ಭೂಪಾಲ್: ಮಧ್ಯಪ್ರದೇಶದ ಐಎಎಸ್ ಅಧಿಕಾರಿ ಅವಿ ಪ್ರಸಾದ್ ಎಂಬುವರು ತಮ್ಮ ಮೊದಲ ಇಬ್ಬರು ಪತ್ನಿಯರೊಂದಿಗೆ ವಿಚ್ಛೇದನ ಪಡೆದ ನಂತರ ಇತ್ತೀಚೆಗಷ್ಟೇ 3ನೇ ಮದುವೆಯಾಗಿದ್ದಾರೆ.
ವಿಶೇಷವೆಂದರೆ ಈ ಮೂವರೂ ಮಹಿಳೆಯರು ಐ.ಎ.ಎಸ್ ಅಧಿಕಾರಿಗಳೇ ಆಗಿದ್ದಾರೆ ಪ್ರಸ್ತುತ ಮಧ್ಯ ಪ್ರದೇಶದ ಉದ್ಯೋಗ ಖಾತ್ರಿ ಪರಿಷತ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿರುವ ಅವಿ ಪ್ರಸಾದ್, ರಾಜ್ಯ ಸಚಿವಾಲಯದ ಉಪ ಕಾರ್ಯದರ್ಶಿ ಅಂಕಿತಾ ಧಾಕ್ರೆಯವರನ್ನು ಫೆ. 11 ರಂದು 3ನೇ ಮದುವೆಯಾದರು. ಮೊದಲ ಮದುವೆ ಮಧ್ಯಪ್ರದೇಶದ ರಿಜು ಬಾಫ್ನಾ ಹಾಗೂ 2ನೇ ಮದುವೆ ಉತ್ತರ ಪ್ರದೇಶದ ಮಿಶಾ ಸಿಂಗ್‌ರೊಂದಿಗೆ ನಡೆದಿತ್ತು.





















