Home Advertisement
Home ಸುದ್ದಿ ವಿದೇಶ ‘ಎಲ್ ಮೆಂಚೊ’ ಎನ್‌ಕೌಂಟರ್: ಮೆಕ್ಸಿಕೋದಲ್ಲಿ ಭುಗಿಲೆದ್ದ ಹಿಂಸಾಚಾರ – ಭಾರತೀಯರಿಗೆ ರಾಯಭಾರ ಕಚೇರಿ ಎಚ್ಚರಿಕೆ!

‘ಎಲ್ ಮೆಂಚೊ’ ಎನ್‌ಕೌಂಟರ್: ಮೆಕ್ಸಿಕೋದಲ್ಲಿ ಭುಗಿಲೆದ್ದ ಹಿಂಸಾಚಾರ – ಭಾರತೀಯರಿಗೆ ರಾಯಭಾರ ಕಚೇರಿ ಎಚ್ಚರಿಕೆ!

0
111

ಮೆಕ್ಸಿಕೋ: ಕುಖ್ಯಾತ ಮಾದಕವಸ್ತು ದೊರೆ Nemesio Oseguera Cervantes ಅಲಿಯಾಸ್ ‘ಎಲ್ ಮೆಂಚೊ’ ಹತ್ಯೆಯಾದ ಬಳಿಕ ಮೆಕ್ಸಿಕೋದಲ್ಲಿ ಭದ್ರತಾ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ (CJNG) ಮುಖ್ಯಸ್ಥನಾಗಿದ್ದ 59 ವರ್ಷದ ಒಸೆಗುರಾನನ್ನು, ಜಲಿಸ್ಕೊ ರಾಜ್ಯದ ಟಪಲ್ಪಾ ಪಟ್ಟಣದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಗಾಯಗೊಂಡು ಮೆಕ್ಸಿಕೊ ನಗರಕ್ಕೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾನೆ ಎಂದು ಮೆಕ್ಸಿಕೋ ರಾಷ್ಟ್ರೀಯ ರಕ್ಷಣಾ ಸಚಿವಾಲಯ ತಿಳಿಸಿದೆ.

ಅತನ ಬಂಧನ/ಹತ್ಯೆಗಾಗಿ ಅಮೆರಿಕ ಅಧಿಕಾರಿಗಳು 15 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಘೋಷಿಸಿದ್ದರು. ಮೆಕ್ಸಿಕನ್ ಸೇನೆ ಹೇಳಿಕೆಯ ಪ್ರಕಾರ, ದಾಳಿಯಲ್ಲಿ ಒಸೆಗುರಾ ಜೊತೆಗೆ ಆರು ಶಂಕಿತ ಕಾರ್ಟೆಲ್ ಸದಸ್ಯರು ಸಾವನ್ನಪ್ಪಿದ್ದು, ಮೂವರು ಸೈನಿಕರು ಗಾಯಗೊಂಡಿದ್ದಾರೆ. ಕಾರ್ಯಾಚರಣೆಗೆ ಮೆಕ್ಸಿಕೋ ಮಿಲಿಟರಿ ಗುಪ್ತಚರ ಮಾಹಿತಿಯ ಜೊತೆಗೆ ಅಮೆರಿಕದ ಅಧಿಕಾರಿಗಳ ಪೂರಕ ಮಾಹಿತಿ ಸಹಕಾರ ನೀಡಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ‘ಗುಲಾಮಗಿರಿಯ ಸಂಕೇತಗಳಿಂದ ಮುಕ್ತಿ’: ರಾಜಾಜಿ ಪ್ರತಿಮೆ ಇಂದು ರಾಷ್ಟ್ರಪತಿ ಭವನದಲ್ಲಿ ಅನಾವರಣ


ಹಲವು ರಾಜ್ಯಗಳಲ್ಲಿ ಹಿಂಸಾಚಾರ:
ಕಾರ್ಯಾಚರಣೆ ಸುದ್ದಿ ಬಹಿರಂಗವಾದ ಬಳಿಕ ಜಲಿಸ್ಕೊ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಾರ್ಟೆಲ್‌ಗಳ ಹಿಂಸಾಚಾರ ಭುಗಿಲೆದ್ದಿದೆ. ಟಪಲ್ಪಾ ಹಾಗೂ ಪಶ್ಚಿಮ ಜಲಿಸ್ಕೊ ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ರಸ್ತೆಗಳನ್ನು ಬಂದೂಕುಧಾರಿಗಳು ತಡೆದು, ಕಾರು–ಟ್ರಕ್‌ಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. ರಸ್ತೆ ತಡೆ, ಗುಂಡಿನ ಚಕಮಕಿ ಹಾಗೂ ದಹನ ಕೃತ್ಯಗಳಿಂದ ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಾಗಿದೆ.

