Home Advertisement
Home ತಾಜಾ ಸುದ್ದಿ ಜಮೀರ್ ಜಿಲ್ಲೆಗೆ ಕಾಲಿಟ್ಟರೆ ‘ಚಪ್ಪಲಿ ಸೇವೆ’

ಜಮೀರ್ ಜಿಲ್ಲೆಗೆ ಕಾಲಿಟ್ಟರೆ ‘ಚಪ್ಪಲಿ ಸೇವೆ’

0
131

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ರೈತರ, ಸ್ಮಶಾನ, ಮಠದ ಆಸ್ತಿಯನ್ನು ವಕ್ಫ್ ಹೆಸರಿನಲ್ಲಿ ಕಬಳಿಸಲು ಸಂಚು ರೂಪಿಸಿ ನೋಟಿಸ್ ಜಾರಿಗೊಳಿಸುತ್ತಿರುವ ರಾಜ್ಯದ ವಕ್ಫ್‌ ಸಚಿವ ಜಮೀರ್ ಅಹ್ಮದ್ ದ.ಕ. ಜಿಲ್ಲೆಗೆ ಕಾಲಿಟ್ಟರೆ “ಚಪ್ಪಲಿಸೇವೆ” ಮಾಡಲು ಹಿಂಜರಿಯುವುದಿಲ್ಲ ಎಂದು ಬಿಜೆಪಿ ಯುವ ನೇತಾರ ವಿಕಾಸ್ ಪುತ್ತೂರು ಎಚ್ಚರಿಸಿದ್ದಾರೆ.
ಬಂಟ್ವಾಳ ಬಿ.ಸಿ.ರೋಡಿನ ಮೇಲ್ಸೇತುವೆಯ ಅಡಿಭಾಗದಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಲ್ಯಾಂಡ್ ಜಿಹಾದ್ ಹಾಗೂ ವಕ್ಫ್‌ ಅಕ್ರಮವನ್ನು ಖಂಡಿಸಿ ನಡೆದ ಪ್ರತಿಭನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಹಿಂದೂಗಳ ಪರವಾದ ಕೆಲಸ ಮಾಡಿಲ್ಲ, ಹುಬ್ಬಳ್ಳಿ ಠಾಣೆಗೆ ಬೆಂಕಿ ಹಚ್ಚಲು ಮುಂದಾದ ಮತ್ತು ಪೊಲೀಸರ ಮೇಲೆ ಕಲ್ಲು ತೂರಿ ದಾಂಧಲೆ ನಡೆಸಿರುವ ಆರೋಪಿಗಳಿಗೆ ಮತ್ತು ಭಯೋತ್ಪದಕ ಕೃತ್ಯದಲ್ಲಿ ತೊಡಗಿಸಿದವರಿಗೆ ಸಿದ್ದಾರಾಮಯ್ಯ ಸಂಪುಟ ಕ್ಲೀನ್‌ಚಿಟ್ ನೀಡುವ ಕಾರ್ಯ ಮಾಡಿದೆ ಎಂದು ವಿಕಾಸ್ ಪುತ್ತೂರು ಟೀಕಾಪ್ರಹಾರಗೈದರು.

Previous articleವಿಚಾರಣೆಗೆ ಹಾಜರಾಗುವೆ
Next articleಸಬ್ ರಿಜಿಸ್ಟ್ರಾರ್ ಕಚೇರಿ ಸುತ್ತ ಅನುಮಾನದ ಹುತ್ತ..!