ಶಿವಮೊಗ್ಗ ಜನರಿಗೆ ಸಿಹಿಸುದ್ದಿ ಒಂದಿದೆ. ಭಾರತೀಯ ರೈಲ್ವೆ ರೈಲು ಸಂಖ್ಯೆ 16221 ಕುವೆಂಪು ಎಕ್ಸ್‌ಪ್ರೆಸ್ ವೇಳಾಪಟ್ಟಿ ಪರಿಷ್ಕರಣೆ ಮಾಡಿದೆ. ನವೆಂಬರ್ 2, 2025ರಿಂದ ಜಾರಿಗೆ ಬರುವಂತೆ ಇದು ಜಾರಿಗೆ ಬರಲಿದೆ.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ಎಂದು ಹೇಳಿದ್ದಾರೆ.
ರೈಲು ಸಂಖ್ಯೆ 16221 ಕುವೆಂಪು ಎಕ್ಸ್‌ಪ್ರೆಸ್ ತಾಳಗುಪ್ಪದಿಂದ ಹೊರಡುವ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಇದಕ್ಕಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ.ಸೋಮಣ್ಣಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಪರಿಷ್ಕರಣೆಗೊಂಡ ವೇಳಾಪಟ್ಟಿ ಪ್ರಕಾರ ರೈಲು ತಾಳಗುಪ್ಪದಿಂದ 5.50, ಶಿವಮೊಗ್ಗದಿಂದ 7.55, ಬೀರೂರು 9.35, ಮೈಸೂರು 15.30 ತಲುಪಲಿದೆ ಎಂದು ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದ್ದಾರೆ. ಈ ವೇಳಾಪಟ್ಟಿ ಪರಿಷ್ಕರಣೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಬೀರೂರು ನಿಲ್ದಾಣಕ್ಕೆ ತೆರಳಿ (ಧಾರವಾಡ-ಬೆಂಗಳೂರು) ಸಿದ್ದಗಂಗಾ ಎಕ್ಸ್‌ಪ್ರೆಸ್ ಹತ್ತಲು ಸಹಕಾರಿಯಾಗಲಿದೆ.
ಈ ವೇಳಾಪಟ್ಟಿ ಪರಿಷ್ಕರಣೆಯಿಂದ ಬೆಂಗಳೂರು ನಗರಕ್ಕೆ ಸಂಚಾರ ನಡೆಸಲು ಶಿವಮೊಗ್ಗ ಜನರಿಗೆ ಸಹಾಯಕವಾಗಲಿದೆ ಎಂದು ಸಂಸದರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪರಿಷ್ಕೃತ ವೇಳಾಪಟ್ಟಿ ವಿವರ
- ತಾಳಗುಪ್ಪ 5.50 ರೈಲು ಹೊರಡಲಿದೆ
- ಸಾಗರ 06.08/ 610
- ಅಡ್ಢೇರಿ 6.26/ 6.27
- ಆನಂದಪುರ 6.40/ 6.42
- ಕೆಂಚನಲು ಹಾಲ್ಟ್ 6.54/ 6.55
- ಅರಸಾಳು 7.00/ 7.01
- ಕುಂಸಿ 7.17/ 7.18
- ಹಾರನಹಳ್ಳಿ 7.25/ 7.26
- ಕೊನಾಗಳ್ಳಿ 7.31/ 7.32
- ಶಿವಮೊಗ್ಗ ಟೌನ್ 7.50/ 7.55
- ಶಿವಮೊಗ್ಗ (ವಿದ್ಯಾ ನಗರ) 08.01/ 08.02
- ಭದ್ರಾವತಿ 8.18/ 8.20