ವಿಜಯನಗರ: ಜೇಡಿಮಣ್ಣಿನಿಂದ ಮನಮೋಹಕ ಸಿದ್ಧಿವಿನಾಯಕ ಸಿದ್ಧ

0
62
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;

ಕೂಡ್ಲಿಗಿ: ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಗೆ ಪಟ್ಟಣದ ಚಿತ್ರಗಾರ ಮಲ್ಲೇಶ ಕುಟುಂಬ ತಿಂಗಳಿನಿಂದ ಸಿದ್ಧತೆ ನಡೆಸಿದೆ. ಕುಟುಂಬದ ಸದಸ್ಯರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ 3 ರಿಂದ 6 ಅಡಿ ಗಣಪತಿ ಮೂರ್ತಿಗಳು, ಚಿಕ್ಕ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುವುದು ತಲೆತಲಾಂತರದಿಂದ ಬಂದ ಕಾಯಕ.

ಅಯ್ಯನಕಟ್ಟೆ ಮಣ್ಣು: ಪಟ್ಟಣದ ಅಯ್ಯನಕಟ್ಟೆಯಿಂದ 2 ರಿಂದ 3 ಟ್ರ್ಯಾಕ್ಟರ್ 4 ಸಾವಿರ ರೂ.ಗೆ ಜೇಡಿ ಮಣ್ಣು ತರಿಸಿಕೊಂಡು ಸ್ವಚ್ಛಗೊಳಿಸುತ್ತಾರೆ. ಮಡಿಕಟ್ಟಿ ನೀರು ನಿಲ್ಲಿಸಿದ ನಂತರ, ಹತ್ತಿ ಸೇರಿಸಿ ಒಂದು ಹದಕ್ಕೆ ಬರುವವರೆಗೂ, ಜಜ್ಜುವುದು, ನಾದುವುದು ನಡೆಯುತ್ತದೆ. ಹೀಗೆ, ತಯಾರದ ಮಣ್ಣು ನುಣ್ಣಗೆ, ಜಿಗುಟಿನಿಂದ ಕೂಡಿರುತ್ತದೆ. ಮಣ್ಣಿಗೆ ಪೂಜೆ ನೆರವೇರಿಸಿ ಗಣೇಶ ಮೂರ್ತಿಗಳನ್ನು ತಯಾರಿಸಲು ಬಳಸಲಾಗುತ್ತದೆ.

ಅಜ್ಜ, ಅಪ್ಪಂದಿರ ಕಾಲದಿಂದಲೂ ಮಣ್ಣನ್ನು ಹದಮಾಡುವ ಜಾಣ್ಮೆ ರಕ್ತಗತವಾಗಿ ಬಂದಿದೆ ಎಂಬುದು ಹರಪನಹಳ್ಳಿ ಕಿತ್ತೂರು ಚನ್ನಮ್ಮ ವಸತಿ ಶಾಲೆಯ ಕಲಾ ಶಿಕ್ಷಕ ಪಟ್ಟಣದ ಚಿತ್ರಗಾರ ಸಿ. ಕೊಟೇಶ ಅವರ ಮಾತಾಗಿದೆ. ಮಣ್ಣು ಪರೀಕ್ಷಿಸಿದ ಮೇಲೆ, ಮನೆಯ ಆವರಣದಲ್ಲಿ ಸಂಗ್ರಹಿಸಲಾಗುತ್ತದೆ. ಸಂಪ್ರದಾಯದಂತೆ ಜೋಡಿ ಬಸವಣ್ಣಗಳು, ನಾಗದೇವತೆಗಳು ಸೇರಿದಂತೆ ಇತರೆ ಕಾರ್ಯಗಳಿಗೆ ಜೇಡಿಮಣ್ಣು ಅವಶ್ಯವಾಗಿರುತ್ತದೆ.

ಪರಿಸರ ಸ್ನೇಹಿ ಗಣಪಗಳು: ಸುಲಭವಾಗಿ ನೀರಿನಲ್ಲಿ ಕರಗಬಲ್ಲ ವಸ್ತುಗಳನ್ನು ಬಳಸುವುದರಿಂದ, ಪರಿಸರ ಸ್ನೇಹಿ ಮೂರ್ತಿಗಳಾಗಿರುತ್ತವೆ. ವಾಟರ್ ಬೇಸ್ ಕಲರ್‌ಗಳನ್ನು ಬಳಕೆ ಮಾಡುತ್ತಾರೆ. ಚಿಕ್ಕ ಗಣಪತಿಗಳನ್ನು ಅಚ್ಚುಗಳೊಂದಿಗೆ 300 ರಿಂದ 400 ರ ವರೆಗೆ ಕರದಲ್ಲಿ ರೂಪಗೊಂಡು ಮೈ ದಳೆಯುತ್ತವೆ.

