ಹಾವೇರಿ: ಕಬ್ಬಿಗೆ ಸೂಕ್ತ ದರ ನಿಗದಿ ಸಂಬಂಧ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಜಿಲ್ಲಾಡಳಿತದ ನಡುವೆ ನಡೆದ ನಿರ್ಣಾಯಕ ಮಾತುಕತೆ ವಿಫಲವಾದ ಬಳಿಕ ಸೋಮವಾರ ಹಾವೇರಿಯ ದೇವಗಿರಿ ಬಳಿಯಿರುವ ಜಿಲ್ಲಾಧಿಕಾರಿ(ಡಿಸಿ) ಕಚೇರಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಸಭೆಯ ಬಳಿಕ ರೈತರಿಗೆ 3600 ಬದಲಾಗಿ ಸಕ್ಕರೆ ಕಾರ್ಖಾನೆ ಮಾಲೀಕರು 3225 ರೂಪಾಯಿ ದರ ಕೊಡಲು ಒಪ್ಪಿಗೆ ನೀಡಿದ್ದಾರೆ.
ಕಬ್ಬಿಗೆ ಸೂಕ್ತ ಬೆಲೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಹಾಗೂ 25 ರೈತ ಮುಖಂಡರ ಪಾಲ್ಗೊಂಡಿದ್ದರು. ಸತತ 14 ತಾಸುಗಳ ಕಾಲ ಸಭೆ ನಡೆಸಿದ ಸಭೆಯಲ್ಲಿ ಚೂನ್ನಪ್ಪ ಪೂಜೇರಿ ಬರಗಾಲ ಸಮಯದಲ್ಲಿ ರೈತರಿಗೆ ಕಷ್ಟ ಇದೆ.
ರಾಜ್ಯಾದ್ಯಂತ 3600 ರೂ ಬೆಲೆ ನಿಗದಿಯಾಗಿದೆ ನೀವು ಕೊಡಬೇಕು ಎಂದು ಆಗ್ರಹಿಸಿದಾರೆ. ರೈತರಿಗೆ ಕಬ್ಬಿನ ತೂಕದಲ್ಲಿ ಮೋಸ ಆಗ್ತಿದ್ದು ಅದನ್ನ ಸರಿಪಡಿಸುವಂತೆ ಸಚಿವರಿಗೆ ತಿಳಿಸಿದರು.
ಸಕ್ಕರೆ ಕಾರ್ಖಾನೆ ಮಾಲೀಕರು ಹಾವೇರಿ ಕಬ್ಬಿನ ರಿಕವರಿ ಕಡಿಮೆ ಇದೆ ಬೆಳಗಾವಿ ಜಿಲ್ಲೆಯ ರಿಕವರಿ 11 ರ ಮೇಲಿದೆ ಹಾವೆರಿಯಲ್ಲಿ 9.4 ರಿಕವರಿ ಇದೆ ಆದ ಕಾರಣ ಮೂರು ಕಾರ್ಖಾನೆ ಮಾಲೀಕರು 3225 ರೂಪಾಯಿ ದರ ನೀಡುವುದಾಗಿ ತಿಳಿಸಿದರು.
ಆದರೆ ಸಚಿವ ರುದ್ರಪ್ಪ ಲಮಾಣಿ ಸಭೆಯಲ್ಲಿ ಕೈ ಮುಗಿದು ಕೇಳಿಕೊಂಡ ಬಳಿಕ ರಿಕವರಿ ಕಡಿಮೆ ಕಾರಣ ದರ 3225 ರೂಪಾಯಿ ತಾತ್ಕಾಲಿಕವಾಗಿ ಅನಿವಾರ್ಯವಾಗಿ ರೈತರು ಒಪ್ಪಿಕೊಂಡು ಚಳುವಳಿ ಹಿಂಪಡೆದಿದ್ದಾರೆ.
ಆದರೆ ಚೂನ್ನಪ್ಪ ಪೂಜೇರಿ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆ ಆಗಬೇಕು ರೈತರಿಗೆ ಕಬ್ಬಿನ ತೂಕದಲ್ಲಿ ಮೋಸ ಆಗ್ತಿದ್ದು ಅದನ್ನ ಸರಿಪಡಿಸಿ ಹಾಗೂ ರಿಕವರಿ ಸಂಬಂಧ ಪ್ರತ್ಯೇಕ ಲ್ಯಾಬ್ ಸ್ಥಾಪಿಸುವಂತೆ ಮತ್ತು ಇದಕ್ಕಾಗಿ 500 ಕೋಟಿ ರೂ. ಮೀಸಲಿಡಬೇಕೆಂದು ಸಚಿವರಿಗೆ ಆಗ್ರಹಿಸಿದ್ದಾರೆ.





















