Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಫೆ. 20ರಿಂದ ಮೂರು ದಿನ ಉಡುಪ ಸಂಗೀತೋತ್ಸವ

ಫೆ. 20ರಿಂದ ಮೂರು ದಿನ ಉಡುಪ ಸಂಗೀತೋತ್ಸವ

0
29

ಬೆಂಗಳೂರು: ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಫೆ. 20, 21 ಮತ್ತು 22ರಂದು ಉಡುಪ ಸಂಗೀತೋತ್ಸವ ಆಯೋಜನೆಗೊಂಡಿದೆ. ನಿತ್ಯ ಸಂಜೆ 7ಕ್ಕೆ ನಡೆಯಲಿರುವ ಕಛೇರಿಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಗಾನ ಸುಧೆ ಹರಿಯಲಿದೆ.

ಫೆ. 20ರ ಸಂಜೆ 7ಕ್ಕೆ ಖ್ಯಾತ ಹಿಂದೂಸ್ಥಾನಿ ಗಾಯಕಿ ಬೇಗಂ ಪರ್ವೀನ್ ಸುಲ್ತಾನಾ ಗಾನಸುಧೆ ರಂಜಿಸಲಿದೆ. ಪಂಡಿತ್ ಡಾ. ರವೀಂದ್ರ ಕಾಟೋಟಿ (ಹಾರ್ಮೋನಿಯಂ) ಮತ್ತು ಓಜಸ್ ಆದ್ಯ ( ತಬಲಾ) ಸಾಥ್ ನೀಡಲಿದ್ದಾರೆ. ನಂತರ ಪುರ್ಬಯನ್ ಚಟರ್ಜಿ ಅವರ ಸಿತಾರ್ ವಾದನವಿದ್ದು, ಓಜಸ್ ಆದ್ಯ ತಬಲಾ ಸಹಕಾರವಿದೆ.

ಫೆ. 21ರ ಸಂಜೆ 6ಕ್ಕೆ ತಾಳವಾದ್ಯ ಕಛೇರಿಯಲ್ಲಿ ಪದ್ಮಶ್ರೀ ಪುರಸ್ಕೃತ ವಿದ್ವಾನ್ ತಿರುವಾಯೂರು ಭಕ್ತವತ್ಸಲಂ (ಮೃಗಂಗ) ನವೀನ್ ಶರ್ಮಾ (ಢೋಲಕ್) ಮತ್ತು ವಿಜಯ ಶ್ಯಾಮರಾವ್ ಚವ್ಹಾಣ್ (ಡೋಲ್ಕಿ) ವಾದನದಲ್ಲಿ ಶ್ರೋತೃಗಳನ್ನು ರಂಜಿಸಲಿದ್ದಾರೆ.

ಇದನ್ನೂ ಓದಿ: ಶಬರಿಮಲೆ ಮಹಿಳೆಯರ ಪ್ರವೇಶ: ಏ. 7ರಿಂದ ಅಂತಿಮ ವಿಚಾರಣೆ

ನಂತರ ವಿದುಷಿಯರಾದ ರಂಜನಿ ಮತ್ತು ಗಾಯತ್ರಿ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಜೃಂಭಿಸಲಿದೆ. ಫೆ. 22ರ ಸಂಜೆ 7ಕ್ಕೆ ಪಂಡಿತ್ ವಿಶ್ವಮೋಹನ ಭಟ್ ಅವರ ವೀಣಾವಾದನಕ್ಕೆ ವಿವಿಧ ವಾದ್ಯಗಳ ಲಹರಿಗಳು ಮೇಳೈಸಲಿವೆ.

ವಿದ್ವಾಂಸರಾದ ಶಶಾಂಕ ಸುಬ್ರಹ್ಮಣ್ಯ (ಕೊಳಲು), ಹರೀಶ ಶಿವರಾಮ ಕೃಷ್ಣನ್ (ಗಾಯನ), ದರ್ಶನ್ ದೋಷಿ (ಡ್ರಮ್ಸ್), ಶೆಲ್ಡನ್ ಡಿಸಿಲ್ವಾ (ಬಾಸ್ ಗಿಟಾರ್), ಮಂಜುನಾಥ ಸತ್ಯಶೀಲ್ (ಪರ್ಕೂಶನ್ಸ್), ರಾಹುಲ್ ವಾಡ್ವಾಣಿ (ಕೀ ಬೋರ್ಡ್) ಮತ್ತು ಹಿಮಾಂಶು ಮಹಾಂತ ತಬಲಾ ವಾದನ ಅನುರಣಿಸಲಿದೆ.

Previous articleಕಾಂಗ್ರೆಸ್​ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು: ಹೈಕೋರ್ಟ್ ತೀರ್ಪು
Next articleವಿದೇಶಿ ಮಹಿಳೆ ಮೇಲೆ ಅತ್ಯಾಚಾರ: ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