ಮೆಕ್ಸಿಕೋದ ಅಧ್ಯಕ್ಷೆ Claudia Sheinbaum ನಾಗರಿಕರಿಗೆ ಶಾಂತವಾಗಿರಲು ಮನವಿ ಮಾಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವ, ರಾಜಕೀಯ ಚಾಣಕ್ಯ ಮುಕುಲ್ ರಾಯ್ ನಿಧನ

ಭಾರತೀಯರಿಗೆ ಎಚ್ಚರಿಕೆ ನೀಡಿದ Embassy of India: ಈ ನಡುವೆ, ಮೆಕ್ಸಿಕೋದಲ್ಲಿರುವ ಭಾರತೀಯರಿಗೆ Embassy of India in Mexico ಎಚ್ಚರಿಕೆ ಸೂಚನೆ ನೀಡಿದೆ. ಜಲಿಸ್ಕೊ (ಪ್ಯೂರ್ಟೋ ವಲ್ಲಾರ್ಟಾ, ಚಾಪಾಲಾ, ಗ್ವಾಡಲಜಾರಾ), ತಮೌಲಿಪಾಸ್ (ರೆಯ್ನೋಸಾ ಸೇರಿದಂತೆ), ಮಿಚೋಆಕಾನ್, ಗ್ವೆರೇರೊ ಹಾಗೂ ನುವೋ ಲಿಯೋನ್ ರಾಜ್ಯಗಳ ಕೆಲವು ಭಾಗಗಳಲ್ಲಿ ಭದ್ರತಾ ಕಾರ್ಯಾಚರಣೆಗಳು ಮತ್ತು ರಸ್ತೆ ತಡೆಗಳು ನಡೆಯುತ್ತಿರುವ ಹಿನ್ನೆಲೆ, ಅನಾವಶ್ಯಕ ಸಂಚಾರ ತಪ್ಪಿಸಿ ಸುರಕ್ಷಿತ ಸ್ಥಳದಲ್ಲೇ ಉಳಿಯುವಂತೆ ಸಲಹೆ ನೀಡಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ 911ಗೆ ಕರೆಮಾಡುವಂತೆ ಹಾಗೂ ತಮ್ಮ ಸ್ಥಳದ ಮಾಹಿತಿ ಕುಟುಂಬಸ್ಥರಿಗೆ ತಿಳಿಸುತ್ತಿರಲು ಸೂಚಿಸಲಾಗಿದೆ.

ಸಂಕಷ್ಟದಲ್ಲಿರುವ ಭಾರತೀಯ ನಾಗರಿಕರಿಗಾಗಿ ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಯನ್ನು +52 55 4847 7539 ಸಂಪರ್ಕಿಸಲು ತಿಳಿಸಿದೆ.

ಇತ್ತೀಚಿನ ಮಾಹಿತಿಯಂತೆ, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿ ರಸ್ತೆ ತಡೆಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ ಎಚ್ಚರಿಕೆ ಮುಂದುವರಿದಿದ್ದು, ನಾಗರಿಕರು ಜಾಗರೂಕರಾಗಿರಲು ಅಧಿಕಾರಿಗಳು ಮನವಿ ಮಾಡಿದ್ದಾರೆ.

Previous articleರಾಷ್ಟ್ರಪತಿ ಭವನದಲ್ಲಿ ಲುಟ್ಯೆನ್ಸ್ ಪ್ರತಿಮೆ ಬದಲು ರಾಜಾಜಿ ಪ್ರತಿಮೆ
Next articleಆರೋಗ್ಯ ಸೌಲಭ್ಯ ಹತ್ತನೇ ಗ್ಯಾರಂಟಿ ಆಗಿದೆ : DCM ಡಿ.ಕೆ.ಶಿವಕುಮಾರ್