ಬಳ್ಳಾರಿ: ನಗರದಲ್ಲಿ ಈಚೆಗೆ ನಡೆದ ಬಿಜೆಪಿ ಸಮಾವೇಶದ ಭಾಷಣದಲ್ಲಿ ಪೋಕ್ಸೋ ಸಂತ್ರಸ್ತೆಯ ವಿವರ ಪ್ರಸ್ತಾಪಿಸಿರುವುದಕ್ಕೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಸಂತ್ರಸ್ತೆ ಹಾಗೂ ಕುಟುಂಬಸ್ಥರ ಕ್ಷಮೆಯಾಚಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮಾತಿನ ಭರದಲ್ಲಿ ಬಾಲಕಿಯ ವಿವರ ಬಹಿರಂಗಪಡಿಸಿರುವೆ. ಆ ಸಂತ್ರಸ್ತೆಯೂ ನನ್ನ ಮಗಳಿದ್ದಂತೆ, ಆ ಕುಟುಂಬಕ್ಕೆ ಜತೆಗಿದ್ದು ನ್ಯಾಯ ಕೊಡಿಸುವೆ ಎಂದು ಹೇಳಿದರು.
ಇದನ್ನೂ ಓದಿ: ವೃದ್ಧ ದಂಪತಿ ಸಾವು ಪ್ರಕರಣಕ್ಕೆ ಟ್ವಿಸ್ಟ್: ಅನಸ್ತೇಷಿಯಾ ಕೊಟ್ಟು ಕೊಲೆ
ಬ್ಯಾನರ್ ಗಲಾಟೆಯಲ್ಲಿ ರಾಜಶೇಖರ ಎಂಬ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿನಿಂದ ಮೃತಪಟ್ಟಿದ್ದಾನೆ. ಈಗಾಗಲೇ ಸಾವಿಗೆ ಸಂಬಂಧಪಟ್ಟ ವಿಡಿಯೋ ಹಾಗೂ ಅಗತ್ಯ ದಾಖಲೆಗಳನ್ನು ಸಿಐಡಿ ಅಧಿಕಾರಿಗಳಿಗೆ ನೀಡಲಾಗಿದೆ. ಆದರೆ, ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರ ಸಿಐಡಿಗೆ ವಹಿಸಿದ್ದೇವೆ, ಎಲ್ಲವೂ ಮುಗಿದಿದೆ ಎಂಬುದಾಗಿ ಅಂದುಕೊಂಡಿದ್ದಾರೆ. ಶಾಸಕ ಜಿ. ಜನಾರ್ದನರೆಡ್ಡಿ ಮನೆಯ ಮೇಲೆ ದಾಳಿ ಬಗ್ಗೆ ನಿರಂತರವಾಗಿ ಹೋರಾಟ ಮಾಡಲಿದ್ದೇವೆ ಎಂದರು.
ರಾಜ್ಯದ ಅಬಕಾರಿ ಇಲಾಖೆಯ ಭ್ರಷ್ಟಚಾರ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಮೀರಿಸುವಂತಿದೆ ಎಂದು ಟೀಕಿಸಿದರು.























