Home Advertisement
Home ಸಿನಿ ಮಿಲ್ಸ್ ‘ರಕ್ಕಸಪುರದೋಳ್’ ಟ್ರೇಲರ್‌ಗೆ ಕಿಚ್ಚ, ಪ್ರೇಮ್‌ ಸಾಥ್

‘ರಕ್ಕಸಪುರದೋಳ್’ ಟ್ರೇಲರ್‌ಗೆ ಕಿಚ್ಚ, ಪ್ರೇಮ್‌ ಸಾಥ್

0
45

ಬೆಂಗಳೂರು: ನಿರ್ದೇಶಕ ರವಿ ಸಾರಂಗ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಕನ್ನಡ ಚಿತ್ರ ‘ರಕ್ಕಸಪುರದೋಳ್’ ಇದೇ ಬರುವ ಫೆಬ್ರವರಿ 6ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ರಾಜ್ ಬಿ. ಶೆಟ್ಟಿ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ಚಿತ್ರತಂಡ ಬಿಡುಗಡೆ ಮಾಡಿರುವ ಟ್ರೈಲರ್ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದು, ಆನಂದ್ ಆಡಿಯೋ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್‌ನಲ್ಲಿ ಗ್ರಾಮೀಣ ಹಿನ್ನೆಲೆ, ವಿಭಿನ್ನ ಕಥನ ಶೈಲಿ ಹಾಗೂ ರಾಜ್ ಬಿ. ಶೆಟ್ಟಿಯ ಹೊಸ ಅವತಾರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕದ ಸೊಗಡಿನ ‘ಹೌದ್ದೋ ಹುಲಿಯ’ 30ಕ್ಕೆ ಬಿಡುಗಡೆ

ಹಾಡುಗಳು ಈಗಾಗಲೇ ಜನಪ್ರಿಯ: ‘ರಕ್ಕಸಪುರದೋಳ್’ ಚಿತ್ರದ ಹಾಡುಗಳು ಬಿಡುಗಡೆಗೂ ಮುನ್ನವೇ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ವಿಶೇಷವಾಗಿ ‘ನೀನಾ ನೀನಾ’ ಹಾಗೂ ಇತ್ತೀಚೆಗೆ ಬಿಡುಗಡೆಯಾದ ‘ಸಿದ್ದಯ್ಯ ಸ್ವಾಮಿ ಬನ್ನಿ’ ಈ ಎರಡೂ ಹಾಡುಗಳು ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿವೆ. ಅದರಲ್ಲೂ ‘ಸಿದ್ದಯ್ಯ ಸ್ವಾಮಿ ಬನ್ನಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಟ್ರೆಂಡ್ ಆಗಿದ್ದು, ರೀಲ್ಸ್ ಹಾಗೂ ಶಾರ್ಟ್ ವೀಡಿಯೋಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ.

ಕಲಾವಿದರ ಬಳಗ ಮತ್ತು ಕಥೆಯ ಕುತೂಹಲ: ರಾಜ್ ಬಿ. ಶೆಟ್ಟಿ ಅವರ ಜೊತೆಗೆ ಈ ಚಿತ್ರದಲ್ಲಿ ಅನೇಕ ಅನುಭವೀ ಮತ್ತು ಯುವ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ಯಾವ ರೀತಿಯ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಕಾಣಿಸಿಕೊಳ್ಳುತ್ತಾರೆ? ಕಥೆ ಯಾವ ಸಾಮಾಜಿಕ ಅಥವಾ ಭಾವನಾತ್ಮಕ ಅಂಶಗಳನ್ನು ಒಳಗೊಂಡಿದೆ? ಎನ್ನುವ ಪ್ರಶ್ನೆಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ.

ಇದನ್ನೂ ಓದಿ: ಡೈಲಾಗ್ ರೈಟರ್ ಪ್ರಶಾಂತ್ ರಾಜಪ್ಪ ನಿರ್ದೇಶನಕ್ಕೆ ಪದಾರ್ಪಣೆ

‘ಸು ಫ್ರಮ್ ಸೋ’, ‘45’ ಹಾಗೂ ‘ಲ್ಯಾಂಡ್ ಲಾರ್ಡ್’ ಸಿನಿಮಾಗಳ ನಂತರ ರಾಜ್ ಬಿ. ಶೆಟ್ಟಿಯವರಿಂದ ಬರುತ್ತಿರುವ ಈ ಚಿತ್ರವು ಯಾವ ರೀತಿಯ ಹೊಸ ಅನುಭವ ನೀಡಲಿದೆ ಎಂಬ ನಿರೀಕ್ಷೆ ಸಿನಿರಸಿಕರಲ್ಲಿ ಗಟ್ಟಿಯಾಗಿದೆ.

ಫೆಬ್ರವರಿ 6ಕ್ಕೆ ಬಿಡುಗಡೆಗೆ : ಎಲ್ಲಾ ವಿಭಾಗಗಳಲ್ಲೂ ಗಮನ ಸೆಳೆದಿರುವ ‘ರಕ್ಕಸಪುರದೋಳ್’ ಸಿನಿಮಾ ಫೆಬ್ರವರಿ 6ರಂದು ತೆರೆಗೆ ಬರಲಿದ್ದು, ರಾಜ್ ಬಿ. ಶೆಟ್ಟಿಯವರನ್ನು ಮತ್ತೊಮ್ಮೆ ವಿಭಿನ್ನ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Previous articleರಾಜೀನಾಮೆ ಕುರಿತು ಸದನದಲ್ಲಿ ಕೆ.ಜೆ. ಜಾರ್ಜ್‌ ಸ್ಪಷ್ಟನೆ
Next articleಕೌಟುಂಬಿಕ ಕಲಹ: ಮಾವನಿಂದ 4 ತಿಂಗಳ ಗರ್ಭಿಣಿ ಸೊಸೆಯ ಕೊಲೆ