Home Advertisement
Home ಸುದ್ದಿ ವಿದೇಶ ಬಾಂಗ್ಲಾದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್‌

ಬಾಂಗ್ಲಾದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್‌

0
22

ಢಾಕಾ: ಹದಿನೇಳು ವರ್ಷಗಳ ಗಡಿಪಾರು ನಂತರ ದೇಶಕ್ಕೆ ಮರಳಿದ 2 ತಿಂಗಳಲ್ಲಿ ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಪ್ರಧಾನಿಯಾಗಲಿದ್ದಾರೆ.

ಗುರುವಾರ ನಡೆದ ಚುನಾವಣೆಯಲ್ಲಿ ತಾರಿಖ್ ನೇತೃತ್ವದ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ) ಮೈತ್ರಿಕೂಟ 299 ಸ್ಥಾನಗಳ ಪೈಕಿ 212 ಸ್ಥಾನಗಳಲ್ಲಿ ಗೆದ್ದು ಭರ್ಜರಿ ವಿಜಯ ಸಾಧಿಸಿದೆ. ಎರಡನೇ ಸ್ಥಾನದಲ್ಲಿರುವ ಜಮಾತ್ ಕೇವಲ 77 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿದೆ. ಹೀಗಾಗಿ ತಾರೀಕ್ ಈಗ ಪ್ರಧಾನಿ ಆಗಲಿದ್ದಾರೆ.

ಗಮನಿಸಬೇಕಾದ ಸಂಗತಿಯೆಂದರೆ, ಮುಸ್ಲಿಂ ದೇಶವಾದ ಬಾಂಗ್ಲಾದೇಶದಲ್ಲಿ 35 ವರ್ಷಗಳ ನಂತರ ಪುರುಷರೊಬ್ಬರು ಪ್ರಧಾನಿಯಾಗುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಅಧಿಕಾರ ಸೂತ್ರ ಬೇಗಂ ಖಲೀದಾ ಜಿಯಾ ಅಥವಾ ಅವಾಮಿ ಲೀಗ್‌ನ ಶೇಖ್ ಹಸೀನಾ ನಡುವೆ ಕೈಬದಲಾಗುತ್ತಿತ್ತು.

ಖಲೀದಾ ಜಿಯಾ ಅಧಿಕಾರಾವಧಿ 2006ರಲ್ಲಿ ಅಂತ್ಯಗೊಂಡಿದ್ದು ಆನಂತರದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಿಎನ್‌ಪಿ ಅಧಿಕಾರಕ್ಕೇರುತ್ತಿದೆ.

Previous articleಶಾಸಕ ಬಸವರಾಜ ಶಿವಣ್ಣನವರಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು