ಧರ್ಮರಾಜ್ಯ ಸಂಸ್ಥಾಪಿಸಿದ ಪರಶುರಾಮ

ಪರಶುರಾಮ ದೇವರು ನಮ್ಮೆಲ್ಲರ ಮೇಲೆ ಅನುಗ್ರಹ ಮಾಡುವುದಕ್ಕೆ ಅವತಾರವನ್ನು ಮಾಡಿ, ಎಷ್ಟು ದೊಡ್ಡ ಉಪಕಾರವನ್ನು ಮಾಡಿದ್ದಾರ ಎಂತಹ ಸಂದೇಶಗಳನ್ನು ನೀಡಿದ್ದಾರೆ.
ಹಿಂದೆ ತ್ರೇತಾಯುಗದಲ್ಲಿ, ದ್ವಾಪರಯುಗದಲ್ಲಿ ಈ ರೀತಿಯಾಗಿ ಪರಶುರಾಮ ದೇವರು ಅನುಗ್ರಹ ಮಾಡಿದ್ದರು ಎಂದು ತಿಳಿಯಬೇಡಿ. ಇವತ್ತಿಗೂ ನಮ್ಮ ನಿಮ್ಮೆಲ್ಲರಲ್ಲಿ ಅಂತರ್ಯಾಮಿಯಾಗಿದ್ದು ನಮಗೆ ಅನುಗ್ರಹ ಮಾಡುವ ಮಹಾನುಭಾವರು. ಪರಶುರಾಮ ದೇವರ ಪಿತೃಭಕ್ತಿ ಮಾತೃಭಕ್ತ ಅದ್ಭುತವಾದದ್ದು. ಯಾವ ರೀತಿ ತಾಯಿಯ ಸೇವೆಯನ್ನು ಮಾಡಬೇಕು ತಂದೆಯ ಸೇವೆಯನ್ನು ಮಾಡಬೇಕು ಎಂದು ಜಗತ್ತಿಗೆ ತೋರಿಸಿದ ಮಹಾನುಭಾವರು ಪರಶುರಾಮರು.
ಶ್ರೀರಾಮಚಂದ್ರ ಪ್ರಭು ಕೂಡ ಹಾಗೆಯೇ ತನ್ನ ತಂದೆಯ ಮಾತನ್ನು ಪರಿಪಾಲಿಸುವುದಕ್ಕೆ ಅರಣ್ಯಕ್ಕೆ ಹೋಗಿ, ಪಿತೃವಾಕ್ಯ ಪರಿಪಾಲಕ ದುರಂಧರ ಎಂದು ತಾನು ಪ್ರಸಿದ್ಧಾಗಬೇಕು ಎಂದು ಜಗತ್ತಿಗೆ ತಿಳಿಸಿಕೊಟ್ಟ ಮಹಾನುಭಾವರು. ತಾನೇ ಜಗತ್ತಿಗೆ ಪಿತನಾದರೂ, ಎಲ್ಲ ಪಿತೃಗಳ ಪಿತೃ ಆಗಿದ್ದರು. ತನಗೆ ತಂದೆ ಯಾರಿಲ್ಲದಿದ್ದರೂ, ತಾನೊಬ್ಬ ಮಗ ಎಂದು ಅನಿಸಿಕೊಂಡು ತಂದೆ ಸೇವೆ ಹೇಗೆ ಮಾಡಬೇಕು ಎಂದು ತೋರಿಸಿಕೊಟ್ಟಿದ್ದಾರೆ ಶ್ರೀ ರಾಮಚಂದ್ರ. ಅದರಂತೆ ಪರಶುರಾಮರು ಕೂಡ. ತಾಯಿಯೇ ಏನು ಅಪರಾಧ ಮಾಡಿದ ಹಾಗೆ ಅವಳಲ್ಲಿ ಪ್ರಚೋದನೆ ಮಾಡಿ ಮಾಡಿಸಿ ಅದಕ್ಕಾಗಿ ತಂದೆ ಆಜ್ಞೆ ಮಾಡುವಂತೆ ಪ್ರಚೋದಿಸಿ. ಸರಸದ ಅಣ್ಣ ತಮ್ಮಂದಿರ ತಾಯಿಯ ರುಂಡ ಕತ್ತರಿಸಿ ಪಿತೃ ವಚನ ಪಾಲಕ ಪರಶುರಾಮ. ತತ್ವ ಎಷ್ಟು ತಿಳಿಯಬೇಕೆಂದರೆ ತಂದೆ ತಾಯಿಗಳ ಸೇವೆಯನ್ನು ಮಾಡಬೇಕು ಅನ್ನೋದು ಇದರೊಳಗಿನ ತಥ್ಯ. ದೇವಸ್ಥಾನಕ್ಕೆ ಹೋದಾಗ ತಂದೆ ತಾಯಿಗಾಗಿ ಬೇಡುವ ಎಷ್ಟು ಜನರಿದ್ದಾರೆ.? ಅದಕ್ಕೊಂದು ವೇದಿಕೆ ನಿರ್ಮಾಣ ಮಾಡಿ ತೋರಿಸಿದ ಪರಶುರಾಮ ದೇವರು. ಅಖಂಡ ಬಹುಮಂಡಲದ ಏಕಚಕ್ರಾಧಿಪತಿಯಾಗಿ ಮೆರೆಯಬಹುದಿತ್ತು. ಆ ವರವನ್ನು ಕೇಳಲಿಲ್ಲ. ತಾಯಿ ಬದುಕಬೇಕು ಅಣ್ಣಂದರು ಬದುಕಿ ಸುಖವಾಗಿರಬೇಕು ಅವಿಭಕ್ತ ಕುಟುಂಬದ ಸಂದೇಶವನ್ನು ಪರಶುರಾಮ ದೇವರು ಹೇಳುತ್ತಾರೆ.
ಎಲ್ಲರಲ್ಲಿಯೂ ಏಕಮನಸ್ಸು ಇರಬೇಕು ಭಿನ್ನಾಭಿಪ್ರಾಯ ಇರಬಾರದು ಎಂದು ಗೊರವನ್ನಾಗಿ ಕೇಳಿದ ಎಲ್ಲರೂ ಪ್ರೀತಿಯಿಂದ ಬಾಳಬೇಕು ಜೊತೆಯಾಗಿ ಬಳಬೇಕು ಎನ್ನುವಂತ ಸಂದೇಶವನ್ನು ಪರುಶುರಾಮರು ಕೊಟ್ಟರು. ನಾವು ಅದರೊಳಗಿನ ತಥ್ಯವನ್ನು ತಿಳಿಯಬೇಕು ೨೧ ಬಾರಿ ಭೂಪ್ರದಕ್ಷಣೆ ಮಾಡಿ ಎಲ್ಲ ದೃಷ್ಟ ಕ್ಷತ್ರಿಯಗಳನ್ನು ಸಂಹಾರ ಮಾಡಿ ಧರ್ಮರಾಜ್ಯವನ್ನು ಸಂಸ್ಥಾಪನೆ ಮಾಡಿದ ಧೀರಬ್ರಾಹ್ಮಣ ಎಂದರೆ ಪರಶುರಾಮರು.