ಇಡೀ ಜಗತ್ತಿನ ಸಕಲ ಜನರಿಗೂ ಧರ್ಮದ ಮಾರ್ಗವನ್ನು ಬೋಧನೆ ಮಾಡತಕ್ಕ ಉನ್ನತ ಮಟ್ಟದ ಆಲೋಚನಾಪೂರ್ಣ, ಪರಿಪೂರ್ಣ ತತ್ವಜ್ಞಾನದ ಭಂಡಾರ ಒದಗಿಸುವ ಏಕೈಕ ದೇಶ ನಮ್ಮ ಭಾರತ. ನಮ್ಮ ಭಾರತೀಯ ಸಂಸ್ಕೃತಿ ನಮ್ಮ ವೈದಿಕ ಸನಾತನ ಧರ್ಮ. ಇಂತಹ ನಮ್ಮ ದೇಶದ ಮೂಲ ವೇದಗಳಿಗೆ ಅತ್ಯುನ್ನತ ಸ್ಥಾನ ನೀಡಿ ತಲೆಯೆತ್ತಿ ನೋಡುವಂತೆ ಮಾಡಿದ ಮಹಾನುಭಾವರು ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು. ಇಂತಹ ವೇದ, ತತ್ವಜ್ಞಾನ, ಪರಿಪೂರ್ಣ ವಾಙ್ಮ್ಮಯವನ್ನು ಪಕ್ಕಕ್ಕೆ ಸರಿಸಿದರೆ ದೇಶದ ಸಂಸ್ಕೃತಿಯ ಗತಿ ಏನಾಗಬೇಕು ಎಂದು ಯೋಚನೆ ಮಾಡಿ.
ಭಾರತ ನಿಂತಿದ್ದೇ ಧರ್ಮಗಳ ಮೇಲೆ. ಧರ್ಮ ನಿಂತಿರುವುದು ವೇದಗಳ ಮೇಲೆ. ಶ್ರೀಮದ್ ಆಚಾರ್ಯರಿಗೆ ಇಡೀ ಭಾರತ ದೇಶ ತಲೆಬಾಗಿ ನಮಸ್ಕರಿಸಬೇಕು. ಕಾರಣ ಶ್ರೀಮದ್ ಆಚಾರ್ಯರು ಈ ಭಾರತೀಯ ಸಂಸ್ಕೃತಿಯ ಮೂಲ ವೇದಗಳ ಪ್ರಾಮಾಣ್ಯವನ್ನು ಅಕ್ಷರವಾಗಿ ಪ್ರತಿಪಾದಿಸಿ ಹೇಳಿದ್ದಾರೆ. ವೇದದ ಯಾವುದೇ ಅಕ್ಷರವು ದಿವ್ಯ ಸಂದೇಶ ನೀಡ ಹೊರಟಿದೆ ಎಂದು ಗಗನ ಎತ್ತರದಲ್ಲಿ ವೇದಗಳನ್ನು ಸಮರ್ಪಣೆ ಮಾಡಿದ ಸರ್ವಜ್ಞ ಪುರುಷರು ಶ್ರೀಮದಾಚಾರ್ಯರು..
ಭಗವಂತನ ಒಂದೊಂದು ಗುಣಗಳನ್ನು ಕೊಂಡಾಡುವುದಕ್ಕೆ ವೇದಗಳಲ್ಲಿ ಒಂದೊಂದು ಮಂತ್ರಗಳಿವೆ. ಇಂತಹ ಅದ್ಭುತವಾದ ವೇದ ನಖ ಶಿಖಾಂತ ಸುವರ್ಣ ಪುತ್ಥಳಿ ಇದ್ದಂತೆ.. ವೇದಗಳನ್ನು ಪ್ರಮಾಣ ಎಂದು ಒಪ್ಪಿಕೊಳ್ಳುವ ಅನೇಕ ದಾರ್ಶನಿಕರಿದ್ದಾರೆ.
