ಮಂಗಳೂರು : ಭಾರತೀಯ ಮಜ್ದೂರ್ ಸಂಘ (BMS) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ವಿವಿಧ ಕಾರ್ಮಿಕರ ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ಪ್ರಧಾನಮಂತ್ರಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಮನವಿಯನ್ನು ಮಾನ್ಯ ಪ್ರಧಾನಮಂತ್ರಿ, ಕೇಂದ್ರ ಕಾರ್ಮಿಕ ಸಚಿವರು, ರಾಜ್ಯ ಮುಖ್ಯಮಂತ್ರಿ ಮತ್ತು ರಾಜ್ಯ ಕಾರ್ಮಿಕ ಸಚಿವರಿಗೆ ಉದ್ದೇಶಿಸಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಹತ್ಯೆಗೀಡಾದ ವಿದ್ಯಾರ್ಥಿ ಸಂಕೇತ್ ಮನೆಗೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ

ಅನಿಲ್ ಕುಮಾರ್ ನೇತೃತ್ವ: ಪ್ರತಿಭಟನೆಯ ನೇತೃತ್ವವನ್ನು ಬಿಎಮ್ಎಸ್ ಜಿಲ್ಲಾ ಅಧ್ಯಕ್ಷ ಹಾಗೂ ವಕೀಲರಾದ ಅನಿಲ್ ಕುಮಾರ್ ಯು ವಹಿಸಿದ್ದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾರ್ಮಿಕ ಸಂಹಿತೆಗಳನ್ನು ಸ್ವಾಗತಿಸಿದರೂ, ಅನೇಕ ಪ್ರಮುಖ ಸಮಸ್ಯೆಗಳು ಇಂದಿಗೂ ಬಾಕಿ ಉಳಿದಿವೆ ಎಂದು ಅವರು ಆರೋಪಿಸಿದರು.

ಪ್ರಮುಖ ಬೇಡಿಕೆಗಳು: EPS-95 ಕನಿಷ್ಠ ಪಿಂಚಣಿ ₹7,500ಕ್ಕೆ ಹೆಚ್ಚಳ ಹಾಗೂ ದರ ಏರಿಕೆ ಭತ್ಯೆ ಜಾರಿ, ESI ಮತ್ತು EPF ವೇತನ ಮಿತಿ ಹೆಚ್ಚಳ, ಆಶಾ, ಅಂಗನವಾಡಿ, ಮಧ್ಯಾಹ್ನ ಊಟ ಹಾಗೂ NHM ಯೋಜನಾ ಕಾರ್ಮಿಕರ ಗೌರವಧನ ಹೆಚ್ಚಿಸಿ ನಿಯಮಿತಗೊಳಿಸುವುದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿ, ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಬಾಕಿ ವೇತನ ತಕ್ಷಣ ಪಾವತಿ, ಕರ್ನಾಟಕ ರಸ್ತೆ ಸಾರಿಗೆ ನೌಕರರ 38 ತಿಂಗಳ ಬಾಕಿ ವೇತನ ಪಾವತಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಭ್ರಷ್ಟಾಚಾರ ಕುರಿತು ತನಿಖಾ ಸಮಿತಿ ರಚನೆ, ಕಾರ್ಮಿಕ ಸಂಹಿತೆಗಳ ತಿದ್ದುಪಡಿ ಒತ್ತಾಯ ಸೇರಿದಂತೆ ಪ್ರತಿಭಟನೆಯಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿರಿಸಲಾಯಿತು.

ಇದನ್ನೂ ಓದಿ: ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅಗ್ನಿ ಅವಘಡ

ವಿಶೇಷವಾಗಿ Industrial Relations Code, 2020 ಮತ್ತು Occupational Safety, Health and Working Conditions Code, 2020 ಕಾಯ್ದೆಗಳಲ್ಲಿನ ಕಾರ್ಮಿಕರ ಆತಂಕಗಳನ್ನು ತಿದ್ದುಪಡಿಸಲು ಒತ್ತಾಯಿಸಲಾಯಿತು. ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾರ್ಮಿಕರ ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವಾತ್ಮಕ ಹಾಗೂ ಕಾನೂನುಬದ್ಧ ಹೋರಾಟಗಳನ್ನು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಮನವಿ ಸ್ವೀಕಾರ: ಪ್ರತಿಭಟನೆಯ ಬಳಿಕ ಮನವಿಯನ್ನು ಅಪರ ಜಿಲ್ಲಾಧಿಕಾರಿ ರಾಜು ಕೆ ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಉಪ ಆಯುಕ್ತ ಅಂಕಿತ್ ಸಿಂಗ್ ಅವರಿಗೆ ಸಲ್ಲಿಸಲಾಯಿತು.

ಇದನ್ನೂ ಓದಿ: ಲಂಚ ಪ್ರಕರಣ: ಗಣಿ ಉಪನಿರ್ದೇಶಕ ಬಂಧನ – ದಾಳಿಯಲ್ಲಿ ₹4 ಕೋಟಿಗೂ ಹೆಚ್ಚು ನಗದು ಪತ್ತೆ

ಈ ಸಂದರ್ಭದಲ್ಲಿ ಬಿಎಂಎಸ್ ಸಮಿತಿಯ ಪದಾಧಿಕಾರಿಗಳಾದ ಸತೀಶ್ ಶೆಟ್ಟಿ, ಜಯರಾಜ್ ಸಾಲ್ಯಾನ್, ವಿಜಯಲಕ್ಷ್ಮಿ, ಗೋಪಾಲಕೃಷ್ಣ, ರೋಹಿತಾಶ್ವ, ಉದಯ ಕುಮಾರ್, ವಿಗ್ನೇಶ್, ವೈ. ಸುದಿಂದ್ರ, ನಿತ್ಯಾನಂದ ಪೈ, ರಂಜನ್, ಶಶಿಧರ್, ಉದಯ, ರವೀಂದ್ರ, ಶ್ರೀಮತಿ ದಿಲಾಕ್ಷಿ, ಶ್ರೀಮತಿ ಉಷಾ ರೂಪೇಶ್, ರಘುಪತಿ, ಹರೀಶ್ ಜಿ.ಕೆ ಸೇರಿದಂತೆ ವಿವಿಧ ವಲಯಗಳ ಕಾರ್ಮಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

Previous articleಶಿವಮೊಗ್ಗದಲ್ಲಿ ಹತ್ಯೆಗೀಡಾದ ವಿದ್ಯಾರ್ಥಿ ಸಂಕೇತ್ ಮನೆಗೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ
Next articleಹುಬ್ಬಳ್ಳಿ: ರಣಜಿ ಫೈನಲ್‌ನಲ್ಲಿ ಗಲಾಟೆ – ಮೈದಾನದಲ್ಲೇ ಕರ್ನಾಟಕದ ಆಟಗಾರನಿಗೆ ಡಿಚ್ಚಿ