ಆಂಗ್ಲ ಭಾಷೆಯಲ್ಲಿ ಕಾಂತಾರ ದರ್ಶನ

0
64

ಬೆಂಗಳೂರು: ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ಅವರ ಮಹತ್ವಾಕಾಂಕ್ಷೆಯ ಸಿನಿಮಾ ‘ಕಾಂತಾರ – ಚಾಪ್ಟರ್ 1’ ಈಗಾಗಲೇ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ. ಇದೀಗ ಸಿನಿಮಾ ವಿಶ್ವಮಟ್ಟದಲ್ಲಿ ತನ್ನ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದೆ. ‘ಕಾಂತಾರ ಚಾಪ್ಟರ್ – 1’ ಚಿತ್ರದ ಇಂಗ್ಲಿಷ್ ಆವೃತ್ತಿ ಈ ಅಕ್ಟೋಬರ್ 31ರಂದು ಬಿಡುಗಡೆಯಾಗಲಿದೆ. ಈ ಮೂಲಕ ಭಾರತ ಮಾತ್ರವಲ್ಲದೆ ವಿದೇಶದ ಪ್ರೇಕ್ಷಕರಿಗೂ ಈ ಚಿತ್ರವನ್ನು ತಲುಪಿಸಲು ತಯಾರಿ ಪೂರ್ಣಗೊಂಡಿದೆ.

ಹೊಂಬಾಳೆ ಫಿಲ್ಮ್ಸ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಿತವಾಗಿರುವ ಈ ಸಿನಿಮಾ, ‘ಕಾಂತಾರ’ ಚಿತ್ರದ ಮೂಲ ಕಥೆಯ ಹಿಂದಿನ ಪೀಳಿಗೆಗೆ ಸಂಬಂಧಿಸಿದ ಪೌರಾಣಿಕ ಹಿನ್ನೆಲೆಯುಳ್ಳ ಕಥೆಯನ್ನು ಹೇಳುತ್ತದೆ. ರಿಷಬ್ ಶೆಟ್ಟಿ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿರುವುದರ ಜೊತೆಗೆ ಕಥೆ, ಸಂಭಾಷಣೆ ಮತ್ತು ನಿರ್ದೇಶನವನ್ನೂ ನಿರ್ವಹಿಸಿದ್ದಾರೆ.

ಕನ್ನಡ ಆವೃತ್ತಿಯ ಟ್ರೈಲರ್ ಬಿಡುಗಡೆಯಾದ ಕ್ಷಣದಿಂದಲೇ ಸಿನಿಮಾ ಕುರಿತು ಅಭಿಮಾನಿಗಳ ಉತ್ಸಾಹ ಗಗನಕ್ಕೇರಿತ್ತು. ಈಗ ಇಂಗ್ಲಿಷ್ ಆವೃತ್ತಿ ಬಿಡುಗಡೆಯ ಸುದ್ದಿ ಹೊರಬಿದ್ದ ಹಿನ್ನೆಲೆಯಲ್ಲಿ ವಿಶ್ವದ ಪ್ರೇಕ್ಷಕರೂ ಈ ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ.

‘ಕಾಂತಾರ – 1’ ಚಿತ್ರವು ಭಾರತೀಯ ಸಿನೆಮಾ ಇತಿಹಾಸದಲ್ಲಿ ವಿಶಿಷ್ಟವಾದ ಪ್ರಯೋಗವೆಂದು ಪರಿಗಣಿಸಲಾಗಿದೆ. ಪೌರಾಣಿಕತೆ, ಭಕ್ತಿ ಮತ್ತು ನೈಸರ್ಗಿಕ ಅಂಶಗಳ ಸಂಯೋಜನೆಯ ಮೂಲಕ ಈ ಸಿನಿಮಾ ಹೊಸ ರೀತಿಯ ಚಿತ್ರಕಾವ್ಯವನ್ನು ಪ್ರಸ್ತುತಪಡಿಸುವ ನಿರೀಕ್ಷೆಯಿದೆ.

ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್‌ನ ಯಶಸ್ವಿ ಚಿತ್ರಗಳಾದ ಕೆಜಿಎಫ್ ಸರಣಿಯ ನಂತರ, ‘ಕಾಂತಾರ – 1’ ಚಿತ್ರವೂ ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಶಕ್ತಿಯನ್ನು ತೋರಿಸಲು ಸಜ್ಜಾಗಿದೆ.

Previous article“ಮದುವೆ ಆಗಬೇಕಿದ್ದರೆ ಮುಸ್ಲಿಂ ಆಗು”: ಬೆಂಗಳೂರಿನಲ್ಲಿ ಪ್ರೀತಿಯ ಹೆಸರಲ್ಲಿ ಯುವತಿಗೆ ವಂಚನೆ
Next articleಬಿಜೆಪಿ ಭ್ರಷ್ಟಾಚಾರ ಮಹಾಭಾರತಕ್ಕಿಂತ ದೊಡ್ಡದು: ಅಶೋಕ್ ವಿರುದ್ಧ ಖರ್ಗೆ ವಾಗ್ದಾಳಿ

LEAVE A REPLY

Please enter your comment!
Please enter your name here