ಕೃತಿಗಳಿಗೂ ಸ್ಮೃತಿಗಳಿಗೂ ಪ್ರಾಮಾಣ್ಯವನ್ನು ಒಪ್ಪುವವರೆಲ್ಲ.. ಆದರೆ ದೇವರಿಗೆ ಎಂಟೆ ಗುಣಗಳು ಎಂದು ಹೇಳುತ್ತಾರೆ. ಅನಂತ ಗುಣಗಳಿವೆ ಎಂದು ಕೊಂಡಾಡುವ ವೇದಗಳು ಇವೆ. ಸ್ಮೃತಿಗಳಿವೆ. ಅವುಗಳನ್ನು ಪ್ರಮಾಣ ಎಂದು ಒಂದು ಕಡೆ ಹೇಳಿ ಅವುಗಳಲ್ಲಿ ಹೇಳಿದಂತಹ ಭಗವಂತನ ಪರಿಪೂರ್ಣತ್ವವನ್ನು ಅಲ್ಲಗಳೆದರೆ..
ವೇದಗಳನ್ನು ಪ್ರಮಾಣ ಅಂತ ಅವರು ಹೇಳಿದ್ದನ್ನು ನಂಬುವುದು ಹೇಗೆ? ಭಗವಂತನ ಅದ್ಭುತವಾದ ವರ್ಣನೆಗಳನ್ನು ಮಾಡಲು ಹೊರಟ ಭಾಗವತ, ರಾಮಾಯಣ, ಮಹಾಭಾರತಗಳು ಒಂದು ಕಡೆ ರಾಶಿಯಾಗಿ ಬಿದ್ದಿವೆ. ಕಣ್ಣು ಅರಳಿಸಿ, ನೋಡಿ ಬುದ್ಧಿ ಅರಳಿಸಿ ಪೂರ್ಣವಾದ ಹೃದಯದಿಂದ ಆ ಸಿದ್ಧಾಂತವನ್ನು ನಂಬಿ ಅರ್ಥ ಮಾಡಿಕೊಂಡು ಆಮೇಲೆ ಶ್ರೀಮದ್ ಆಚಾರ್ಯರ ಬಗ್ಗೆ ಅಭಿಮಾನ ಮಾಡಿ.
ಇಂತಹ ಮಹಾಭಾರತ ರಾಮಾಯಣಗಳು ನಮ್ಮ ದೇಶದ ಧರ್ಮ ಗ್ರಂಥಗಳು. ಇವುಗಳನ್ನು ತಲೆಯ ಮೇಲೆ ಇಟ್ಟುಕೊಂಡು ಇಡೀ ಜಗತ್ತು ಕುಣಿಯುತ್ತದೆ ಆದರೆ ಅದು ಅರ್ಥಹೀನ. ಅಲ್ಲಿ ಹೇಳಿದಂತಹ ಭಗವಂತನ ಗುಣಗಳನ್ನು ಒಪ್ಪುವುದಿಲ್ಲ, ಭಗವಂತನ ಕಾರುಣ್ಯವನ್ನು ಕರ್ತೃತ್ವವನ್ನು ಹೊಗಳುವುದಿಲ್ಲ.
ಹಾಗಾದರೆ ನಮ್ಮ ದೇಶದ ಮುಲಭೂತ ಸಂಸ್ಕೃತಿಗೆ ವೇದಗಳಿಗೂ, ರಾಮಾಯಣ ಮಹಾಭಾರತ ಭಾಗವತಗಳಿಗೆ ಪ್ರಾಮಾಣ್ಯವನ್ನು ಒಪ್ಪಿ, ಅದರಲ್ಲಿ ಹೇಳಿದಂತಹ ಎಲ್ಲ ಸತ್ವಗಳು ಸತ್ಯವೆಂದು ಸಮರ್ಥನೆ ಮಾಡಿ ತೋರಿಸಿದವರು ಶ್ರೀಮದಾಚಾರ್ಯರು. ಇದು ಸಿಂಹದಾಚಾರ್ಯರು ಮಾಡಿದಂತಹ ದೊಡ್ಡ ಕೊಡುಗೆ. ಭಾರತೀಯ ಸಂಸ್ಕೃತಿ ಕೊಡುಗೆ ವಿಶ್ವಕ್ಕೆ ಇದೆ. ಆದುದರಿಂದ ಶ್ರೀಮದಾಚಾರ್ಯರು ಕೊಟ್ಟ ಉಡುಗೊರೆ ನಮ್ಮ ವಿಶ್ವಕ್ಕೆ ಹಿರಿದಾದುದು.