Home Advertisement
Home ಕ್ರೀಡೆ ಭಾರತಕ್ಕೆ ಸೋಲಿನ ಭೀತಿ? ಜಿಂಬಾಬ್ವೆ ಗೆಲುವಿನ ಹಿಂದೆ ಅಡಗಿದೆ ಟೀಮ್ ಇಂಡಿಯಾದ ‘ಲಕ್ಕಿ’ ಇತಿಹಾಸ!

ಭಾರತಕ್ಕೆ ಸೋಲಿನ ಭೀತಿ? ಜಿಂಬಾಬ್ವೆ ಗೆಲುವಿನ ಹಿಂದೆ ಅಡಗಿದೆ ಟೀಮ್ ಇಂಡಿಯಾದ ‘ಲಕ್ಕಿ’ ಇತಿಹಾಸ!

0
43

ಕ್ರಿಕೆಟ್ ಜಗತ್ತಿನಲ್ಲಿ ಈಗ ಒಂದು ವಿಡಿಯೋ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಐಸಿಸಿ ಟಿ20 ವಿಶ್ವಕಪ್ 2026ರಲ್ಲಿ ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನು ಸೋಲಿಸುತ್ತದೆ ಎಂದು ಭವಿಷ್ಯ ನುಡಿದಿದ್ದ ವ್ಯಕ್ತಿಯ ಮಾತು ಈಗ ಅಕ್ಷರಶಃ ನಿಜವಾಗಿದೆ.

ಈ ಭವಿಷ್ಯವಾಣಿ ನಿಜವಾಗುತ್ತಿದ್ದಂತೆ ಅಭಿಮಾನಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಯಾಕೆಂದರೆ, ಅದೇ ವ್ಯಕ್ತಿ ಫೆಬ್ರವರಿ 15ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸೋಲುತ್ತದೆ ಎಂದು ಭವಿಷ್ಯ ನುಡಿದಿದ್ದಾನೆ!
ವೈರಲ್ ವಿಡಿಯೋದಲ್ಲಿರುವ ವ್ಯಕ್ತಿ ಈ ಟೂರ್ನಮೆಂಟ್‌ನ ಮೂರು ಪ್ರಮುಖ ‘ಅಪ್‌ಸೆಟ್’ಗಳ ಬಗ್ಗೆ ಊಹಿಸಿದ್ದಾನೆ.

ಮೊದಲನೆಯದಾಗಿ ಜಿಂಬಾಬ್ವೆ ಆಸ್ಟ್ರೇಲಿಯಾವನ್ನು ಸೋಲಿಸುವುದು (ಇದು ಈಗಾಗಲೇ ನಡೆದಿದೆ). ಎರಡನೆಯದಾಗಿ ನೇಪಾಳ ವೆಸ್ಟ್ ಇಂಡೀಸ್ ತಂಡವನ್ನು ಮಣಿಸುವುದು ಮತ್ತು ಮೂರನೆಯದಾಗಿ ಭಾರತ ಪಾಕಿಸ್ತಾನದ ಮುಂದೆ ಮಂಡಿಯೂರುವುದು. ಫೆಬ್ರವರಿ 15ರಂದು ಮುಂಬೈನಲ್ಲಿ ನಡೆಯುವ ಪಂದ್ಯದಲ್ಲಿ ನೇಪಾಳ ಗೆದ್ದರೆ, ನಂತರ ಕೊಲಂಬೊದಲ್ಲಿ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸುವುದು ಖಚಿತ ಎಂದು ಆತ ಹೇಳಿಕೊಂಡಿದ್ದಾನೆ.

ಆದರೆ, ಭಾರತೀಯ ಅಭಿಮಾನಿಗಳೇ ಸಮಾಧಾನದ ವಿಷಯವೊಂದಿದೆ! ಈ ಭವಿಷ್ಯವಾಣಿಗಿಂತಲೂ ಮಿಗಿಲಾದ ಒಂದು ರೋಚಕ ಇತಿಹಾಸ ಭಾರತದ ಪರವಾಗಿದೆ. ಅಂಕಿಅಂಶಗಳ ಪ್ರಕಾರ, ವಿಶ್ವಕಪ್‌ನಲ್ಲಿ ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದಾಗಲೆಲ್ಲಾ ಆ ವರ್ಷ ಭಾರತ ಚಾಂಪಿಯನ್ ಪಟ್ಟಕ್ಕೇರಿದೆ! 1983ರ ಏಕದಿನ ವಿಶ್ವಕಪ್ ಮತ್ತು 2007ರ ಉದ್ಘಾಟನಾ ಟಿ20 ವಿಶ್ವಕಪ್‌ನಲ್ಲೂ ಇದೇ ಮ್ಯಾಜಿಕ್ ನಡೆದಿತ್ತು. ಆಗಲೂ ಜಿಂಬಾಬ್ವೆ ಆಸೀಸ್ ಪಡೆಯನ್ನು ಮಣಿಸಿ ಆಘಾತ ನೀಡಿತ್ತು, ಅಂತಿಮವಾಗಿ ಭಾರತ ವಿಶ್ವಕಪ್ ಟ್ರೋಫಿ ಎತ್ತಿಹಿಡಿದಿತ್ತು.

ಹಾಗಾಗಿ, ಆ ಭವಿಷ್ಯಗಾರನ ಮಾತುಗಳು ಅರ್ಧ ನಿಜವಾದರೂ, ಅಂತಿಮವಾಗಿ ಇತಿಹಾಸ ಮರುಕಳಿಸಿ ಟ್ರೋಫಿ ಭಾರತದ ಪಾಲಾಗುವ ಸಾಧ್ಯತೆಗಳೇ ಹೆಚ್ಚಿವೆ ಎನ್ನಲಾಗುತ್ತಿದೆ. ಏನಾಗಲಿದೆ ಎಂಬುದು ಫೆಬ್ರವರಿ 15ರಂದು ನಿರ್ಧಾರವಾಗಲಿದೆ.

Previous articleಐತಿಹಾಸಿಕ ಕ್ಷಣ: ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ ಪ್ರಧಾನಿ ಮೋದಿ ವಿಮಾನ ಲ್ಯಾಂಡಿಂಗ್
Next articleಮುಂಬೈ: ಮೆಟ್ರೋ ಕಾಮಗಾರಿ ಅವಘಡ – ಪಿಲ್ಲರ್ ಸ್ಲ್ಯಾಬ್ ಕುಸಿದು ವಾಹನಗಳು ನಜ್ಜುಗುಜ್ಜು