ಗಣೇಶ ಈ ಆಕಾರದಲ್ಲಿರಲಿ ಎಂದು ಮುಂಗಡ ಹಣದೊಂದಿಗೆ 3 ರಿಂದ 6 ಅಡಿಗಳ ಗಣೇಶನನ್ನು ನಿರ್ಮಿಸುವಂತೆ ಜನರು ಕಾಯ್ದಿರಿಸುತ್ತಾರೆ. ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ತಯಾರಿಸಲು ತೆಂಗಿನ ನಾರು, ಒಣ ಹುಲ್ಲು ಬಳಸಿಕೊಂಡು ಬೇಕಾದ ಎತ್ತರಕ್ಕೆ ನಿರ್ಮಿಸಿಕೊಳ್ಳುತ್ತಾರೆ. ನಂತರ ಹದವಾದ ಜೇಡಿಮಣ್ಣನ್ನು ಮೆತ್ತಿ ನಿರ್ದಿಷ್ಟ ಆಕಾರಕ್ಕೆ ತರಲಾಗುತ್ತದೆ.

ಕೊನೆಯಲ್ಲಿ ಬಣ್ಣವನ್ನು ಅಚ್ಚುಕಟ್ಟಾಗಿ ಕಾಣುವಂತೆ ಬ್ರಷ್, ಸಿಂಪರಣೆಯೊಂದಿಗೆ ಆಕರ್ಷಕವಾಗಿ ಮೂಡಿಸಿ, ಅಂತಿಮವಾಗಿ ಕಣ್ಣುಗಳನ್ನು ಮೂಡಿಸುತ್ತಾರೆ. ಹೀಗೆ, ತಯಾರಾದ ದೊಡ್ಡ ಗಣೇಶ ಮೂರ್ತಿಗಳು 10 ಸಾವಿರ ದವರೆಗೂ, ಚಿಕ್ಕಮೂರ್ತಿಗಳು 300 ರಿಂದ 400 ರೂ. ವರೆಗೆ ಮಾರಾಟವಾಗುತ್ತವೆ.

“ಈ ಬಾರಿ ಆಕರ್ಷಕವಾಗಿ ಕಾಣಲು ಪರ್ಲ ಬಣ್ಣದಿಂದ ಮುತ್ತಿನಂತೆ ಗಣೇಶ ಮೂರ್ತಿಗಳು ಹೊಳೆಯುವಂತಹ ಬಣ್ಣವನ್ನು ನೀಡಲಾಗಿದೆ. ನೀರಿನಲ್ಲಿ ವೀಲಿನವಾಗುವುದರಿಂದ, ಪರಿಸರ ಸ್ನೇಹಿಯಾಗಿರುತ್ತದೆ. ತಲೆತಲಾಂತರದಿಂದಲೂ, ಪ್ಲಾಸ್ಟರ್ ಆಫ್ ಪ್ಯಾರಿಸ್ ಪುಡಿ, ರಾಸಾಯನಿಕ ಬಣ್ಣ ಉಪಯೋಗಿಸುವುದಿಲ್ಲ, ಪೂಜನೀಯ ಶ್ರೇಷ್ಠತೆಗೆ ಭಂಗ ತರುವ ಕಾರ್ಯ ಎಸಗದಂತೆ ಪೂರ್ವಿಕರು ನಡೆಸಿಕೊಂಡು ಬಂದಿರುವುದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.” ಎಂದು ಕಲೆ ಕೌಶಲ್ಯಗಾರ ಮಲ್ಲೇಶ ಚಿತ್ರಗಾರ ಹೇಳಿದರು.

filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (0.49062502, 0.49062502); modeInfo: ; sceneMode: Night; cct_value: 0; AI_Scene: (0, -1); aec_lux: 0.0; hist255: 0.0; hist252~255: 0.0; hist0~15: 0.0;
Previous articleಧರ್ಮಸ್ಥಳ ಪ್ರಕರಣ: ಎನ್‌ಐಎಯಿಂದ ತನಿಖೆಗೆ ವಿಎಚ್‌ಪಿ ಆಗ್ರಹ
Next articleಮಂಗಳೂರು: ರುಶಭ್ ರಾವ್‌ಗೆ ‘ಸೂಪರ್ ಟ್ಯಾಲೆಂಟ್ ಪ್ರಶಸ್ತಿ’

LEAVE A REPLY

Please enter your comment!
Please enter your name here